Asianet Suvarna News Asianet Suvarna News

ಕುಟುಂಬದ ಎಂಟು ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ವ್ಯಕ್ತಿಯೊಬ್ಬ ತನ್ನ ಕುಟುಂಬದ ಎಂಟು ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ. ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಪೂರ್ಣ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

Man kills eight members of his family with axe in Chhindwara, later hangs himself Vin
Author
First Published May 29, 2024, 11:33 AM IST

ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಕುಟುಂಬದ ಎಂಟು ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ. ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೋದಲ್ ಕಚರ್ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಮಹುಲ್ಜಿರಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಕುಟುಂಬದ ಒಂದು ಮಗು ಓಡಿಹೋದ ಕಾರಣ ಬದುಕುಳಿಯುವಲ್ಲಿ ಯಶಸ್ವಿಯಾಗಿದೆ. ಕುಟುಂಬದ ಸದಸ್ಯರು ಪಕ್ಕದ ಮನೆಗಳಲ್ಲಿ ವಾಸವಾಗಿದ್ದರು. ಆದರೆ ಯಾರಿಗೂ ಮನೆಯೊಳಗೆ ಇಂಥಾ ಘಟನೆ ನಡೆಯುತ್ತಿರುವುದು ಗಮನಕ್ಕೆ ಬಂದಿಲ್ಲ.

ಬೆಳಗಿನ ಜಾವ 2 ರಿಂದ 3 ಗಂಟೆಯ ನಡುವೆ ಈ ಘಟನೆ ನಡೆದಿದೆ ಎನ್ನಲಾಗಿದೆ.  ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಗ್ರಾಮಕ್ಕೆ ಚಿಂದ್ವಾರ ಕಲೆಕ್ಟರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸೇರಿದಂತೆ ಹಿರಿಯ ಅಧಿಕಾರಿಗಳು ಧಾವಿಸಿದರು. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅನ್ಯಕೋಮಿನ ವ್ಯಕ್ತಿ ಮದುವೆಯಾಗಿದ್ದ ಮಹಿಳೆ ಸೇರಿ, ಒಂದೇ ಕುಟುಂಬದ ಮೂವರು ಶವವಾಗಿ ಪತ್ತೆ!

ಆರೋಪಿಯನ್ನು ದಿನೇಶ್ ಎಂದು ಗುರುತಿಸಲಾಗಿದ್ದು, ಇತ್ತೀಚೆಗಷ್ಟೇ ವಿವಾಹವಾದ ಆದಿವಾಸಿ ವ್ಯಕ್ತಿ. ಪೊಲೀಸರ ಪ್ರಕಾರ, ದಿನೇಶ್ ಕತ್ತು ಹಿಸುಕುವ ಮೊದಲು ಕೊಲೆಗಳನ್ನು ನಡೆಸಲು ಕೊಡಲಿಯನ್ನು ಬಳಸಿದ್ದಾನೆ.  ಘಟನೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಎಂದು ಸಹ ಹೇಳಲಾಗ್ತಿದೆ.

ಪೊಲೀಸರು ಮನೆಯ ಆವರಣದಲ್ಲಿ ಮೃತರ ಶವಗಳನ್ನು ಪತ್ತೆ ಹಚ್ಚಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆಯು ಸ್ಥಳೀಯ ಜನರಲ್ಲಿ ಆತಂಕವನ್ನುಂಟು ಮಾಡಿದೆ.

ಹೆಂಡ್ತಿಗೆ ಗೊತ್ತಾಯ್ತು ಅಂತ ಇಟ್ಟುಕೊಂಡವಳ ಕತೆ ಮುಗಿಸಿದ ಪಾಪಿ ಗಂಡ!

Latest Videos
Follow Us:
Download App:
  • android
  • ios