Asianet Suvarna News Asianet Suvarna News

Vijayapura: ಒಂಟಿಯಾಗಿ ವಾಸಿಸುವವರೇ ಹುಷಾರ್, ಒಂಟಿ ಮನೆಗಳನ್ನ ಟಾರ್ಗೆಟ್‌ ಮಾಡ್ತಿದ್ದ ಗ್ಯಾಂಗ್‌ ಅಂದರ್

ಒಂಟಿ ಮನೆಗಳನ್ನ ಟಾರ್ಗೆಟ್‌ ಮಾಡಿಕೊಂಡು ಲೂಟಿ ಮಾಡ್ತಿದ್ದ ಖತರ್ನಾಕ್‌ ಗ್ಯಾಂಗ್‌ ವೊಂದನ್ನ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಬಲೆಗೆ ಹಾಕಿದ್ದಾರೆ. ಒಟ್ಟು 7 ಕಡೆಗಳಲ್ಲಿ ಈ ಖದೀಮರು ಒಂಟಿ ಮನೆಗಳನ್ನ ದೋಚಿದ್ದರು.

thieves gang arrested who targeted single houses in Vijayapura gow
Author
First Published Dec 13, 2022, 3:49 PM IST

ವರದಿ: ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌

ವಿಜಯಪುರ (ಡಿ.13): ನಿಮ್ಮ ಮನೆ ಊರಿಂದ ಹೊರಗಿದ್ರೆ, ನಗರ ಪ್ರದೇಶಗಳಲ್ಲಿ ಹೊರ ಭಾಗದಲ್ಲಿದ್ರೆ, ಒಂಟಿ ಮನೆಯಾಗಿದ್ರೆ ತುಂಬಾ ಹುಷಾರಾಗಿರಿ. ಯಾಕಂದ್ರೆ ಈ ಗ್ಯಾಂಗ್‌ ಯಾವಾಗ ಬೇಕಾದ್ರು ನಿಮ್ಮ ಮನೆಗಳನ್ನ ದೋಚಿ ಬಿಡಬಹುದು. ಹೌದು ಇಂತಹ ಒಂದು ಖತರ್ನಾಕ್‌ ಗ್ಯಾಂಗ್‌ ಪೊಲೀಸ್‌ ಬಲೆಗೆ ಬಿದ್ದಿದೆ. ಅವರು ಮಾಡಿದ ಕ್ರೈಂ ಕೇಳಿ ಸ್ವತಃ ಪೊಲೀಸರೆ ಗಾಭರಿಯಾಗಿದ್ದಾರೆ. ಒಂಟಿ ಮನೆಗಳನ್ನ ಟಾರ್ಗೆಟ್‌ ಮಾಡಿಕೊಂಡು ಇವರು ಮಾಡಿದ ಲೂಟಿಯನ್ನ ಬಗ್ಗೆ ಓದಿದ್ರೆ ನೀವು ಕೂಡ ಒಂದು ಕ್ಷಣ ಸ್ಟನ್‌ ಆಗ್ತೀರಿ. ಪಾವ್‌ ಕೆ.ಜಿ ಬಂಗಾರ, ಅರ್ಧ ಕೆ.ಜಿ ಯಷ್ಟು ಬೆಳ್ಳಿ ತನಿಖೆಯಲ್ಲಿ ಪತ್ತೆಯಾಗಿದೆ.. ವಿಜಯಪುರದ ಗ್ರಾಮೀಣ ಠಾಣೆಯ ಪೊಲೀಸರು ಕಾರ್ಯಚರಣೆ ನಡೆಸಿ ಖತರ್ನಾಕ್‌ ಗ್ಯಾಂಗಿನ ಮೂವರನ್ನ ಬಂಧಿಸಿದ್ದಾರೆ.

