ಆನ್‌ಲೈನ್‌ ಜೂಜಾಟದಲ್ಲಿ 5 ಕೋಟಿ ಗೆದ್ದ ಸಂಭ್ರಮದಲ್ಲಿದ್ದ ಉದ್ಯಮಿಗೆ ಶಾಕ್‌: ಬರೋಬ್ಬರಿ 58 ಕೋಟಿ ರೂ. ನಷ್ಟ

ಮಹಾರಾಷ್ಟ್ರದ ನಾಗ್ಪುರದ ಉದ್ಯಮಿಯೊಬ್ಬರು ಶಂಕಿತ ಬುಕ್ಕಿಯೊಬ್ಬರ ಒತ್ತಾಯದಿಂದ ಆನ್‌ಲೈನ್ ಜೂಜಾಟ ಆಡಿ ಆರಂಭದಲ್ಲಿ 5 ಕೋಟಿ ರೂ. ಹಣ ಲಾಭ ಗಳಿಸಿದ್ದಾನೆ. ಬಳಿಕ, 58 ಕೋಟಿ ರೂ. ದುಡ್ಡನ್ನು ಕಳೆದುಕೊಂಡಿದ್ದಾರೆ. 

maharashtra man wins 5 crore while gambling online then loses 58 crore ash

ನಾಗ್ಪುರ (ಜುಲೈ 23, 2023): ಇತ್ತೀಚೆಗೆ ಆನ್‌ಲೈನ್‌ ಗೇಮ್‌, ರಮ್ಮಿ, ಜೂಜಾಟ ಮುಂತಾದ ಅಪ್ಲಿಕೇಷನ್‌ಗಳಿಗೆ ಜನ ದುಡ್ಡು ಹಾಕಿ ಸಾಕಷ್ಟು ಹಣ ಕಳ್ಕೊಂಡಿದ್ದಾರೆ. ಕೆಲವರು ಕೋಟಿ ಕೋಟಿ ರೂ. ಗಳಿಸಿದ್ದು, ದೊಡ್ಡ ಸುದ್ದಿಯಾದ್ರೂ ಬಳಿಕ ಹಣ ಕಳ್ಕೊಂಡಿದ್ದು ಸುದ್ದಿಯಾಗಲ್ಲ. ಇದೇ ರೀತಿ, ನಾಗ್ಪುರದ ಉದ್ಯಮಿಯೊಬ್ಬರು ಆನ್‌ಲೈನ್ ಜೂಜಾಟದಲ್ಲಿ 5 ಕೋಟಿ ರೂ. ಗೆದ್ದರೂ, ನಂತರ 58 ಕೋಟಿ ರೂ. ಕಳೆದುಕೊಂಡಿದ್ದಾರೆ. ಇಂತಹ ಆನ್‌ಲೈನ್‌ ಗ್ಯಾಂಬ್ಲಿಂಗ್, ಇತರೆ ಆಟಗಳನ್ನ ನೀವು ಆಡ್ತಿದ್ರೆ ಈಗಲಾದ್ರೂ ಎಚ್ಚರವಹಿಸಿ.. ವಿವರಕ್ಕಾಗಿ ಮುಂದೆ ಓದಿ..

ಮಹಾರಾಷ್ಟ್ರದ ನಾಗ್ಪುರದ ಉದ್ಯಮಿಯೊಬ್ಬರು ಆನ್‌ಲೈನ್ ಜೂಜಾಟದಲ್ಲಿ 58 ಕೋಟಿ ರೂ. ಕಳೆದುಕೊಂಡಿದ್ದಾರೆ. ಮತ್ತು, ಈ ಸಂಬಂಧ ದೂರು ನೀಡಿದ ಬಳಿಕ ತನಿಖೆ ಆರಂಭಿಸಿದ ಪೊಲೀಸರು, ಶಂಕಿತ ಬುಕ್ಕಿಯೊಬ್ಬರ ನಿವಾಸ ರೇಡ್‌ ಮಾಡಿದ ಬಳಿಕ 14 ಕೋಟಿ ರೂ. ನಗದು ಹಾಗೂ 4 ಕೆಜಿ ಚಿನ್ನದ ಬಿಸ್ಕತ್‌ಗಳನ್ನು ಶನಿವಾರ ವಶಪಡಿಸಿಕೊಂಡಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಇದನ್ನು ಓದಿ: MANIPUR: ಪೊಲೀಸರಿಂದ ಬಿಡಿಸಿ ಎಳೆದೊಯ್ದು ನಗ್ನ ಪರೇಡ್‌ ಮಾಡಿ ರೇಪ್‌; ಈ ವಿಕೃತ ಘಟನೆಗೆ ಇಲ್ಲಿದೆ ಅಸಲಿ ಕಾರಣ..

ಆರೋಪಿಯನ್ನು ಅನಂತ್ ಅಲಿಯಾಸ್ ಸೋಂತು ನವರತನ್ ಜೈನ್ ಎಂದು ಗುರುತಿಸಲಾಗಿದ್ದು, ನಾಗ್ಪುರದಿಂದ 160 ಕಿಮೀ ದೂರದಲ್ಲಿರುವ ಗೊಂಡಿಯಾ ಸಿಟಿಯಲ್ಲಿರುವ ಆತನ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸುವ ಮುನ್ನವೇ ಅವರು ಪರಾರಿಯಾಗಿದ್ದಾರೆ. ಆತ ದುಬೈಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ ಎಂದೂ ಅಧಿಕಾರಿಯೊಬ್ರು ತಿಳಿಸಿದ್ದಾರೆ.

