ಟಿವಿ ಸ್ಟುಡಿಯೋ ಅಲ್ಲ; ಅಧಿಕಾರಿಗಳ ಖಡಕ್ ಪ್ರಶ್ನೆಗೆ ಪ್ರತಾಪ್ ಬಾಯಿ ಬಂದ್!

ಕ್ವಾರಂಟೈನ್ ಅವಧಿ ಮುಗಿಸಿರುವ ಪ್ರತಾಪ/ ಕೊರೋನಾ ನಿಯಮಾವಳಿ ಮುರಿದ ಬಗ್ಗೆ ದೂರು ದಾಖಲಾಗಿತ್ತು/  ಖಾಸಗಿ  ಹೋಟೆಲ್ ನಲ್ಲಿ  ಡ್ರೋಣ್ ಪ್ರತಾಪ್ ವಿಚಾರಣೆ/ ಅಧಿಕಾರಿಗಳ ಪ್ರಶ್ನೆಗೆ ಸ್ಪಂದಿಸದ ಪ್ರತಾಪ್

Drone Pratap interrogated in Bengaluru for violating Home quarantine rules

ಬೆಂಗಳೂರು(ಆ.  03)  ನಗರದ ಖಾಸಗಿ ಹೋಟೆಲ್ ನಲ್ಲಿ  ಡ್ರೋಣ್ ಪ್ರತಾಪ್ ವಿಚಾರಣೆ ನಡೆಯುತ್ತಿದೆ. ಸಿವಿಲ್ ಡಿಫೆನ್ಸ್ ಕಮಾಂಡೆಟ್ ಚೇತನ್  ರಿಂದ ಡ್ರೋನ್ ಪ್ರತಾಪ್ ವಿಚಾರಣೆ ಮಾಡಿದ್ದಾರೆ.  ಚೇತನ್ ಕುಮಾರ್  ರನ್ನು ನೋಡಲ್ ಆಫೀಸರ್ ಆಗಿ ನೇಮಕ ಮಾಡಲಾಗಿತ್ತು.

ವಿಚಾರಣೆಗೆ ಅಧಿಕಾರಗಳ ಡ್ರೋನ್ ಪ್ರತಾಪ್ ಸ್ಪಂದಿಸುತ್ತಿಲ್ಲ.  ಕ್ವಾರಟೈನ್ ನಲ್ಲಿ ಇದ್ದಾಗ ವೈದ್ಯರು ಕಿರುಕುಳ ನೀಡಿದ್ದಾರೆ‌. ನನ್ನ ಜೊತೆ ಸಭ್ಯ ರೀತಿಯಲ್ಲಿ ನಡೆದುಕೊಂಡಿಲ್ಲ. ನನಗೆ ಸರಿಯಾದ ಸೌಲಭ್ಯ ನೀಡದೇ ಕಿರುಕುಳ ನೀಡಿದ್ದಾರೆ ಎಂದು ಪ್ರತಾಪ್ ಆರೋಪ ಮಾಡಿದ್ದಾರೆ.

ತಪಾಸಣೆ ಬಂದ ವೈದ್ಯರು ನನ್ನ ವೈಯಕ್ತಿಕ ವಿಚಾರ ಇಟ್ಟುಕೊಂಡು ಅವಮಾನ ಮಾಡಿದ್ದಾರೆ ಎಂದಿರುವ ಪ್ರತಾಪ್ ವೈದ್ಯರ ವಿರುದ್ಧ ದೂರು ನೀಡಲು ಚಿಂತನೆ ನಡೆಸಿದ್ದಾರೆ.

ಡ್ರೋಣ್ ಪ್ರತಾಪ್ ಸಂಪೂರ್ಣ ಚರಿತ್ರೆ

ಡ್ರೋನ್ ಪ್ರತಾಪ್ ವಿಚಾರಣೆ ಬಳಿಕ ಕಮಾಂಡೆಟ್ ಚೇತನ್ ಕುಮಾರ್ ಹೇಳಿಕೆ  ನೀಡಿದ್ದಾರೆ. ಪ್ರತಾಪ್  ಹೋಮ್ ಕ್ವಾರಟೈನ್ ನಿಯಮವನ್ನು ಉಲ್ಲಂಘನೆ ಮಾಡಿದ್ದರು. ಈ ಹಿನ್ನಲೆ ಅವರನ್ನು ನಾವು ಕರೆದುಕೊಂಡು ಬಂದು ಸಾಂಸ್ಥಿಕ ಕ್ವಾರಟೈನ್ ಮಾಡಿದ್ವಿ. ಈ ಸಂದರ್ಭದಲ್ಲಿ ಕೂಡ ಅವರು ನಿಯಮ ಉಂಲ್ಲಂಘನೆ ಮಾಡಿದ್ದಾರೆ. ಹಾಗಾಗೀ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲು ಮಾಡಿದ್ದೇವೆ. ವೈದ್ಯರ ಮೇಲೆ ಆರೋಪ ಮಾಡುತ್ತಿರುವ ಸುಳ್ಳು. ಇವತ್ತಿಗೆ ಕ್ವಾರಟೈನ್ ಅವಧಿ ಮುಗಿದಿದೆ. ಆಶೋಕ್ ನಗರ ಪೊಲೀಸ್ ಗೆ ತಿಳಿಸಿದ್ದೇವೆ ಎಂದು  ನೋಡಲ್ ಆಫಿಸರ್ ಚೇತನ್ ಕುಮಾರ್ ತಿಳಿಸಿದ್ದಾರೆ. 

ಡ್ರೋಣ್ ಪ್ರತಾಪ್ ಪ್ರಶ್ನೋತ್ತರ;

ಅಧಿಕಾರಿ: ಬೆಂಗಳೂರಿಗೆ ಹೇಗೆ ಬಂದ್ರಿ?

ಪ್ರತಾಪ್: ಪಾಟ್ನಾದಿಂದ ಹೈದರಾಬಾದ್ ಮಾರ್ಗವಾಗಿ ಬಂದೆ.

ಅಧಿಕಾರಿ: ವಿಮಾನ ನಿಲ್ದಾಣದಲ್ಲಿ ಕ್ವಾರಂಟೈನ್ ಸೀಲ್ ಹಾಕಿದ್ರಾ?

ಪ್ರತಾಪ್: ಹು.. ಹಾಕಿದ್ರು

ಅಧಿಕಾರಿ:  ಎಷ್ಟು ದಿನ ಅಂಥ ಹಾಕಿದ್ರು?

ಪ್ರತಾಪ್:  ಸರ್.. ಹದಿನಾಲ್ಕು ದಿನ

ಅಧಿಕಾರಿ:  ಮಾಧ್ಯಮಕ್ಕೆ ಸಂದರ್ಶನ ನೀಡಲು ಯಾವಾಗ ಹೋದ್ರಿ?

ಪ್ರತಾಪ್: ಸರ್  16 ನೇ ತಾರೀಕು..

ಅಧಿಕಾರಿ: ಅಂದರೆ ಬಂದ ಮರುದಿನವೇ ಹೋದ್ರಿ.. ಅಲ್ಲಿ ಸೀಲ್ ಹಾಕಿದ್ದನ್ನು ತೋರಿಸಿದ್ರಾ? ತೋರಿಸಬೇಕಿತ್ತಲ್ಲ.. ಸುಮ್ಮನೆ ಸಮಸ್ಯೆ ಮಾಡಿಕೊಳ್ಳುತ್ತೀರಾ...

Drone Pratap interrogated in Bengaluru for violating Home quarantine rules

 

Latest Videos
Follow Us:
Download App:
  • android
  • ios