ಒಂಟಿ‌ ಮನೆಗಳ ಲೂಟಿ ಮಾಡಿದ ಖದೀಮರು ಅಂದರ್: ಒಂಟಿ ಮನೆಗಳನ್ನ ಟಾರ್ಗೆಟ್‌ ಮಾಡಿಕೊಂಡು ಲೂಟಿ ಮಾಡ್ತಿದ್ದ ಖತರ್ನಾಕ್‌ ಗ್ಯಾಂಗ್‌ ವೊಂದನ್ನ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಬಲೆಗೆ ಹಾಕಿದ್ದಾರೆ. ಗ್ರಾಮೀಣ ಠಾಣೆ ಸಿಪಿಐ ಸಂಗಮೇಶ ಪಾಲಬಾವಿ, ಬಬಲೇಶ್ವರ ಪಿಎಸೈ ಬಿ ಎ ತಿಪರೆಡ್ಡಿ, ಆರ್‌ ಡಿ ಕೂಸುರ್‌ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸಿಂದಗಿ ಮೂಲದ ಶ್ರೀಕಾಂತ ಹರಿಜನ್‌, ಜೈಭೀಮ್‌ ಪಡಕೋಟಿ, ಆಕಾಶ್‌ ಕಲ್ಲವ್ವಗೊಳ ಸೇರಿ ಮೂವರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಒಂಟಿ ಮನೆಗಳನ್ನ ಟಾರ್ಗೆಟ್‌ ಮಾಡಿದ್ದ ಕಳ್ಳರು: ನಗರ ಹೊರವಲಯ, ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿದ್ದ ಮನೆಗಳನ್ನೆ ಈ ಮೂವರು ಖತರ್ನಾಕ್‌ ಕಳ್ಳರು ಟಾರ್ಗೆಟ್‌ ಮಾಡ್ತಿದ್ದರು. ಬೀಗ ಹಾಕಿದ್ದ ಒಂಟಿ ಮನೆಗಳನ್ನ ವಾಚ್‌ ಮಾಡಿ ಲೂಟಿ ಮಾಡುತ್ತಿದ್ದರು. ಒಂಟಿ ಮನೆಯಲ್ಲಿದ್ದ ಜನ ಊರುಗಳಿಗೆ ಪ್ರಯಾಣಿಸಿದ್ರೆ, ಅಂತ ಮನೆಗಳಲ್ಲಿ ಬಂಗಾರ ಬೆಳ್ಳಿ ಕಳ್ಳತನ ಮಾಡ್ತಿದ್ರು. ಹೀಗಾಗಿ ಯಾರು ಕಳ್ಳತನ ಮಾಡ್ತಿದ್ದಾರೆ ಅನ್ನೋದು ಗೊಂದಲಕ್ಕಿಡು ಮಾಡಿತ್ತು. ಮನೆಗಳು ಒಂಟಿಯಾಗಿದ್ದು, ಹೊರ ವಲಯಗಳಲ್ಲಿ ಇದ್ದಿದ್ದರಿಂದ ಪೊಲೀಸರಿಗೆ ಕಳ್ಳರನ್ನ ಹಿಡಿಯೋದೆ ಒಂದು ಚಾಲೆಂಜ್‌ ಆಗಿತ್ತು..

ಕಲ್ಬುರ್ಗಿಯಲ್ಲು ಒಂಟಿ ಮನೆಗಳ ಕಳ್ಳತನ: ಕೇವಲ ವಿಜಯಪುರ ಅಷ್ಟೇ ಅಲ್ಲ, ಭೀಮಾತೀರದಲ್ಲಿ ಬರುವ ಊರುಗಳಲ್ಲಿ ಒಂಟಿ ಮನೆಗಳಿದ್ದಲ್ಲಿ ಅಲ್ಲಿಯು ಕಳ್ಳತನ ಮಾಡಿದ್ದಾರೆ. ಅಲ್ಲದೆ ಕಲಬುರ್ಗಿ ಜಿಲ್ಲೆಯಲ್ಲು ತಮ್ಮ ಕೈ ಚಳಕ ತೋರಿಸಿದ್ದರು. ವಿಜಯಪುರ ಗ್ರಾಮೀಣ ಪೊಲೀಸ್‌ ಠಾಣೆ, ತಿಕೋಟ ಪೊಲೀಸ್‌ ಠಾಣೆ, ಹೊರ್ತಿ,  ಕಲಬುರ್ಗಿ ಜಿಲ್ಲೆಯ ನೆಲೋಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲು ಒಂಟಿ ಮನೆಗಳನ್ನ ಟಾರ್ಗೆಟ್‌ ಮಾಡಿ ಕಳ್ಳತನ ಮಾಡಿದ್ದಾರೆ.

