Naxalism: ಹೊಸಗದ್ದೆ ಪ್ರಭಾ ಸರೆ, ಮಲೆನಾಡಿನ ನಕ್ಸಲ್ ಚಟುವಟಿಕೆಗೆ ಬಹುತೇಕ ಫುಲ್‌ಸ್ಟಾಪ್
* ತಮಿಳುನಾಡು ಪೊಲೀಸರಿಗೆ ಶರಣಾದ ನಕ್ಸಲ್ ಹೊಸಗದ್ದೆ ಪ್ರಭಾ
* ವೈಯನಾಡು ಪ್ರದೇಶದಲ್ಲಿ ಪೊಲೀಸರ ಕಾರ್ಯಾಚರಣೆಯ ವೇಳೆ ಸೆರೆ
* ಮಲೆನಾಡಿನ ನಕ್ಸಲ್ ಚಟುವಟಿಕೆಗೆ ಬಹುತೇಕ ಫುಲ್‌ಸ್ಟಾಪ್
ಶಿವಮೊಗ್ಗ, (ಡಿ.19): ಕಳೆದ 20 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಾಡುಮೇಡು ಅಲೆಯುತ್ತಾ ನಕ್ಸಲ್ (Naxal) ಸಂಘಟನೆಯನ್ನು ಬಳಗೊಳಿಸುತ್ತಿದ್ದ ಬಿ. ಜಿ. ಕೃಷ್ಣಮೂರ್ತಿ ಕೇರಳ ಪೊಲೀಸರ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದ ಬೆನ್ನಲ್ಲೇ ಇದೀಗ ಕೃಷ್ಣಮೂರ್ತಿ ಪತ್ನಿ ಎನ್ನಲಾದ ಹೊಸಗದ್ದೆ ಪ್ರಭಾ(Hosagadde Prabha ) ತಮಿಳುನಾಡಿನ ಪೊಲೀಸರಿಗೆ ಶರಣಾಗಿದ್ದಾಳೆ.
ಈ ಮೂಲಕ ಮಲೆನಾಡಿನ Malenadu) ನಕ್ಸಲ್‌ನ ಕೊನೆಯ ಕೊಂಡಿಯೂ ಕಳಚಿ ಬಿದ್ದಂತಾಗಿದೆ. ಇದಲ್ಲದೆ, ಪ್ರಭಾ ಶರಣಾಗತಿಯ ಮೂಲಕ ಕಟ್ಟರ್ ನಕ್ಸಲರು ಕೂಡ ತಮ್ಮ ಹಾದಿಯಲ್ಲಿ ಯಶಸ್ಸು ಸಿಗದು ಎಂಬುದನ್ನು ಸ್ಪಷ್ಟವಾಗಿ ಮನಗಂಡಂತೆ ಕಾಣುತ್ತಿದ್ದು, ಕಾಡಿನ ಹೋರಾಟಕ್ಕಿಂತ ನಾಡಿನ ನಡುವಿನ ಹೋರಾಟವೇ ಮೇಲು ಎಂದು ಭಾವಿಸಿದಂತೆ ಕಾಣುತ್ತಿದೆ. ಅಥವಾ ಕೃಷ್ಣಮೂರ್ತಿಯ ಬಂಧನದ ನಂತರ ಹೋರಾಟದಲ್ಲಿ ಗಟ್ಟಿತನ ಸಿಗುವುದು ಸಾಧ್ಯವೇ ಇಲ್ಲ ಎಂದು ಖಚಿತ ನಿಲುವಿಗೆ ಬಂದು ಈ ಶರಣಾಗತಿ ನಡೆದಿದೆಯೇ ಎಂಬ ಇನ್ನೊಂದು ಪ್ರಶ್ನೆಯೂ ಇಲ್ಲಿ ಮೂಡಿದೆ.
Chikkamagaluru : ಮುಖ್ಯವಾಹಿಯತ್ತ ಬರಲು ನಕ್ಸಲರ ಒಲವು, ವೇದಿಕೆಯೇ ಇಲ್ಲವಾಗಿದೆ
ಒಟ್ಟಾರೆಯಾಗಿ ಹೊಸಗದ್ದೆೆ ಪ್ರಭಾ ಶರಣಾಗತಿಯ ಮೂಲಕ ಮಲೆನಾಡಿನ ನಕ್ಸಲ್ ಚಟುವಟಿಕೆಗೆ ಬಹುತೇಕ ಫುಲ್‌ಸ್ಟಾಪ್ ಬಿದ್ದಂತಾಗಿದೆ. ಆದರೆ ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ ನಕ್ಸಲ್ ಬಿ. ಜಿ. ಕೃಷ್ಣಮೂರ್ತಿ ಕೇರಳದ ವೈಯನಾಡು ಪ್ರದೇಶದಲ್ಲಿ ಪೊಲೀಸರ ಕಾರ್ಯಾಚರಣೆಯ ವೇಳೆ ಸೆರೆ ಸಿಕ್ಕರೆ, ಇತ್ತ ಆತನ ಸಂಗಾತಿ ಪ್ರಭಾ ತಮಿಳುನಾಡಿನ ಪೊಲೀಸರಿಗೆ ಶರಣಾಗಿದ್ದಾಳೆಂದರೆ ಈ ಇಬ್ಬರು ತಮ್ಮ ಸಂಗಾತಿಗಳೊಂದಿಗೆ ಕರ್ನಾಟಕ ತೊರೆದು ಬೇರೆ ಕಡೆ ಬೇರೂರಿ ಬಹಳ ಸಮಯವಾಗಿದೆ ಎಂಬುದು ಕೂಡ ಬೆಳಕಿಗೆ ಬಂದಂತಾಗಿದೆ.
