Asianet Suvarna News Asianet Suvarna News

Drug Offences: 10 ದಿನಗಳಲ್ಲಿ 12 ಅಪರಾಧಿಗಳ ತಲೆ ಕಡಿದ ಸೌದಿ ಅರೇಬಿಯಾ..!

ಜಮಾಲ್‌ ಕಶೋಗಿ ಹತ್ಯೆ ಪ್ರಕರಣದ ಬಳಿಕ ಗಲ್ಲು ಶಿಕ್ಷೆಯ ಕಾನೂನು ಬದಲಾವಣೆ ಮಾಡೋದಾಗಿಯೂ ಸೌದಿ ಅರೇಬಿಯಾ ಭರವಸೆ ನೀಡಿತ್ತು. ಜಮಾಲ್‌ ಕಶೋಗಿಯನ್ನು 2018 ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯಾದ ಇಸ್ತಾನ್‌ಬುಲ್‌ ಕಾನ್ಸುಲೇಟ್‌ನಲ್ಲಿ ಹತ್ಯೆ ಮಾಡಲಾಗಿತ್ತು.

saudi arabia beheading by sword executes 12 people in 10 days report ash
Author
First Published Nov 22, 2022, 10:44 AM IST

ಸೌದಿ ಅರೇಬಿಯಾ (Saudi Arabia) ತಪ್ಪು ಮಾಡಿದವರಿಗೆ ಸಾಮಾನ್ಯವಾಗಿ ಸಾರ್ವಜನಿಕವಾಗಿ ನೇಣಿಗೆ ಹಾಕುತ್ತಿತ್ತು (Capital Punishment). ಇಂತಹ ಶಿಕ್ಷೆಗಳನ್ನು ಕಡಿಮೆ ಮಾಡುವುದಾಗಿ ಸೌದಿ ಅರೇಬಿಯಾ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ (Mohammed Bin Salman) ಈ ಹಿಂದೆ ಹೇಳಿದ್ದರೂ ಸಹ ಈಗ ಮತ್ತೆ 10 ದಿನಗಳಲ್ಲಿ 12 ಅಪರಾಧಿಗಳನ್ನು ಹತ್ಯೆ (Killed) ಮಾಡಲಾಗಿದೆ. ಅದೂ, ಮಾದಕ ವಸ್ತು ಅಪರಾಧಕ್ಕಾಗಿ (Drug Offences) ಕತ್ತಿಯಲ್ಲಿ ಅವರ ತಲೆ ಕಡಿದು (Beheaded by Sword) ಸೌದಿ ಅರೇಬಿಯಾ ಅಪರಾಧಿಗಳನ್ನು ಹತ್ಯೆ ಮಾಡಿದೆ. ಈ 12 ಜನರ ಪೈಕಿ ಬಹುತೇಕರನ್ನು ಕತ್ತಿಯಲ್ಲಿ ತಲೆ ಕಡಿಯಲಾಗಿದೆ ಎಂದು ವರದಿಯಾಗಿದೆ. 

ಅಹಿಂಸಾತ್ಮಕ ಮಾದಕ ವಸ್ತು ಅಪರಾಧಗಳಿಗೆ ಇವರಿಗೆ ಗಲ್ಲು ಶಿಕ್ಷೆಯಾಗಿತ್ತು ಎಂದು ತಿಳಿದುಬಂದಿದೆ. ಈ 12 ಜನರಲ್ಲಿ ಮೂವರು ಮಾತ್ರ ಸೌದಿಗಳಾಗಿದ್ದು, ಮೂವರು ಪಾಕ್‌ ಮೂಲದವರು, 4 ಜನ ಸಿರಿಯಾ ಮೂಲದವರು, ಜೋರ್ಡಾನ್‌ ಮೂಲದ ಇಬ್ಬರನ್ನು ಸಹ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಮೂಲಕ 2022ರಲ್ಲಿ ಈವರೆಗೆ 132 ಜನರನ್ನು ಹತ್ಯೆ ಮಾಡಲಾಗಿದ್ದು, 2020 ಹಗೂ 2021 ಎರಡೂ ವರ್ಷಗಳಲ್ಲು ಸೇರಿದರೂ ಇದು ಹೆಚ್ಚು ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. 

ಇದನ್ನು ಓದಿ: ಸಾಮಾಜಿಕ ಜಾಲತಾಣ ಪೋಸ್ಟ್‌ಗಳಿಗೆ 45 ವರ್ಷ ಜೈಲು ಶಿಕ್ಷೆಗೊಳಗಾದ ಸೌದಿ ಮಹಿಳೆ..!

