ಗಂಡನಿಂದ ವಿಚಿತ್ರ ಕಿರುಕುಳ/ ತನ್ನ ಸ್ನೇಹಿತರೊಂದಿಗೆ ಚಕ್ಕಂದ ಆಡು ಎಂದು ಹೇಳಿದ ಧೂರ್ತ/ ವರದಕ್ಷಿಣೆ ಕಿರುಕುಳ ನೀಡಿದ ಪತಿರಾಯ/ ಪೊಲೀಸರ ಮೊರೆ ಹೋದ ಗೃಹಿಣಿ

ಅಹಮದಾಬಾದ್ (ಆ. 03) 43 ವರ್ಷದ ಮಹಿಳೆ ಗಂಡನ ಮೇಲೆ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾಳೆ. ಇದು ಇಷ್ಟಕ್ಕೆ ನಿಲ್ಲುವುದಿಲ್ಲ ನೀನು ನನ್ನ ಸ್ನೇಹಿತರಿಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡಬೇಕು ಎಂದು ಪಾಪಿ ಪತಿ ಒತ್ತಾಯ ಮಾಡುತ್ತಿದ್ದ. ಇದಕ್ಕೆ ಬದಲಾಗಿ ನಾನು ಸ್ನೇಹಿತರ ಹೆಂಡತಿಯರ ಜತೆ ಚಕ್ಕಂದ ಆಡುತ್ತೇನೆ ಎಂದು ಹೇಳಿದ್ದ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳೆ ದೂರಿನಲ್ಲಿ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಅನುಪಮಾ (ಹೆಸರು ಬದಲಾಯಿಸಲಾಗಿದೆ) ಮತ್ತು ಪಾರ್ಥ (ಹೆಸರು ಬದಲಾಯಿಸಲಾಗಿದೆ) 2002 ರಲ್ಲಿ ಮದುವೆಯಾಗಿದ್ದರು. ಆಕೆಯ ಕುಟುಂಬದವರು ಪಾರ್ಥನಿಗೆ ವರದಕ್ಷಿಣೆ ರೂಪದಲ್ಲಿ 50 ತೊಲೆ ಚಿನ್ನ ನೀಡಿದ್ದರು.

ಟಿವಿ ಸ್ಟುಡಿಯೋ ಅಲ್ಲ; ಅಧಿಕಾರಿಗಳ ಪ್ರಶ್ನೆಗೆ ಬೆವರಿ ಬೆಂಡಾದ ಡ್ರೋಣ್ ಪ್ರತಾಪ್

ಪಾರ್ಥ ಎಂಬಿಎ ಪದವೀಧರ ಮತ್ತು ಸ್ವಂತ ಜವಳಿ ಉದ್ಯಮ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದ. ಮದುವೆ ಬಳಿಕ ಆತನ ಕುಟುಂಬದವರು ಹುಡುಗಿ ಬಳಿ ಕಾರು ಮತ್ತು ಹೆಚ್ಚಿನ ವರದಕ್ಷಿಣೆ ತರಲು ಪ್ರತಿದಿನ ಒತ್ತಾಯ ಮಾಡಿದ್ದಾರೆ. ಅನುಪಮಾ ಮೇಲೆ ಅನೇಕ ಸಾರಿ ಹಲ್ಲೆ ಮಾಡಿದ್ದಾನೆ. ಈತ ಎಂಬಿಎ ಮಾಡದ ವಿಚಾರವೂ ಗೊತ್ತಾಗಿದೆ.

ಒಂದು ಕಡೆ ಗಂಡನ ಉದ್ಯಮ ನೆಲಕಚ್ಚಿದ ನಂತರ ಸಾಲ ಮಾಡಿ ಹೆಂಡತಿಯೇ ಟ್ರಾವೆಲ್ ಏಜೆನ್ಸಿಯನ್ನು ಪ್ರಾರಂಭಿಸಿದ್ದಾಳೆ. ಸ್ನೇಹಿತರ ಹೆಂಡತಿಯರೊಂದಿಗೆ ಚಕ್ಕಂದವಾಡಲು ಅವಕಾಶ ಬೇಕು ಎನ್ನುವ ಕಾರಣಕ್ಕೆ ಹೆಂಡತಿಯ ಬಳಿ ನೀನು ನನ್ನ ಸ್ನೇಹಿತರೊಂದಿಗೆ ಸಲುಗೆಯಿಂದ ನಡೆದುಕೊಳ್ಳಬೇಕು ಎಂದು ಒತ್ತಾಯ ಮಾಡಲು ಆರಂಭಿಸುತ್ತಾನೆ.

ಲಾಕ್​ಡೌನ್ ಜಾರಿಯಾದ ನಂತರ ಮಹಿಳೆಯ ಟ್ರಾವೆಲ್ ವ್ಯವಹಾರ ನಷ್ಟವಾಗುತ್ತದೆ. ಅನಿವಾರ್ಯವಾಗಿ ಗಂಡನ ಮನೆಯವರ ಬಳಿ ಆಭರಣ ಮರಳಿಕೊಡುವಂತೆ ಕೇಳಿದಾಗ ಆಕೆಯ ಮೇಲೆ ಹಲ್ಲೆ ಮಾಡಲಾಗುತ್ತದೆ. ಇದಾದ ಮೇಲೆ ಮಹಿಳೆ ನೇರವಾಗಿ ಪೊಲೀಸರ ಮೊರೆ ಹೋಗಿದ್ದಾರೆ.