ಪತಿಯ ಕುಡಿತದ ಚಟಕ್ಕೆ ಪತ್ನಿಯ ಭಾರಿ ವಿರೋಧ. ಕುಡಿದು ಮನೆಗೆ ಬಂದು ಮತ್ತೆ ಕುಡಿಯಲು ಮುಂದಾಗಿದ್ದಾನೆ.ಇತ್ತ ಪತ್ನಿ ಗರಂ ಆಗಿದ್ದಾಳೆ. ಇಷ್ಟೆ ನೋಡಿ, ಆಕ್ರೋಶಗೊಂಡ ಪತಿ, ಕೈಗೆ ಸಿಕ್ಕ ಬಡಿಗೆಯಲ್ಲಿ ಪತ್ನಿಯನ್ನು ಸಾಯಿಸಿದ್ದಾನೆ. ಆದರೆ ಕೇಸು ದಾಖಲಾಗುತ್ತಿದ್ದಂತೆ ಈತನ ಮತ್ತೊಂದು ಅಸಲಿ ಮುಖ ಬಯಲಾಗಿದೆ. ಕೊಲೆಯಾಗಿರುವುದು ಈತನ 12ನೇ ಪತ್ನಿ.

ಜಾರ್ಖಂಡ್(ಏ.05): ಎಣ್ಣೆ ಏಟಿಗೆ ಪತ್ನಿ ಜೊತೆ ಜಗಳ, ಹತ್ಯೆ ಸೇರಿದಂತೆ ಹಲವು ಭೀಕರ ಘಟನೆಗಳು ನಡೆದಿರುವುದು ವರದಿಯಾಗಿದೆ. ಕುಡಿಯಲು ಹಣ ನೀಡಿಲ್ಲ ಅನ್ನೋ ಕಾರಣಕ್ಕೆ ಪೋಷಕರನ್ನೇ ಹತ್ಯೆಗೈದ ಹಲವು ಉದಾಹರಣೆಗಳಿವೆ. ಇಂತದ್ದೆ ಘಟನೆಯೊಂದು ಜಾರ್ಖಂಡ್‌ನ ಬೋಕಾರೋದಲ್ಲಿ ನಡೆದಿದೆ. ಆದರೆ ಈ ಹತ್ಯೆ ಬಳಿಕ ಮತ್ತೊಂದು ಅಧ್ಯಾಯ ತೆರೆದುಕೊಂಡಿದೆ. ಕುಡಿದು ಮನೆಗೆ ಬಂದ ಪತಿ, ಮತ್ತೆ ಮನೆಯಲ್ಲಿ ಕುಡಿತ ಶುರುಮಾಡಿದ್ದಾನೆ. ಇದು ಪತ್ನಿಯ ಪಿತ್ತ ನೆತ್ತಿಗೇರಿಸಿದೆ. ಇದನ್ನು ವಿರೋಧಿಸಿದ್ದಾಳೆ. ಆದರೆ ಎಣ್ಣೆ ಎಟಿನಲ್ಲಿ ಆಕ್ರೋಶಗೊಂಡ ಪತಿ, ಪತ್ನಿಯನ್ನು ಬಡಿಗೆಯಿದ ಹೊಡೆದು ಸಾಯಿಸಿದ್ದಾನೆ. ಮಕ್ಕಳು ಮನೆಗೆ ಬಂದಾಗ ಭೀಕರ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಈತನ ಮತ್ತೊಂದು ಪುರಾಣ ಬಯಲಾಗಿದೆ. ಮೃತ ಮಹಿಳೆ, ಈತನ 12ನೇ ಪತ್ನಿ ಅನ್ನೋದು ಬೆಳಕಿಗೆ ಬಂದಿದೆ.

ಬೋಕಾರದ ರಾಮ ಚಂದ್ರ ತುರಿ 20 ವರ್ಷಗಳ ಹಿಂದೆ ಸಾವಿತ್ರಿ ದೇವಿಯನ್ನು ಮದುವೆಯಾಗಿದ್ದ. ಇವರಿಗೆ ನಾಲ್ವರು ಮಕ್ಕಳಿದ್ದಾರೆ. ಇದರಲ್ಲಿ ಹಿರಿಯ ಮಗ ಹೈದಾರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ಮೂವರು ಮಕ್ಕಳು ಸಂಬಂಧಿಕರ ಮದುವೆಗಾಗಿ ತೆರಳಿದ್ದರು. ಮನೆಯಲ್ಲಿ ರಾಮ ಚಂದ್ರ ತುರಿ ಹಾಗೂ ಸಾವಿತ್ರಿ ದೇವಿ ಮಾತ್ರ ಇದ್ದರು. ಕೆಲಸಕ್ಕೆ ತೆರಳಿದ್ದ ರಾಮ ಚಂದ್ರ ತುರಿ ಮನೆಗೆ ಹಿಂತಿರುಗುವಾಗ ಕಂಠಪೂರ್ತಿ ಕುಡಿದು ಬಂದಿದ್ದಾನೆ.

