*   ಮೂವರು ಆರೋಪಿಗಳ ಬಂಧನ*   ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು*   ಮರದ ತುಂಡಿನಿಂದ ಮನಬಂದಂತೆ ಸಂಜಯ್‌ ಮೇಲೆ ಹಲ್ಲೆ 

ಬೆಂಗಳೂರು(ಸೆ.18): ಕೇವಲ 20 ಸಲುವಾಗಿ ಗೆಳೆಯನನ್ನು ಕೊಲೆ ಮಾಡಿದ್ದ ಚಿಂದಿ ಆಯುವ ಮೂವರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ದೀಪಕ್‌, ಜಾರ್ಖಂಡ್‌ನ ಹೇಮಂತ್‌, ತಮಿಳುನಾಡಿನ ಮಾದೇಶ್‌ ಬಂಧಿತರಾಗಿದ್ದು, ನಾಲ್ಕು ದಿನಗಳ ಹಿಂದೆ ಮದ್ಯದ ಅಮಲಿನಲ್ಲಿ ಅಸ್ಸಾಂ ಮೂಲದ ಸಂಜಯ್‌ ಅಲಿಯಾಸ್‌ ಅಸ್ಸಾಮಿ (30) ಎಂಬಾತನನ್ನು ಆರೋಪಿಗಳು ಕೊಂದು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮರಾ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆಗೆ ಮುನ್ನ ರೌಡಿ ಅಟ್ಟಾಡಿಸಿದ ವಿಡಿಯೋ ವೈರಲ್‌: ಬೆಚ್ಚಿಬಿದ್ದ ಜನತೆ

5 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿಗಳು, ಜೀವನ ನಿರ್ವಹಣೆಗಾಗಿ ಚಿಂದಿ ಆಯುವ ಕೆಲಸದಲ್ಲಿ ತೊಡಗಿದ್ದರು. ಸೆ.13ರಂದು ಬೊಮ್ಮನಹಳ್ಳಿಯ 1ನೇ ಕ್ರಾಸ್‌ ಬಳಿ ದೀಪಕ್‌, ಹೇಮಂತ್‌, ಮಾದೇಶ್‌ ಹಾಗೂ ಸಂಜಯ್‌ ಒಟ್ಟಿಗೆ ಮದ್ಯ ಸೇವಿಸಿದ್ದರು. ಆಗ ತನ್ನ ಪಡೆದಿದ್ದ 20 ರು. ಸಾಲ ಮರಳಿಸುವಂತೆ ಸಂಜಯ್‌ಗೆ ದೀಪಕ್‌ ಕೇಳಿದ್ದ. ಈ ಮಾತಿಗೆ ಇಬ್ಬರ ನಡುವೆ ಜಗಳವಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ದೀಪಕ್‌ಗೆ ಬೆಂಬಲಕ್ಕೆ ನಿಂತ ಇನ್ನುಳಿದವರು, ಮರದ ತುಂಡಿನಿಂದ ಮನಬಂದಂತೆ ಸಂಜಯ್‌ ಮೇಲೆ ಹಲ್ಲೆ ನಡೆಸಿ ಕೊಂದು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.