Asianet Suvarna News Asianet Suvarna News

Bengaluru; ನಕಲಿ ದಾಖಲೆ ಸೃಷ್ಟಿಸಿ ಸೈಟ್ ಕಬ್ಜಾ ಮಾಡ್ತಿದ್ದ ಆರೋಪಿ ಬಂಧನ

ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ ಸೈಟ್ ಕಬ್ಜಾ ಮಾಡ್ತಿದ್ದ ಆರೋಪಿಯನ್ನು ಬೆಂಗಳೂರಿನ ಜಯನಗರದಲ್ಲಿ ಬಂಧಿಸಲಾಗಿದೆ. ಇನ್ನು ಮೈಸೂರಿನಲ್ಲೂ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದ್ದು, ಮೂವರನ್ನು ಬಂಧಿಸಲಾಗಿದೆ.

Man arrested who create fake property documents in Bengaluru gow
Author
First Published Sep 7, 2022, 8:33 PM IST

ಬೆಂಗಳೂರು (ಸೆ.7): ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ ಸೈಟ್ ಕಬ್ಜಾ ಮಾಡ್ತಿದ್ದ ಆರೋಪಿಯನ್ನು ಬೆಂಗಳೂರಿನ ಜಯನಗರದಲ್ಲಿ ಬಂಧಿಸಲಾಗಿದೆ.  ಜಯನಗರ ಪೊಲೀಸರಿಂದ ಬಂಧಿತನಾಗಿರುವ ಆರೋಪಿಯನ್ನು ಕಿರಣ್ ಕುಮಾರ್ ಎಂದು ಗುರುತಿಸಲಾಗಿದ್ದು,  ಈತ ಕಿರಣ್ ಎಂಬ ಹೆಸರಿನ ಸೈಟ್ ಗಳನ್ನು ಟಾರ್ಗೇಟ್ ಮಾಡಿ ದಾಖಲೆ ಸಂಗ್ರಹಿಸಿ ವಂಚನೆ ಮಾಡುತ್ತಿದ್ದ. ನಕಲಿ ದಾಖಲೆಗಳನ್ನ ಸೃಷ್ಟಿ ಮಾಡಿ ಸೈಟನ್ನ ರಿಜಿಸ್ಟರ್ ಮಾಡಿಕೊಡ್ತಿದ್ದ. ಸೈಟ್ ಓನರ್ ತಾನೇ ಅಂತ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತೋರಿಸಿಕೊಳ್ತಿದ್ದ. ಎಲ್ಲಾ ನಕಲಿ ದಾಖಲೆಗಳನ್ನ  ಸಿದ್ದಪಡಿಸಿ ಸೈಟ್ ಸೇಲ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಕಿರಣ್ ವಿರುದ್ದ ಜಯನಗರ ಠಾಣೆಯಲ್ಲಿ ಎರಡು ವಂಚನೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಕಿರಣ್ ನನ್ನು ಬಂಧನ ಮಾಡಿದ್ದಾರೆ. ಆರೋಪಿ ಕಿರಣ್ ಮತ್ತಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಹಿನ್ನಲೆ ಜಯನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಮೈಸೂರಿನಲ್ಲಿ ನಿವೇಶನ, ಜಮೀನುಗಳ ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿದ್ದ ಮೂವರ ಬಂಧನ
ಮೈಸೂರು: ಸೈಟು ಮತ್ತು ಜಮೀನುಗಳ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡುತ್ತಿದ್ದ ಮೂವರನ್ನು ಮೈಸೂರಿನ ಕುವೆಂಪುನಗರ ಠಾಣೆಯ ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸುತ್ತಿದ್ದ ದಾಖಲಾತಿ, ಸೀಲುಗಳು, ಲ್ಯಾಪ್‌ಟಾಪ್‌, ಪ್ರಿಂಟರ್‌, ಸ್ಕಾ್ಯನರ್‌ ಮತ್ತು ಮೊಬೇಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಸರ್ವಿಸ್‌ ಅಪಾರ್ಚ್‌ಮೆಂಟ್‌ವೊಂದರಲ್ಲಿ ಮೂರು ಜನರು ಸೈಟ್‌ ಮತ್ತು ಜಮೀನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜನರನ್ನು ವಂಚಿಸಿ, ಮೋಸದಿಂದ ಅಕ್ರಮ ಲಾಭ ಮಾಡಿಕೊಳ್ಳುತ್ತಿರುವುದಾಗಿ ಡಿಸಿಪಿ ಪ್ರದೀಪ್‌ ಗುಂಟಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಈ ಆರೋಪಿಗಳ ಪತ್ತೆ ಡಿಸಿಪಿ ವಿಶೇಷ ತಂಡವನ್ನು ರಚಿಸಿದ್ದರು.

