ಮಹಿಳೆಯರ ಒಳಗೆ ಸೇರಿದ ‘ಗುಂಡು’; ಪೊಲೀಸ್‌ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ವಿಡಿಯೋ ವೈರಲ್‌

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮೂವರು ಮಹಿಳೆಯರು ಪೊಲೀಸರೊಂದಿಗೆ ಜಗಳವಾಡಿದ್ದಾರೆ. ಕುಡಿದ ಅಮಲಿನಲ್ಲಿ ಅವರು ತಮ್ಮ ಫೋನ್ ಕ್ಯಾಮೆರಾದಲ್ಲಿ ಘಟನೆಯನ್ನು ಚಿತ್ರೀಕರಿಸಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ತಿಳಿದುಬಂದಿದೆ.

drunk women create ruckus at saharanpur market verbally abuse police officer ash

ಸಹರಾನ್‌ಪುರ (ಜುಲೈ 19, 2023): ಉತ್ತರ ಪ್ರದೇಶದ ಸಹರಾನ್‌ಪುರದ ಮಾರುಕಟ್ಟೆಯೊಂದರಲ್ಲಿ ಮೂವರು ಮಹಿಳೆಯರು ಗಲಾಟೆ ಸೃಷ್ಟಿಸಿ ಪೊಲೀಸ್ ಅಧಿಕಾರಿಗಳನ್ನು ನಿಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಮಹಿಳೆಯರು ಅಮಲೇರಿದ ಸ್ಥಿತಿಯಲ್ಲಿದ್ದರು ಎನ್ನಲಾಗಿದ್ದು, ಘಟನೆಯನ್ನು ಚಿತ್ರೀಕರಿಸುವುದನ್ನು ತಡೆಯಲು ಪ್ರಯತ್ನಿಸುತ್ತಿರುವಾಗ ಮಹಿಳೆಯೊಬ್ಬರು ಕಾನ್ಸ್‌ಟೇಬಲ್‌ ಬಳಿ ಮೊಬೈಲ್‌ ಕಸಿದುಕೊಂಡು ನೆಲಕ್ಕೆ ಎಸೆದರು ಎಂದೂ ವರದಿಯಾಗಿದೆ.

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮೂವರು ಮಹಿಳೆಯರು ಪೊಲೀಸರೊಂದಿಗೆ ಜಗಳವಾಡಿದ್ದಾರೆ. ಕುಡಿದ ಅಮಲಿನಲ್ಲಿ ಅವರು ತಮ್ಮ ಫೋನ್ ಕ್ಯಾಮೆರಾದಲ್ಲಿ ಘಟನೆಯನ್ನು ಚಿತ್ರೀಕರಿಸಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ತಿಳಿದುಬಂದಿದೆ. ಮಹಿಳಾ ಅಧಿಕಾರಿಯೊಬ್ಬರು ಸ್ಥಳಕ್ಕೆ ಭೇಟಿ ನೀಡಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವವರೆಗೂ ಪೊಲೀಸರು ಕಾಯುತ್ತಿದ್ದರು ಎಂದೂ ವರದಿಗಳು ತಿಳಿಸಿವೆ.

ಇದನ್ನು ಓದಿ: ಬಿಜೆಪಿ ಮುಖಂಡನ ಅಶ್ಲೀಲ ವಿಡಿಯೋ ವೈರಲ್‌: ತನಿಖೆಗೆ ಮಹಾರಾಷ್ಟ್ರ ಡಿಸಿಎಂ ಆದೇಶ

ವಿಡಿಯೋ ನೋಡಿ..

ಘಟನೆಯನ್ನು ಚಿತ್ರೀಕರಿಸುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾಗ ಮಹಿಳೆಯೊಬ್ಬರು ಕಾನ್‌ಸ್ಟೆಬಲ್‌ನ ಫೋನ್ ಕಸಿದುಕೊಂಡು ನೆಲಕ್ಕೆ ಎಸೆದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಈ ಘಟನೆ ನಡೆಯುತ್ತಿದ್ದಂತೆ ಕೆಲವೇ ಸಮಯದಲ್ಲಿ ಹೆಚ್ಚು ಜನರು ಸ್ಥಳಕ್ಕೆ ಕಾಲಿಟ್ಟಿದ್ದು, ಘಟನೆಯನ್ನು ಜನರು ಸುಮ್ಮನೆ ನೋಡುತ್ತಾ ನಿಂತಿದ್ದಾರೆ. ಆದರೆ ಯಾರೊಬ್ಬರೂ ಮಹಿಳೆಯರನ್ನು ಶಾಂತಗೊಳಿಸಲು ಮತ್ತು ಗದ್ದಲವನ್ನು ನಿಯಂತ್ರಿಸಲು ಪ್ರಯತ್ನಿಸಲಿಲ್ಲ ಎಂದೂ ತಿಳಿದುಬಂದಿದೆ. ಇನ್ನು, ಕೆಲವರು ಈ ದೃಶ್ಯಾವಳಿಯ ಫೋಟೋ, ವಿಡಿಯೋ ಸೆರೆ ಹಿಡಿದಿದ್ದು, ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಮಹಿಳಾ ಪೋಲೀಸರು ಸ್ಥಳಕ್ಕೆ ಬಂದ ನಂತರ, ಮಹಿಳೆಯರನ್ನು ಠಾಣೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಅವರು ಕುಡಿದಿದ್ದರು ಎಂದು ರಿಪೋರ್ಟ್‌ನಲ್ಲಿ ತಿಳಿದುಬಂದಿದೆ. ಬಳಿಕ, ಅವರ ಕುಟುಂಬದವರನ್ನು ಠಾಣೆಗೆ ಕರೆಸಿ, ಮಹಿಳೆಯರನ್ನು ಮನೆಗೆ ಕಳುಹಿಸಲಾಯಿತು ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಪೆಟ್ರೋಲ್‌ ಟ್ಯಾಂಕ್‌ ಮೇಲೆ ಕೂತ ಯುವತಿಯಿಂದ ಬೈಕ್‌ ಸವಾರನಿಗೆ ಅಪ್ಪುಗೆ, ಮುತ್ತುಗಳ ಸುರಿಮಳೆ: ವಿಡಿಯೋ ವೈರಲ್‌