"ಪ್ರಾಥಮಿಕವಾಗಿ,  ಸೋಂತು ನವರತನ್ ಜೈನ್ ಅವರು ಆನ್‌ಲೈನ್ ಜೂಜಾಟವನ್ನು ಲಾಭದಾಯಕ ಮಾರ್ಗವಾಗಿ ಆನ್‌ಲೈನ್ ಜೂಜಾಟವನ್ನು ಅನ್ವೇಷಿಸಲು ದೂರುದಾರರಿಗೆ ಮನವರಿಕೆ ಮಾಡಿದ್ದರು. ಆರಂಭದಲ್ಲಿ ಹಿಂಜರಿದ ಉದ್ಯಮಿ ಅಂತಿಮವಾಗಿ ಅವರ ಮನವೊಲಿಕೆಗೆ ಶರಣಾದರು ಮತ್ತು ಹವಾಲಾ ವ್ಯಾಪಾರಿಯ ಮೂಲಕ 8 ಲಕ್ಷ ರೂ. ವರ್ಗಾಯಿಸಿದರು’’ ಎಂದು ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಹೇಳಿದರು.

ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿಗೆ ಸಿಡಿಲು ಬಡಿದು ಮೆದುಳಿಗೆ ತೀವ್ರ ಹಾನಿ; ಸಾವು ಬದುಕಿನ ನಡುವೆ ಹೋರಾಟ

ಆನ್‌ಲೈನ್ ಜೂಜಿನ ಖಾತೆಯನ್ನು ತೆರೆಯಲು ಶಂಕಿತ ಬುಕ್ಕಿ, ಉದ್ಯಮಿಗೆ ವಾಟ್ಸಾಪ್‌ನಲ್ಲಿ ಲಿಂಕ್ ಅನ್ನು ಒದಗಿಸಿದ್ದಾರೆ. ಉದ್ಯಮಿ ಖಾತೆಯಲ್ಲಿ 8 ಲಕ್ಷ ರೂ. ಠೇವಣಿ ಇಟ್ಟಿರುವುದನ್ನು ಕಂಡು ಅವರು ಜೂಜಾಟ ಆರಂಭಿಸಿದ್ದಾರೆ ಎಂದು ಅಮಿತೇಶ್ ಕುಮಾರ್ ತಿಳಿಸಿದರು.

"ಆರಂಭಿಕ ಯಶಸ್ಸಿನ ನಂತರ, ಉದ್ಯಮಿಯ ಅದೃಷ್ಟವು ತೀವ್ರ ಕುಸಿತವನ್ನು ಕಂಡಿತು, ಏಕೆಂದರೆ ಅವರು ಸುಮಾರು 5 ಕೋಟಿ ರೂ. ಗೆದ್ದ ಬಳಿಕ 58 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ’’ ಎಂದೂ  ಪೊಲೀಸ್ ಕಮಿಷನರ್ ಹೇಳಿದರು. ಉದ್ಯಮಿ ಸೋತಿದ್ದರಿಂದ ಅನುಮಾನಗೊಂಡು ಹಣ ವಾಪಸ್ ಕೇಳಿದರೂ ಸೋಮತು ನವರತನ್‌ ಜೈನ್ ನಿರಾಕರಿಸಿದ್ದಾರೆ.

ಇದನ್ನೂ ಓದಿ: ಹೈಟೆನ್ಷನ್ ವೈರ್‌ ಬಿದ್ದು ವಿದ್ಯುತ್ ಸ್ಪರ್ಶಕ್ಕೆ ಕನಿಷ್ಠ 16 ಜನ ಬಲಿ: ನಮಾಮಿ ಗಂಗಾ ಯೋಜನೆ ಆವರಣದಲ್ಲಿ ದಾರುಣ ಘಟನೆ

ಬಳಿಕ, ಉದ್ಯಮಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆಯಡಿಯಲ್ಲಿ ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ. ಪೊಲೀಸರು ಗೊಂಡಿಯಾದಲ್ಲಿರುವ ಶಂಕಿತ ಬುಕ್ಕಿಯ ನಿವಾಸದ ಮೇಲೆ ದಾಳಿ ನಡೆಸಿದರು. ಕಾರ್ಯಾಚರಣೆಯ ಪರಿಣಾಮವಾಗಿ 14 ಕೋಟಿ ರೂ. ನಗದು ಮತ್ತು ನಾಲ್ಕು ಕೆಜಿ ಚಿನ್ನದ ಬಿಸ್ಕತ್‌ಗಳು ಸೇರಿದಂತೆ ಗಣನೀಯ ಪ್ರಮಾಣದ ಸಾಕ್ಷ್ಯವನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಹೇಳಿದರು.

ದೊಡ್ಡ ಪ್ರಮಾಣದ ನಗದನ್ನು ಎಣಿಕೆ ಮಾಡಲಾಗುತ್ತಿದ್ದು, ವಶಪಡಿಸಿಕೊಂಡಿರುವ ಅಂತಿಮ ಅಂಕಿಅಂಶ ಇನ್ನಷ್ಟೇ ಹೊರಬರಬೇಕಿದೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಮಹಿಳೆಯರ ಒಳಗೆ ಸೇರಿದ ‘ಗುಂಡು’; ಪೊಲೀಸ್‌ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ವಿಡಿಯೋ ವೈರಲ್‌

Latest Videos
Follow Us:
Download App:
  • android
  • ios