Asianet Suvarna News Asianet Suvarna News

ಪಾಕ್ ಐಎಸ್‌ಐ ಪರ ಭಾರತೀಯ ಸೇನೆ ಮೇಲೆ ಗೂಢಚಾರಿಕೆ ನಡೆಸುತ್ತಿದ್ದ ಗುಜರಾತ್‌ ವ್ಯಕ್ತಿ ಅರೆಸ್ಟ್

ಆರೋಪಿ ದೀಪಕ್‌ ಸಾಳುಂಕೆ  ಪಾಕಿಸ್ತಾನದ ಹಮೀದ್ ಎಂಬ ಐಎಸ್‌ಐ (ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ಏಜೆಂಟ್‌ನಿಂದ ಇದುವರೆಗೆ 75,856 ರೂ. ಹಣ ಪಡೆದಿದ್ದಾನೆ. ಮಹಿಳೆಯ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ದೀಪಕ್‌ ಸಾಳುಂಕೆಯನ್ನು ಐಎಸ್‌ಐ ಹನಿ ಟ್ರ್ಯಾಪ್ ಮಾಡಿತ್ತು ಎಂದೂ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

man arrested for spying on indian army for pakistans isi in surat say police ash
Author
First Published Dec 14, 2022, 1:27 PM IST

ಪಾಕಿಸ್ತಾನಿ ಗುಪ್ತಚರ ಸಂಸ್ಥೆ (Pakistan Investigation Agency) ಐಎಸ್‌ಐಗಾಗಿ (ISI) ಗೂಢಚಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಗುಜರಾತ್‌ನ (Gujarat) ಸೂರತ್ (Surat) ನಗರದ ವ್ಯಕ್ತಿಯೊಬ್ಬರನ್ನು ಮಂಗಳವಾರ ಬಂಧಿಸಲಾಗಿದೆ. ಆರೋಪಿ ಭಾರತೀಯ ಸೇನೆಯ (Indian Army)  ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ತನ್ನ ಹ್ಯಾಂಡ್ಲರ್ ಏಜೆಂಟ್‌ನೊಂದಿಗೆ ಹಣಕ್ಕಾಗಿ ಹಂಚಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ನಿರ್ದಿಷ್ಟ ಸುಳಿವು ಆಧರಿಸಿ, ಗುಜರಾತ್‌ನ (Gujarat) ಸೂರತ್ ಕ್ರೈಂ ಬ್ರಾಂಚ್ (Surat Crime Branch) ಅಲ್ಲಿನ ಭುವನೇಶ್ವರಿ ನಗರ ಪ್ರದೇಶದ ನಿವಾಸಿ ದೀಪಕ್ ಸಾಳುಂಕೆ ಎಂಬಾತನನ್ನು ಬಂಧಿಸಿದೆ.

ಆರೋಪಿ ದೀಪಕ್‌ ಸಾಳುಂಕೆ  ಪಾಕಿಸ್ತಾನದ ಹಮೀದ್ ಎಂಬ ಐಎಸ್‌ಐ (ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) (Inter Services Intelligence) ಏಜೆಂಟ್‌ನಿಂದ ಇದುವರೆಗೆ 75,856 ರೂ. ಹಣ ಪಡೆದಿದ್ದಾನೆ ಎಂದೂ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಹಿಳೆಯ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ದೀಪಕ್‌ ಸಾಳುಂಕೆಯನ್ನು ಐಎಸ್‌ಐ ಹನಿ ಟ್ರ್ಯಾಪ್ (Honey Trap) ಮಾಡಿತ್ತು. ಬಳಿಕ, ಆತನ ನಂಬಿಕೆ ಗಳಿಸಿದ ನಂತರ, ಆ ಫೇಸ್‌ಬುಕ್‌ ಖಾತೆಯ ಹ್ಯಾಂಡ್ಲರ್ ತನ್ನನ್ನು ಹಮೀದ್ ಎಂದು ಪರಿಚಯಿಸಿಕೊಂಡಿದ್ದಾನೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಭಾರತದ ವಿರೋಧವಿದ್ದರೂ ಲಂಕಾಗೆ ಬರಲಿದೆ ಚೀನಿ ಗೂಢಚಾರಿಕೆ ಹಡಗು