Mangaluru: ಅಪಘಾತಕ್ಕೆ ವೈದ್ಯ ವಿದ್ಯಾರ್ಥಿ ಬಲಿ, ಮೃತದೇಹ ನೋಡಲು ಬಂದ ಹೈಕೋರ್ಟ್ ಜಡ್ಜ್

ಪ್ರಕರಣ ಬಯಲಿಗೆ ತಂದ ಬಬಲೇಶ್ವರ ಪಿಎಸ್‌ಐ ತಿಪ್ಪಾರೆಡ್ಡಿ: ಇಂಥ ಖತರ್ನಾಕ್‌ ಒಂಟಿ ಮನೆಗಳ್ಳರನ್ನ ಬಂಧಿಸುವಲ್ಲಿ ಬಬಲೇಶ್ವರ ಠಾಣೆ ಪಿಎಸ್‌ಐ ಬಿ ಎ ತಿಪ್ಪಾರೆಡ್ಡಿ ಶ್ರಮವಿದೆ. ಅಂದಹಾಗೇ ಬಬಲೇಶ್ವ ಪೊಲೀಸ್‌ ಠಾಣೆ ಸರಹದ್ದಿನ ಹೊನಗನಹಳ್ಳಿ ಸಮೀಪದ ಸೋಮನಾಥ ಬಗಲಿ ಎಂಬುವರ ಒಂಟಿ ಮನೆಯಲ್ಲಿ ಚಿನ್ನಾಭರಣ, ಬೆಳ್ಳಿ ಕಳ್ಳತನ ಮಾಡಿದ್ದ ಇದೆ ಗ್ಯಾಂಗ್‌ ಕದ್ದ ಮಾಲನ್ನ ಮಾರಾಟಕ್ಕೆ ಯತ್ನಿಸಿತ್ತು. ಇದರ ಜಾಡು ಹಿಡಿದ ಸಿಪಿಐ ಸಂಗಮೇಶ ಪಾಲಬಾವಿ ಹಾಗೂ ಪಿಎಸೈ ತಿಪ್ಪಾರೆಡ್ಡಿ ಕಳ್ಳರನ್ನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 

DHARWAD: ಕ್ಷುಲ್ಲಕ ಕಾರಣಕ್ಕೆ ಮಾವನಿಗೆ ಚಾಕುವಿನಿಂದ ಇರಿದ ಅಳಿಯ

ಪಾವ್‌ ಕೆ.ಜಿ ಬಂಗಾರ, ಅರ್ಧ ಕೆ.ಜಿ ಬೆಳ್ಳಿ: ಒಟ್ಟು 7 ಕಡೆಗಳಲ್ಲಿ ಈ ಖದೀಮರು ಒಂಟಿ ಮನೆಗಳನ್ನ ದೋಚಿದ್ದರು. ಕಳ್ಳರನ್ನ ಬಂಧಿಸಿ ವಿಚಾರಿಸಿದಾಗ ಬರೊಬ್ಬರಿ ಪಾವ್‌ ಕೆ.ಜಿ ಅಂದರೆ 250 ಗ್ರಾಂ ನಷ್ಟು ಚಿನ್ನಾಭರಣ ಹಾಗೂ ಅರ್ಧ ಕೆ.ಜಿಗು ಅಧಿಕ ಬೆಳ್ಳಿ ದೋಚಿದ್ದಾಗಿ ಬಾಯ್ಬಿಟ್ಟಿದ್ದಾರೆ. ಖದೀಮರಿಂದ 12ಲಕ್ಷ 50 ಸಾವಿರ ಮೌಲ್ಯದ ಬಂಗಾರ ಹಾಗೂ 36 ಸಾವಿರ ಮೌಲ್ಯದ 600 ಗ್ರಾಂ ಬೆಳ್ಳಿ, ನಿಸಾನ್‌ ಸನ್ನಿ ಕಾರ್‌, ಕೃತ್ಯಕ್ಕೆ ಬಳಕೆ ಮಾಡ್ತಿದ್ದ ರಾಡ್‌, ಕಬ್ಬಿಣದ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆದಿದ್ದಾರೆ. ಇದೆಲ್ಲದರ ಒಟ್ಟು ಮೌಲ್ಯ18 ಲಕ್ಷ 36 ಸಾವಿರ ಎನ್ನಲಾಗಿದೆ.

Follow Us:
Download App:
  • android
  • ios