Tumakuru; ಚಿರತೆ ಚರ್ಮ ಸಾಗಾಟ ಮಾಡ್ತಿದ್ದ ಇಂಜಿನಿಯರಿಂಗ್ ಪದವೀಧರ ಅರೆಸ್ಟ್
ತುಮಕೂರಿನ ಚಿಕ್ಕಬೆನಕನಕೆರೆ ಬಳಿ ಟಿವಿಎಸ್ ಬೈಕ್ ನಲ್ಲಿ ಚಿರತೆ ಚರ್ಮ ಸಾಗಾಟ ಮಾಡ್ತಿದ್ದ ಇಂಜಿನಿಯರಿಂಗ್ ಪದವೀಧರನೋರ್ವ ಅರೆಸ್ಟ್ ಆಗಿದ್ದಾನೆ. ಇನ್ನೊಂಡೆದೆ ಸ್ನೇಹಿತನಿಗೆ ಚಾಕು ಇರಿದು ಹೆದರಿ ಬಿಲ್ಡಿಂಗ್ ಮೇಲಿಂದ ಯುವಕನೋರ್ವ ಹಾರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ತುಮಕೂರು (ಸೆ.7): ತುಮಕೂರಿನ ಚಿಕ್ಕಬೆನಕನಕೆರೆ ಬಳಿ ಟಿವಿಎಸ್ ಬೈಕ್ ನಲ್ಲಿ ಚಿರತೆ ಚರ್ಮ ಸಾಗಾಟ ಮಾಡ್ತಿದ್ದ ಇಂಜಿನಿಯರಿಂಗ್ ಪದವೀಧರನೋರ್ವ ಅರೆಸ್ಟ್ ಆಗಿದ್ದಾನೆ. ಸಿಐಡಿ ಅರಣ್ಯ ಘಟಕದ ಪೊಲೀಸರು ಆರೋಪಿ ಚರಣ್ ಎಂಬಾತನನ್ನು ಬಂಧಿಸಿದ್ದಾರೆ. ಸಿಐಡಿ ಅರಣ್ಯ ಘಟಕದ ಇನ್ಸ್ ಪೆಕ್ಟರ್ ಸಂಜೀವ್ ಕುಮಾರ್ ಮಹಾಜನ್ ಮತ್ತು ಅವರ ತಂಡ ದಾಳಿ ನಡೆಸಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಂಧಿತನಿಂದ ಚಿರತೆ ಚರ್ಮ, 17 ಉಗುರು, ಮುಖದ ಭಾಗವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಸ್ನೇಹಿತನಿಗೆ ಚಾಕು ಇರಿದು ಹೆದರಿ ಬಿಲ್ಡಿಂಗ್ ಮೇಲಿಂದ ಹಾರಿದ ಯುವಕ
ಬೆಂಗಳೂರು: ಸ್ನೇಹಿತನಿಗೆ ಚಾಕು ಇರಿದು ಹೆದರಿ ಬಿಲ್ಡಿಂಗ್ ಮೇಲಿಂದ ಯುವಕನೋರ್ವ ಹಾರಿದ ಘಟನೆ ಬೆಂಗಳೂರಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ. ಬಿಲ್ಡಿಂಗ್ ನಿಂದ ಜಂಪ್ ಮಾಡಿದ ಯುವಕ ನಾಗಾಲ್ಯಾಂಡ್ ಮೂಲದ ರೋಹಿತ್ ಎಂದು ತಿಳಿದುಬಂದಿದ್ದು, ರೋಹಿತ್ ಹಾಗೂ ಸ್ನೇಹಿತರು ಪಾಟೀಲ್ ಲೇಔಟ್ ನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದರು. ಕೋರಮಂಗಲದ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು.
Udupi; ಪಿಟ್ಟಿ ನಾಗೇಶ್ ಕೊಲೆ ಪ್ರಕರಣ, ಐವರು ಆರೋಪಿಗಳು ಖುಲಾಸೆ
ನಿನ್ನೆ ಕುಡಿದ ಮತ್ತಿನಲ್ಲಿ ರೋಹಿತ್ ರೂಂಮೇಟ್ ಹೇಕಾ ಎನ್ನುವವನ ಜೊತೆ ಗಲಾಟೆಗಿಳಿದಿದ್ದ. ಗಲಾಟೆ ಅತಿರೇಕಕ್ಕೆ ಹೋಗಿ ಕತ್ತರಿಯಿಂದ ಹೇಕಾ ಕಿಬ್ಬೊಟ್ಟೆಗೆ ಇರಿದಿದ್ದ ರೋಹಿತ್. ಹೇಕಾಗೆ ಗಾಯವಾಗ್ತಿದ್ದಂತೆ ಉಳಿದ ರೂಂಮೇಟ್ ಗಳು ಆತನ ಸಹಾಯಕ್ಕೆ ಬಂದಿದ್ದರು. ಈ ವೇಳೆ ಹೆದರಿದ ರೋಹಿತ್ ರೂಂ ಬಾಗಿಲನ್ನ ಹಾಕಿ ಕಿಟಿಕಿಯ ಮುಖಾಂತರ ಮೂರಂತಸ್ತಿನಿಂದ ಜಂಪ್ ಮಾಡಿದ್ದಾನೆ. ಗಂಭೀರ ಗಾಯಗೊಂಡ ರೋಹಿತ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.