ಅಲ್ಲದೆ, ಹಮೀದ್‌ ನಿರ್ದೇಶನದ ಮೇರೆಗೆ ಆರೋಪಿ ದೀಪಕ್‌ ಸಾಳುಂಕೆ, ಭಾರತೀಯ ಸೇನೆಯ ಬಗ್ಗೆ ಸೂಕ್ಷ್ಮ ಮಾಹಿತಿ ಮತ್ತು ಅದರ ಚಲನವಲನದ ವಿವರಗಳನ್ನು ವಾಟ್ಸಾಪ್‌ ಸಂದೇಶಗಳು ಮತ್ತು ಕರೆಗಳ ಮೂಲಕ ತಿಳಿಸುತ್ತಿದ್ದ. ಹಮೀದ್‌ ಕಾಂಟ್ಯಾಕ್ಟ್‌ಗಳ ಮೂಲಕ ಪಡೆದ ಸಿಮ್ ಕಾರ್ಡ್ ಬಳಸಿ ಆರೋಪಿ ಮಾಹಿತಿ ಹಂಚಿಕೊಳ್ಳಲು ಪ್ರಾರಂಭಿಸಿದ್ದಾನೆ ಎಂದೂ ಪ್ರಕಟಣೆ ತಿಳಿಸಿದೆ. 

ಸೂರತ್ ನಗರದಲ್ಲಿ ಆರೋಪಿ ದೀಪಕ್‌ ಸಾಳುಂಕೆ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಇನ್ನು, ಈ ಆರೋಪದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ದೇಶದ್ರೋಹ ಆರೋಪಿ ರಷ್ಯಾ ವಿಜ್ಞಾನಿ ನಿಗೂಢ ಸಾವು!

ವಿದೇಶಾಂಗ ಸಚಿವಾಲಯದ ಚಾಲಕನ ಬಂಧನ..!
ಇನ್ನು, ಈ ರೀತಿಯ ಘಟನೆ ನಡೆದಿರೋದು ಇದೇ ಮೊದಲೇನಲ್ಲ. ಪಾಕಿಸ್ತಾನಕ್ಕೆ ಸೂಕ್ಷ್ಮ ಮತ್ತು ಖಾಸಗಿ ಮಾಹಿತಿ ರವಾನಿಸಿದ್ದಕ್ಕಾಗಿ ಭದ್ರತಾ ಸಂಸ್ಥೆಗಳ ನೆರವಿನೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಚಾಲಕನನ್ನು ದೆಹಲಿ ಪೊಲೀಸರು ನವೆಂಬರ್‌ನಲ್ಲಿ ಬಂಧಿಸಿದ್ದರು. ಈ ಚಾಲಕನನ್ನು ಸಹ ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಹನಿ-ಟ್ರ್ಯಾಪ್ ಮಾಡಿತ್ತು ಎಂದು ತಿಳಿದುಬಂದಿದೆ. ಆ ಚಾಲಕನ ರೀತಿ ಹೆಚ್ಚಿನ MEA ಸಿಬ್ಬಂದಿ ಸಹ ಐಎಸ್‌ಐ ಜತೆ ಸಂಪರ್ಕ ಹೊಂದಿದ್ದಾರಾ ಎಂಬುದನ್ನು ನಿರ್ಧರಿಸಲು, ಕಾನೂನು ಜಾರಿ ಮತ್ತು ಗುಪ್ತಚರ ಸೇವೆಗಳು ತನಿಖೆಯನ್ನು ಪ್ರಾರಂಭಿಸಿದ್ದವು. 

ಅದೇ ರೀತಿ, ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ರಾಜಸ್ಥಾನ ಪೊಲೀಸರು ಈ ವರ್ಷದ ಆರಂಭದಲ್ಲಿ ದೆಹಲಿಯಿಂದ 46 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ. 2016 ರಲ್ಲಿ, ಆ ವ್ಯಕ್ತಿಗೆ ಭಾರತೀಯ ಪೌರತ್ವವನ್ನು ನೀಡಲಾಗಿತ್ತು.

ಇದನ್ನೂ ಓದಿ: ಭಾರತದ ಗೂಢಚಾರಿಕೆ ನಡೆಸಲು 'ಸುಂದರಿ'ಯರ ಪಡೆಯನ್ನೇ ಸಿದ್ಧಪಡಿಸಿದೆ ಪಾಕಿಸ್ತಾನ!

ಅಲ್ಲದೆ, ಅಕ್ಟೋಬರ್‌ನಲ್ಲಿ, 'ಬೌದ್ಧ ಸನ್ಯಾಸಿ' ಎಂದು ಹೇಳಿಕೊಂಡ 50 ವರ್ಷದ ಚೀನೀ ಮಹಿಳೆಯನ್ನು ಚೀನಾದ ಗೂಢಚಾರಿ ಇರಬಹುದು ಎಂದು ಶಂಕಿಸಿ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. 

Follow Us:
Download App:
  • android
  • ios