Asianet Suvarna News Asianet Suvarna News

ಹಂದಿ ಮಾಂಸ ವಿಚಾರಕ್ಕೆ ಕತ್ತಿಯಿಂದ ವ್ಯಕ್ತಿ ಮೇಲೆ ಹಲ್ಲೆ: ಸಿಸಿ ಕ್ಯಾಮೆರಾದಲ್ಲಿ ಸೆರೆ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕತ್ತಿಯಲ್ಲಿ ದಾಳಿ ಮಾಡಿರುವುದು ಸೆರೆಯಾಗಿದೆ. ಒಂದು ಪಿಕ್-ಅಪ್ ವ್ಯಾನ್ ಇನ್ನೊಂದಕ್ಕೆ ಡಿಕ್ಕಿ ಹೊಡೆದು ಅದನ್ನು ನಿಲ್ಲಿಸುವುದನ್ನು ಘಟನೆಯ ಆಘಾತಕಾರಿ ದೃಶ್ಯಗಳು ತೋರಿಸುತ್ತದೆ.

man attacked with sword near mumbai allegedly over trade dispute caught on cctv ash
Author
First Published Dec 21, 2022, 5:31 PM IST

ಮಹಾರಾಷ್ಟ್ರದ (Maharashtra) ಮುಂಬೈ  (Mumbai) ಬಳಿಯ ವಸಾಯ್‌ (Vasai) ಎಂಬಲ್ಲಿ ಕತ್ತಿಯಿಂದ (Sword) ವ್ಯಕ್ತಿಯ ಮೇಲೆ ದಾಳಿ (Attack) ಮಾಡಲಾಗಿದ್ದು, ಆತನಿಗೆ ಗಂಭೀರ ಗಾಯಗಳಾಗಿದೆ. ಈ ಕಾರಣದಿಂದ ವಸಾಯ್‌ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಇನ್ನು, ಶಂಕಿತರ ಪತ್ತೆಗೆ ಪೊಲೀಸರು (Police) ತೀವ್ರ ಶೋಧ ಕಾರ್ಯ ನಡೆಸಿದ್ದಾರೆ ಎಂದೂ ತಿಳಿದುಬಂದಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಹಂದಿಮಾಂಸ ವ್ಯಾಪಾರದಲ್ಲಿ (Pork Trade) ತೊಡಗಿರುವ 2 ಗುಂಪುಗಳ ನಡುವಿನ ವಿವಾದದ ಪರಿಣಾಮವಾಗಿ ಈ ದಾಳಿ ನಡೆದಿರಬಹುದು ಎಂದು ವರದಿಯಾಗಿದೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕತ್ತಿಯಲ್ಲಿ ದಾಳಿ ಮಾಡಿರುವುದು ಸೆರೆಯಾಗಿದೆ. ಒಂದು ಪಿಕ್-ಅಪ್ ವ್ಯಾನ್ ಇನ್ನೊಂದಕ್ಕೆ ಡಿಕ್ಕಿ ಹೊಡೆದು ಅದನ್ನು ನಿಲ್ಲಿಸುವುದನ್ನು ಘಟನೆಯ ಆಘಾತಕಾರಿ ದೃಶ್ಯಗಳು ತೋರಿಸುತ್ತದೆ. ನಂತರ ಒಬ್ಬ ವ್ಯಕ್ತಿಯನ್ನು ವಾಹನದಿಂದ ಹೊರಗೆಳೆದು ಕತ್ತಿಯಿಂದ ಹಲವು ಬಾರಿ ದಾಳಿ ಮಾಡಿದ್ದಾರೆ. ಅಲ್ಲದೆ, ದಾಳಿಕೋರರು ಕತ್ತಿ ಬೀಸುತ್ತಾ ಬಂದೂಕು ಹಿಡಿದು ನೆರೆದಿದ್ದವರನ್ನು ಹೆದರಿಸುತ್ತಿರುವುದು ಕಂಡು ಬಂದಿದೆ. ಹಾಗೂ, ಯಾರೂ ಮಧ್ಯಪ್ರವೇಶಿಸದಂತೆ ದಾಳಿಕೋರರು ಗುಂಡು ಹಾರಿಸಿದ್ದಾರೆ ಎಂದೂ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಇದನ್ನು ಓದಿ: ಪೂಜಾರಿ ವೇಷದಲ್ಲಿ ಬಂದು ಕತ್ತಿಯಿಂದ ದಾಳಿ ನಡೆಸಿದ ದುಷ್ಕರ್ಮಿ

ಹಲ್ಲೆಗೊಳಗಾದ ವ್ಯಕ್ತಿಯನ್ನು ಹರ್ಜೀತ್‌ ಸಿಂಗ್ ಎಂದು ಗುರುತಿಸಲಾಗಿದೆ. ಹಲ್ಲೆ ಮಾಡಿದ ನಂತರ ದಾಳಿಕೋರರು ಅವರನ್ನು ಅಪಹರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹರ್ಜೀತ್‌ ಸಿಂಗ್ ಮತ್ತು ಶಂಕಿತರನ್ನು ಪತ್ತೆಹಚ್ಚಲು ಹಲವು ತಂಡಗಳನ್ನು ರಚಿಸಿದ್ದಾರೆ. ಇನ್ನು, ಹರ್ಜೀತ್‌ ಸಿಂಗ್ ಅವರೊಂದಿಗೆ ಪ್ರಯಾಣಿಸುತ್ತಿದ್ದ ಇತರ ಜನರ ಮೇಲೆ ದಾಳಿ ನಡೆದಿಲ್ಲ ಎಂದೂ ವಿಡಿಯೋ ದೃಶ್ಯಾವಳಿಗಳು ತೋರಿಸಿವೆ.

