Asianet Suvarna News Asianet Suvarna News

ಮಂಗಳೂರಿನ ಲಾಡ್ಜ್ ಒಂದರಲ್ಲಿ ನಗ್ನ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ, ಅನುಮಾನಕ್ಕೆ ಕಾರಣವಾದ ಟ್ಯಾಬ್ಲೆಟ್!

ಮಂಗಳೂರಿನ ಪಂಪ್ ವೆಲ್ ಬಳಿಯ ಪದ್ಮಶ್ರೀ ಲಾಡ್ಜ್ ಕೋಣೆಯಲ್ಲಿ ನಗ್ನವಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವಪತ್ತೆಯಾಗಿದ್ದು, ಮೃತದೇಹದ ಬಳಿ ಪತ್ತೆಯಾದ ಕೆಲ ಮಾತ್ರೆಗಳು ಅನುಮಾನಕ್ಕೆ ‌ಕಾರಣವಾಗಿದೆ.

Man from Kasaragod Found dead in Lodge at Pumpwell in mangaluru gow
Author
First Published Dec 13, 2022, 4:25 PM IST

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಮಂಗಳೂರು (ಡಿ.13): ಲಾಡ್ಜ್ ಕೋಣೆಯಲ್ಲಿ ನಗ್ನವಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವಪತ್ತೆಯಾಗಿದ್ದು, ಮೃತದೇಹದ ಬಳಿ ಪತ್ತೆಯಾದ ಕೆಲ ಮಾತ್ರೆಗಳು ಅನುಮಾನಕ್ಕೆ ‌ಕಾರಣವಾಗಿದೆ. ಮಂಗಳೂರಿನ ಪಂಪ್ ವೆಲ್ ಬಳಿಯ ಪದ್ಮಶ್ರೀ ಲಾಡ್ಜ್ ನಲ್ಲಿ ಶವ ಪತ್ತೆಯಾಗಿದ್ದು, ಕೇರಳದ ಕಾಸರಗೋಡಿನ ಉಪ್ಪಳ ನಿವಾಸಿ ಅಬ್ದುಲ್ ಕರೀಮ್ ಮೃತ ವ್ಯಕ್ತಿಯಾಗಿದ್ದಾರೆ‌. ನಿನ್ನೆ ಬೆಳಗ್ಗೆ ಕರೀಂ ಲಾಡ್ಜ್ ಪಡೆದಿದ್ದು, ಮಧ್ಯಾಹ್ನ 1.30 ಕ್ಕೆ ಕರೀಮ್ ಇದ್ದ ರೂಮ್ ಗೆ ಬುರ್ಖಾಧಾರಿ ಮಹಿಳೆಯೊಬ್ಬರು ಬಂದು ಹೋಗಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ. ಈ ಮಹಿಳೆ 2.30 ಕ್ಕೆ ರೂಮ್ ನಿಂಸ ವಾಪಾಸ್ ಆಗಿದ್ದಾಳೆ. ಈ ನಡುವೆ ರೂಂ ನಲ್ಲಿ 'Ksheerabala' ಹೆಸರಿನ ಆಯುರ್ವೇದಿಕ್ ಟ್ಯಾಬ್ಲೆಟ್ಸ್ ಪತ್ತೆಯಾಗಿದ್ದು, ಅನುಮಾನಕ್ಕೆ ‌ಕಾರಣವಾಗಿದೆ‌. ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್‌.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆಗೆ ಅನುಮಾನಸ್ಪದ ಸಾವು ಅಂತಾ ದೂರು ಕರೀಂ ಮನೆಯವರು‌ ದೂರು ನೀಡಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dharwad: ಕ್ಷುಲ್ಲಕ ಕಾರಣಕ್ಕೆ ಮಾವನಿಗೆ ಚಾಕುವಿನಿಂದ ಇರಿದ ಅಳಿಯ

ನಿರಂತರ ಫೋನ್ ರಿಂಗ್ ಆದಾಗ ಅನುಮಾನ!
ನಿನ್ನೆಯೇ ಕರೀಂ ಇಲ್ಲಿ ರೂಂ ಪಡೆದಿದ್ದರೂ ಆ ಬಳಿಕ ಕೊಠಡಿಯಿಂದ ಹೊರ ಬಂದಿಲ್ಲ ಎನ್ನಲಾಗಿದೆ. ಮಹಿಳೆ ಬಂದು ಹೋದ ಬಳಿಕ ಕರೀಂ ಹೊರ ಹೋಗಿಲ್ಲ. ಇಂದು ಬೆಳಿಗ್ಗಿನಿಂದ ಕರೀಂ ಮೊಬೈಲ್ ನಿರಂತರವಾಗಿ ರಿಂಗ್ ಆಗ್ತಿದ್ದು, ಲಾಡ್ಜ್ ನ ರೂಂ ಬಾಯ್ ಗಮನಕ್ಕೆ ಬಂದಿದೆ. ಹೀಗಾಗಿ ಆತ ಬಾಗಿಲು ಬಡಿದರೂ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಕೊಠಡಿ ಬಾಗಿಲು ತೆರೆಯಲಾಗಿದೆ. ಇದೇ ವೇಳೆ ಕರೀಂ ನಾಪತ್ತೆ ಹಿನ್ನೆಲೆ ಮತ್ತು ಫೋನ್ ಸ್ವೀಕರಿಸದ ಕಾರಣದಿಂದ ಕರೀಂ ಪತ್ನಿಯ ಸಹೋದರ ಮಂಗಳೂರಿಗೆ ಬಂದು ಹುಡುಕಾಟ ನಡೆಸಿದ್ದಾರೆ.

VIJAYAPURA: ಒಂಟಿಯಾಗಿ ವಾಸಿಸುವವರೇ ಹುಷಾರ್, ಒಂಟಿ ಮನೆಗಳನ್ನ ಟಾರ್ಗೆಟ್‌ ಮಾಡ್ತಿದ್ದ ಗ್ಯಾಂಗ್‌ ಅಂದರ್

ಕೊನೆಗೆ ಕರೀಂ ಹೊಟೇಲ್ ವ್ಯಾಪ್ತಿಗೆ ಬರೋ ಕಂಕನಾಡಿ ಪೊಲೀಸ್ ಠಾಣೆಯನ್ನ ಸಂಪರ್ಕಿಸಿ ನಾಪತ್ತೆ ದೂರು ನೀಡಲು ಹೋದಾಗ ಲಾಡ್ಜ್ ನಲ್ಲಿ ಸಿಕ್ಕ ಶವ ಕರೀಂನದ್ದೇ ಎನ್ನುವುದು ಬೆಳಕಿಗೆ ಬಂದಿದೆ. ನಾಲ್ಕು ಮಕ್ಕಳ ತಂದೆಯಾಗಿರೋ ಕರೀಂಗೆ ಪಡೀಲ್ ನಲ್ಲಿ ಹೊಟೇಲ್ ನ ಜೊತೆಗೆ ಬಂಟ್ವಾಳ ಬಳಿ ಇಂಟರ್ ಲಾಕ್ ಫ್ಯಾಕ್ಟರಿ ಕೂಡ ಇದೆ ಎನ್ನಲಾಗಿದೆ. ಮಾಹಿತಿ ಪ್ರಕಾರ ಲಾಕ್ ಡೌನ್ ಗೂ ಮುನ್ನ ಕರೀಂ ಇದೇ ಲಾಡ್ಜ್ ನಲ್ಲಿ ರೂಂ ಮಾಡಿದ್ದ ಮಾಹಿತಿ ಲಭಿಸಿದೆ.

Follow Us:
Download App:
  • android
  • ios