ಪ್ರಭಾ 2010 ರಿಂದ ಎಲ್ಲಿಯೂ ಪೊಲೀಸರಿಗೆ ಕಾಣಿಸಿರಲಿಲ್ಲ. ಅಥವಾ ಪೊಲೀಸರ ಅರಿವಿಗೆ ಈಕೆಯ ಚಲನವಲನಗಳು ಕಂಡು ಬಂದಿರಲಿಲ್ಲ. ಹೀಗಾಗಿ ಈಕೆ ಮೃತಳಾಗಿರಬೇಕು ಎಂದು ಭಾವಿಸಲಾಗಿತ್ತು. ಬಿ. ಜಿ. ಕೃಷ್ಣಮೂರ್ತಿಯ ಸೆರೆಯ ಬಳಿಕ, ಆಕೆಯ ಜೊತೆ ಈಕೆಯ ಬದಲಿಗೆ ಸಾವಿತ್ರಿ ಎಂಬಾಕೆ ಇದ್ದುದನ್ನು ನೋಡಿದ ಹೊರ ಜಗತ್ತು ಈಕೆ ನಿಜಕ್ಕೂ ಇಲ್ಲ ಎಂದೇ ಭಾವಿಸಿತ್ತು.
ಆದರೆ ಏಕಾಏಕಿ ಈಕೆ ಈಗ ಶರಣಾಳಾಗಿದ್ದಾಾಳೆ. ಮಲೆನಾಡಿನ ಆರಂಭಿಕ ನಕ್ಸಲ್ ಚಳವಳಿಯಲ್ಲಿ ಕಾಣಿಸಿಕೊಂಡ ಸಿರಿಮನೆ ನಾಗರಾಜ್ ಮತ್ತಿತರರು ಶರಣಾಗತಿಯ ಮೂಲಕ ಮುಖ್ಯವಾಹಿನಿಗೆ ಬಂದ ಬಳಿಕವೂ ಬಿ. ಜಿ. ಕೃಷ್ಣಮೂರ್ತಿಯಾಗಲೀ ಅಥವಾ ಈತನ ಪತ್ನಿ ಎನ್ನಲಾದ ಹೊಸಗದ್ದೆ ಪ್ರಭಾ ಮತ್ತವರ ತಂಡವಾಗಲೀ ಶರಣಾಗತಿಗೆ ನಿರಾಕರಣೆ ಮಾಡಿ ತಮ್ಮ ನಕ್ಸಲ್ ಹಾದಿಯಲ್ಲಿಯೇ ಸಾಗಿ ಹೋಗಿದ್ದರು.
ಆದರೆ ಏಕಾಏಕಿಯಾಗಿ ಈ ಹೊತ್ತಿನಲ್ಲಿ ಶರಣಾಗಿತಿಯಾಗುತ್ತಿದ್ದಾಾರೆಂದರೆ ಇದು ನೇರವಾಗಿ ನಕ್ಸಲ್ ಬಿ.ಜಿ. ಕೃಷ್ಣಮೂರ್ತಿಯ ಬಂಧನವೇ ಕಾರಣ ಎನ್ನಲಾಗುತ್ತಿದೆ. ಅಂದರೆ ಕೃಷ್ಣಮೂರ್ತಿ ಇಲ್ಲದ ನಕ್ಸಲ್ ಹೋರಾಟ ಯಶಸ್ಸು ಕಾಣದು ಎಂಬುದು ಈತನ ಸಮೀಪದ ವರ್ತಿಗಳ ಅಭಿಪ್ರಾಾಯವೂ ಆಗಿರಬಹುದು.
ಇನ್ನೊಂದೆಡೆ ಬಿ. ಜಿ. ಕೃಷ್ಣಮೂರ್ತಿಯ ಆರೋಗ್ಯದ ಕುರಿತು ಸಾಕಷ್ಟು ವಿಷಯ ಹರಿದಾಡುತ್ತಿತ್ತು. ಆತ ತೀವ್ರ ಅಸ್ವಸ್ಥನಾಗಿದ್ದಾನೆ ಎಂಬ ಮಾತು ಕೇಳಿ ಬರುತ್ತಿತ್ತು. ಈತ ಮೃತಪಟ್ಟಿರಬಹುದು ಎಂಬ ಸುದ್ದಿಯೂ ಇತ್ತು. ಆದರೆ ಈಗ ಸಿಕ್ಕಿರುವ ಫೋಟೋ ನೋಡಿದ ಬಳಿಕ ಈತ ಆರೋಗ್ಯವಾಗಿಯೇ ಇದ್ದಂತಿದೆ.