Udupi; ಪಿಟ್ಟಿ ನಾಗೇಶ್ ಕೊಲೆ ಪ್ರಕರಣ, ಐವರು ಆರೋಪಿಗಳು ಖುಲಾಸೆ

ಈ ತಂಡ ಕುವೆಂಪು ನಗರ ಠಾಣೆ ವ್ಯಾಪ್ತಿಯ ರಾಮಕೃಷ್ಣ ನಗರ ಐ ಬ್ಲಾಕ್‌ನ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಗೋಲ್ಡನ್‌ ಬೆಲ್ಸ್‌ ಸವೀರ್‍ಸ್‌ ಅರ್ಪಾಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿರುವ ರೂಂ ನಂ.301ರ ಮೇಲೆ ಸೋಮವಾರ ದಾಳಿ ಮಾಡಿ ಪರಿಶೀಲಿಸಿದ್ದು, ಮೂವರು ಆರೋಪಿಗಳು ಸೈಟ್‌ಗಳು ಮತ್ತು ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿರುವ ಕೃತ್ಯದಲ್ಲಿ ತೊಡಗಿರುವುದು ಕಂಡು ಬಂದ ಮೇರೆಗೆ ಮೂರು ಜನ ಆರೋಪಿಗಳನ್ನು ಬಂಧಿಸಿ, ನಕಲಿ ದಾಖಲಾತಿಗಳನ್ನು ಸೃಷ್ಟಿಸಲು ಬಳಸುತ್ತಿದ್ದ ಪರಿಕರಗಳನ್ನು, ವಿವಿಧ ಬ್ಯಾಂಕ್‌ಗಳು ಮತ್ತು ವಿವಿಧ ಇಲಾಖೆಗಳಿಗೆ ಸೇರಿದ ನಕಲಿ ಸೀಲ್‌ಗಳು, ಅಧಿಕಾರಿಗಳ ನಕಲಿ ಸೀಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TUMAKURU; ಚಿರತೆ ಚರ್ಮ ಸಾಗಾಟ ಮಾಡ್ತಿದ್ದ ಇಂಜಿನಿಯರಿಂಗ್ ಪದವೀಧರ ಅರೆಸ್ಟ್

ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಡಿಸಿಪಿ ಪ್ರದೀಪ್‌ ಗುಂಟಿ, ಕೃಷ್ಣರಾಜ ವಿಭಾಗದ ಎಸಿಪಿ ಎಸ್‌.ಇ. ಗಂಗಾಧರಸ್ವಾಮಿ ಮಾರ್ಗದರ್ಶನದಲ್ಲಿ ಕುವೆಂಪುವಗರ ಠಾಣೆಯ ಇನ್ಸ್‌ಪೆಕ್ಟರ್‌ ಕೆ. ಷಣ್ಮುಗವರ್ಮ, ಎಸ್‌ಐ ಎಂ. ರಾಧ, ಎಸ್‌.ಪಿ. ಗೋಪಾಲ್‌, ಪ್ರೊ. ಪಿಎಸ್‌ಐ ಪ್ರಭು, ಎಎಸ್‌ಐ ಮುರಳೀಗೌಡ, ಸಿಬ್ಬಂದಿ ಪುರುಷೋತ್ತಮ್‌, ಕೃಷ್ಣ, ಮಂಜುನಾಥ್‌, ರಾಜುಸಾಬ್‌, ಮೌನೇಶ, ಅಮೋಘ್‌, ಪುಟ್ಟಪ್ಪ, ಹಜರತ್‌ ಅಲಿ, ಮಹೇಶ್‌, ಯೋಗೇಶ ಈ ಪತ್ತೆ ಮಾಡಿದ್ದಾರೆ.

Follow Us:
Download App:
  • android
  • ios