ಗಲ್ಲು ಶಿಕ್ಷೆಯನ್ನು ಕಡಿಮೆ ಮಾಡೋದಾಗಿ ಮೊಹಮ್ಮದ್‌ ಬಿನ್‌ ಸಲ್ಮಾನ್‌ 2018ರಲ್ಲೇ ಹೇಳಿದ್ದರು. ಕೊಲೆ ಅಥವಾ ನರಹತ್ಯೆಯಂತಹ ಅಪರಾಧ ಮಾಡಿದವರಿಗೆ ಮಾತ್ರ ಇಂತಹ ಶಿಕ್ಷೆ ನೀಡೋದಾಗಿಯೂ ಅವರು ಹೇಳಿದ್ದರು. ಸುಮ್ಮನೆ ಎದ್ದು ಸಹಿ ಮಾಆಡೋದಿಲ್ಲ. ಕಾನೂನಿನ ಪ್ರಕಾರ, ಕಾನೂನು ಪುಸ್ತಕದ ಪ್ರಕಾರವಾಗಿಯೇ ರಾಜ ಕೆಲಸ ಮಾಡುತ್ತಾರೆ ಎಂದೂ ಅವರು ಟೈಮ್‌ ಮ್ಯಾಗಜೀನ್‌ಗೆ ಹೇಳಿದ್ದರು. 2020 ರಲ್ಲಿ ಸಹ ಅಹಿಂಸಾತ್ಮಕ ಅಪರಾಧಗಳಿಗೆ ಶಿಕ್ಷೆ ಕಡಿಮೆ ಮಾಡೋದಾಗಿಯೂ ಸೌದಿ ಅರೇಬಿಯಾ ಹೇಳಿತ್ತು. 

ಜಮಾಲ್‌ ಕಶೋಗಿ ಹತ್ಯೆ ಪ್ರಕರಣದ ಬಳಿಕ ಗಲ್ಲು ಶಿಕ್ಷೆಯ ಕಾನೂನು ಬದಲಾವಣೆ ಮಾಡೋದಾಗಿಯೂ ಸೌದಿ ಅರೇಬಿಯಾ ಭರವಸೆ ನೀಡಿತ್ತು. ಜಮಾಲ್‌ ಕಶೋಗಿಯನ್ನು 2018 ಅಕ್ಟೋಬರ್‌ನಲ್ಲಿ ಸೌದಿ ಅರೇಬಿಯಾದ ಇಸ್ತಾನ್‌ಬುಲ್‌ ಕಾನ್ಸುಲೇಟ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಇದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸೇರಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. 

ಇದನ್ನೂ ಓದಿ: ರಹಸ್ಯವಾಗಿ ಮೆಕ್ಕಾ ತಲುಪಿದ ಮುಸ್ಲೀಮೇತರ ವ್ಯಕ್ತಿ, ವಿಶ್ವದ ಮುಸ್ಲೀಮರ ಆಕ್ರೋಶ!

ಈ ಹತ್ಯೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ರಿಪ್ರೈವ್‌ ಎಂಬ ಹಕ್ಕುಗಳ ಸಂಘಟನೆಯ ನಿರ್ದೇಶಕಿ ಮಾಯಾ ಫೋವಾ, ತನ್ನ ಅಭಿವೃದ್ಧಿಯ ಅಥವಾ ಪ್ರಗತಿಯ ದೃಷ್ಟಿ ಬಗ್ಗೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಪದೇ ಪದೇ ಮಾತನಾಡುತ್ತಾರೆ. ಅಲ್ಲದೆ, ನೇಣಿಗೇರಿಸುವುದನ್ನು ಸಹ ಕಡಿಮೆ ಮಾಡುವುದಾಗಿ ಪಣ ತೊಟ್ಟಿರುವುದಾಗಿ ಹಾಗೂ ಮಾದಕ ವಸ್ತು ಅಪರಾಧಗಳಿಗೆ ಗಲ್ಲು ಶಿಕ್ಷೆ ನಿಲ್ಲಿಸುವುದಾಗಿಯೂ ಹೇಳಿದ್ದರು. ಆದರೆ, ಈ ವರ್ಷ ಹೆಚ್ಚು ಜನರನ್ನು ಹತ್ಯೆ ಮಾಡಲಾಗಿದೆ. ಮಾದಕ ವಸ್ತು ಅಪರಾಧಿಗಳಿಗೆ ಸೌದಿ ಅರೇಬಿಯಾ ಮತ್ತೆ ಹೆಚ್ಚು ಜನರಿಗೆ ಗಲ್ಲು ಶಿಕ್ಷೆ ನೀಡುತ್ತಿದೆ ಹಾಗೂ ಸಾರ್ವಜನಿಕವಾಗಿ ಮಾಡುವ ಬದಲು ಈಗ ರಹಸ್ಯವಾಗಿ ಮಾಡಲಾಗುತ್ತಿದೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಸೌದಿ ಅರೇಬಿಯಾ ನೆಲದಲ್ಲಿ ಪಾಕ್ ಪ್ರಧಾನಿಗೆ 'ಕಳ್ಳ' ಎಂದ ಪ್ರಜೆಗಳು!

Follow Us:
Download App:
  • android
  • ios