ಮದ್ಯಪ್ರಿಯರ ಪಾನಕ್ಕೆ ಬ್ರೇಕ್‌: ಈ ನಾಲ್ಕು ದಿನ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ.!

ಮನೆಗೆ ಬಂದ ರಾಮ ಚಂದ್ರ ತುರಿ ಮತ್ತೆ ಕುಡಿಯಲು ಆರಂಭಿಸಿದ್ದಾನೆ. ಇಷ್ಟೇ ಅಲ್ಲ ಕುಡಿತಕ್ಕೆ ಹಣ ನೀಡುವಂತೆ ಪತ್ನಿಯನ್ನು ಕೇಳಿದ್ದಾಳೆ. ಮೊದಲೆ ಪತಿಯ ಕುಡಿತಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸಾವಿತ್ರಿ ದೇವಿ, ನಶೆಯಲ್ಲಿ ತೇಲಾಡುತ್ತಿರುವ ಪತಿ ವಿರುದ್ಧ ಗರಂ ಆಗಿದ್ದಾಳೆ. ಮತ್ತೆ ಕುಡಿಯಬೇಡಿ. ಸಾಕು ನಿಲ್ಲಿಸಿ ಎಂದು ಗದರಿಸಿದ್ದಾರೆ. ಪತಿ ರಾಮ ಚಂದ್ರ ತುರಿ ಆಕ್ರೋಶ ಹೆಚ್ಚಾಗಿದೆ. ಕೈಗೆ ಸಿಕ್ಕ ಬಡಿಗೆಯಲ್ಲಿ ಪತ್ನಿ ಮೇಲೆ ದಾಳಿ ಮಾಡಿದ್ದಾನೆ. ರಾಮ ಚಂದ್ರ ತುರಿ ಹೊಡೆತಕ್ಕೆ ಪತ್ನಿ ಉಸಿರು ನಿಂತಿದೆ. ಪತ್ನಿ ರಕ್ತದ ಮಡುವಿನಲ್ಲೇ ಬಿದ್ದು ಪ್ರಾಣ ಬಿಟ್ಟಿದ್ದಾರೆ.

ಇತ್ತ ಮದುವೆಗೆ ಹೋಗಿದ್ದ ಮಕ್ಕಳು ಮರಳಿದಾಗ ಭೀಕರ ಹತ್ಯೆ ಬೆಳಕಿಗೆ ಬಂದಿದೆ. ಈ ದೃಶ್ಯ ನೋಡಿ ಸಹಾಯಕ್ಕಾಗಿ ಕೂಗಿದ್ದಾರೆ.ಹತ್ತಿರದ ಮನೆಯವರು ಆಗಮಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಆರೋಪಿ ರಾಮ ಚಂದ್ರ ತುರಿಯನ್ನು ಬಂಧಿಸಿದ್ದಾರೆ. ಇದೇ ವೇಳೆ ಪಂಚಾಯಿತಿಯಿಂದ ರಾಮ ಚಂದ್ರ ತುರಿ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ಮೃತ ಮಹಿಳೆ ರಾಮ ಚಂದ್ರ ತುರಿಯ 12ನೇ ಪತ್ನಿ ಅನ್ನೋದು ಬೆಳಕಿಗೆ ಬಂದಿದೆ.

Alcohol Addiction: ಮದ್ಯ ಕುಡಿಯೋರಿಗೆ ಕೋಪ ಮೂಗಿನ ತುದಿಯಲ್ಲಿರುತ್ತಾ?

ಇದಕ್ಕೂ ಮೊದಲಿನ 11 ಪತ್ನಿಯರು ಇದೇ ಕುಡಿತದ ಕಾರಣಕ್ಕೆ ದೂರವಾಗಿದ್ದಾರೆ. ವಿಪರೀತ ಕುಡಿತದ ಕಾರಣ ಹಲವರು ಜಗಳವಾಡಿ ಬಿಟ್ಟುಹೋಗಿದ್ದಾರೆ. ಇನ್ನು ಕೆಲ ಪತ್ನಿಯರು ಸದ್ದಿಲ್ಲದ ಪರಾರಿಯಾಗಿದ್ದಾರೆ. ಈ ಘಟನೆಯಿಂದ ಕುಡಿತ ಬಿಟ್ಟಿದ್ದ ರಾಮ ಚಂದ್ರ ತುರಿ ಮತ್ತೆ ಸಾವಿತ್ರಿ ದೇವಿ ಮದುವೆಯಾಗಿ ಕುಡಿತ ಆರಂಭಿಸಿದ್ದ. ಇದೀಗ ಪೊಲೀಸರ ಅತಥಿಯಾಗಿದ್ದಾನೆ.