ಘಟನೆ ನಡೆದ ಸ್ಥಳದಿಂದ ಪೊಲೀಸರು ಹರ್ಜೀತ್‌ ಸಿಂಗ್ ಅವರ ವಾಹನ ಮತ್ತು ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಹಾಗೂ, ಉನ್ನತ ಪೊಲೀಸ್ ಅಧಿಕಾರಿಗಳು ದಾಳಿಯ ಸುಳಿವುಗಳಿಗಾಗಿ ಸ್ಥಳವನ್ನು ಪರಿಶೀಲಿಸುತ್ತಿರುವುದನ್ನು ತೋರಿಸುತ್ತವೆ ಎಂದೂ ಸ್ಥಳದ ದೃಶ್ಯಾವಳಿಗಳು ಹೇಳುತ್ತಿವೆ.

ದಾಳಿಕೋರರು ಹರ್ಜೀತ್‌ ಸಿಂಗ್ ಅವರನ್ನು ರಕ್ಷಿಸುವ ಯಾವುದೇ ಪ್ರಯತ್ನದ ವಿರುದ್ಧ ಸ್ಥಳದಲ್ಲಿದ್ದ ಜನರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಸ್ಥಳೀಯ ನಿವಾಸಿ ಜಯೇಂದ್ರ ಪಾಟೀಲ್ ಹೇಳಿದ್ದಾರೆ. "ಅವರಲ್ಲಿ ಒಬ್ಬರು ಬಂದೂಕನ್ನು ಹೊರತೆಗೆದರು, ಆದ್ದರಿಂದ ಯಾರೂ ಮಧ್ಯಪ್ರವೇಶಿಸಲು ಧೈರ್ಯ ಮಾಡಲಿಲ್ಲ ಎಂದೂ ಅವರು ಹೇಳಿದ್ದಾರೆ. ಅವರು ಹಂದಿ ಮಾಂಸ ವ್ಯಾಪಾರಿಗಳು. ಈ ದಾಳಿಯು ಅದಕ್ಕೆ ಸಂಬಂಧಿಸಿರಬಹುದು ಎಂದೂ ಅವರು ಹೇಳಿದ್ದಾರೆ. ಹಾಗೂ, ದಾಳಿಕೋರರು ಹರ್ಜಿತ್‌ ಸಿಂಗ್ ಅವರನ್ನು ತಮ್ಮ ಪಿಕಪ್ ವ್ಯಾನ್‌ಗೆ ಹಾಕಿಕೊಂಡು ಸ್ಥಳದಿಂದ ಪರಾರಿಯಾದರು ಎಂದೂ ಜಯೇಂದ್ರ ಪಾಟೀಲ್ ಹೇಳಿದರು.

ಇದನ್ನೂ ಓದಿ: Drug Offences: 10 ದಿನಗಳಲ್ಲಿ 12 ಅಪರಾಧಿಗಳ ತಲೆ ಕಡಿದ ಸೌದಿ ಅರೇಬಿಯಾ..!

ಇನ್ನು, ಕಳೆದ ತಿಂಗಳಷ್ಟೇ ಆಂಧ್ರಪ್ರದೇಶದಲ್ಲಿ ಭೀಕರ ಹತ್ಯೆ ಯತ್ನ ಪ್ರಕರಣದ ದೃಶ್ಯವೊಂದು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿತ್ತು. ಪೂಜಾರಿ ವೇಷದಲ್ಲಿ ಬಂದ ವ್ಯಕ್ತಿಯೊಬ್ಬ ಆಂಧ್ರಪ್ರದೇಶದ ಟಿಡಿಪಿ ನಾಯಕನ ಮೇಲೆ ಕತ್ತಿಯಿಂದ ದಿಢೀರ್ ಹತ್ಯೆಗೆ ಯತ್ನಿಸಿದ್ದಾನೆ. ಆಂಧ್ರಪ್ರದೇಶದ ಕಾಕಿನಾಡಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಟಿಡಿಪಿ ನಾಯಕ ಮಾಜಿ ಸಂಸದ ಶೇಷಗಿರಿ ರಾವ್ ಪೊಲ್ನಟಿ ಅವರಿಗೆ ಗಾಯಗಳಾಗಿತ್ತು,. ಘಟನೆಯ ಬಳಿಕ ಆರೋಪಿ ಪರಾರಿಯಾಗಿದ್ದು, ಈ ಆಘಾತಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿತ್ತು. ಶೇಷಗಿರಿ ರಾವ್ (Seshagiri Rao Polnati) ಅವರ ಮನೆಯ ಆವರಣದಲ್ಲೇ ಈ ಅನಾಹುತ ನಡೆದಿತ್ತು.

Follow Us:
Download App:
  • android
  • ios