ಪೆಟ್ರೋಲ್‌ ಟ್ಯಾಂಕ್‌ ಮೇಲೆ ಕೂತ ಯುವತಿಯಿಂದ ಬೈಕ್‌ ಸವಾರನಿಗೆ ಅಪ್ಪುಗೆ, ಮುತ್ತುಗಳ ಸುರಿಮಳೆ: ವಿಡಿಯೋ ವೈರಲ್‌

ದೆಹಲಿಯ ಮಂಗೋಲ್ ಪುರಿ ಔಟರ್‌ ರಿಂಗ್ ರೋಡ್‌ ಫ್ಲೈಓವರ್ ಮೇಲಿನ ಘಟನೆಯು ಈ ಆತಂಕಕಾರಿ ಪ್ರವೃತ್ತಿಗೆ ಇತ್ತೀಚಿನ ಉದಾಹರಣೆಯಾಗಿದೆ. ಯುವಕನೊಬ್ಬ ತನ್ನ ಗೆಳತಿಯನ್ನು ಇಂಧನ ಟ್ಯಾಂಕ್ ಮೇಲೆ ತನ್ನ ಮುಂದೆ ಕೂರಿಸಿಕೊಂಡು ಬೈಕ್ ಓಡಿಸುತ್ತಿರುವುದನ್ನು ವಿಡಿಯೋ ದೃಶ್ಯಾವಳಿಯಲ್ಲಿ ಸೆರೆಹಿಡಿಯಲಾಗಿದೆ. ರಸ್ತೆ ಮತ್ತು ಅವರ ಸುರಕ್ಷತೆಯ ಮೇಲೆ ಕೇಂದ್ರೀಕರಿಸುವ ಬದಲು, ದಂಪತಿ ತಮ್ಮ ಸುತ್ತಲಿನ ಟ್ರಾಫಿಕ್‌ ಅನ್ನೂ ಮರೆತು ಅಪ್ಪುಗೆ ಮತ್ತು ಚುಂಬನಗಳನ್ನು ಒಳಗೊಂಡಂತೆ ನಿಕಟ ಕ್ರಿಯೆಗಳಲ್ಲಿ ತೊಡಗಿಸಿಕೊಂಡರು. 

ಈ ಅಜಾಗರೂಕ ಘಟನೆಯ ವಿಡಿಯೋ ತುಣುಕನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ, ಅದು ತ್ವರಿತವಾಗಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕ ಆಕ್ರೋಶವನ್ನು ಹುಟ್ಟುಹಾಕಿದೆ. ವಾಹನವನ್ನು ನಿರ್ವಹಿಸುವಾಗ ಅಸಭ್ಯ ಕೃತ್ಯಗಳಲ್ಲಿ ತೊಡಗುವುದು ಅಪಾಯಕಾರಿ ಮಾತ್ರವಲ್ಲದೆ ಕಾನೂನುಬಾಹಿರವೂ ಆಗಿದೆ. ಟ್ರಾಫಿಕ್ ನಿಯಮ ಉಲ್ಲಂಘಿಸಿ ಅಜಾಗರೂಕತೆಯಿಂದ ಜೀವಹಾನಿ ಮಾಡುವವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿಯಾಗಿ, ರಸ್ತೆ ಸುರಕ್ಷತೆ ಮತ್ತು ಜವಾಬ್ದಾರಿಯುತ ಚಾಲನೆಯನ್ನು ಉತ್ತೇಜಿಸಲು ಶೈಕ್ಷಣಿಕ ಅಭಿಯಾನಗಳನ್ನು ನಡೆಸಬೇಕು, ವಾಹನಗಳನ್ನು ನಿರ್ವಹಿಸುವಾಗ ಗೊಂದಲ ಮತ್ತು ಅನುಚಿತ ವರ್ತನೆಗೆ ಸಂಬಂಧಿಸಿದ ಅಪಾಯಗಳನ್ನು ಪರಿಹರಿಸಬೇಕು.

 

ಇದನ್ನೂ ಓದಿ: ಪ್ರಧಾನಿಯಾಗಲು ಏನ್‌ ಮಾಡ್ಬೇಕು ಅಂತ ಕೇಳಿದ ಯುವತಿಗೆ ಜೈಶಂಕರ್ ಹೇಳಿದ್ದೇನು? ವಿಡಿಯೋ ವೈರಲ್‌

Latest Videos
Follow Us:
Download App:
  • android
  • ios