Asianet Suvarna News Asianet Suvarna News

ಮೂವರು ಮಹಿಳಾ ಟೀಚರ್ ಜೊತೆ ಸೆಕ್ಸ್, ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಕ ಆಮಿರ್ ನಾಪತ್ತೆ

ಮೂವರು ಶಿಕ್ಷಕಿಯರ ಜೊತೆ ಶಿಕ್ಷಕ ಆಮಿರ್ ಖ್ವಾಝಿ ನಡೆಸಿ, ಈ ವಿಡಿಯೋಗಳನ್ನು ಚಿತ್ರೀಕರಿಸಿ ಪೋರ್ನ್ ಸೈಟ್‌ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಕ ನಾಪತ್ತೆಯಾಗಿದ್ದಾನೆ.

Maharashtra Male teacher sex act with female teachers goes viral after upload with porn site ckm
Author
First Published Dec 13, 2023, 4:45 PM IST

ಮುಂಬೈ(ಡಿ.12) ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಬದಲು ಸಹ ಶಿಕ್ಷಕಿಯರಿಗೆ ಸೆಕ್ಸ್ ಪಾಠ ಮಾಡಲು ಹೋದ ಶಿಕ್ಷಕ ಆಮಿರ್ ಇದೀಗ ಭಾರಿ ವೈರಲ್ ಆಗಿದ್ದಾನೆ. ಮೂವರು ಮಹಿಳಾ ಶಿಕ್ಷಕಿಯರನ್ನು ಪುಸಲಾಯಿಸಿ ಅವರ ಜೊತೆ ಸರಸ ನಡೆಸಿದ ಶಿಕ್ಷಕ ಆಮಿರ್ ವಿಡಿಯೋಗಳು ಭಾರಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಆಮೀರ್ ಖ್ವಾಝಿ ನಾಪತ್ತೆಯಾಗಿದ್ದಾನೆ. ಇತ್ತ ಮೂವರು ಶಿಕ್ಷಕಿಯನ್ನು ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿದ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ. 

ಬೀಡ್ ಜಿಲ್ಲೆಯಲ್ಲಿರುವ ಅತೀ ದೊಡ್ಡ ಮುಸ್ಲಿಂ ಸಮುದಾಯದ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕ ಆಮಿರ್ ಈ ಶಾಲೆಯ ಪ್ರಮುಖ ಶಿಕ್ಷಕ. ಇದೇ ಶಾಲೆಯಲ್ಲಿನ ಮಹಿಳಾ ಶಿಕ್ಷಕಿಯರ ಜೊತೆ ಆತ್ಮೀಯವಾಗಿದ್ದ. ಇತ್ತೀಚಿನ ದಿನಗಳಲ್ಲಿ ಈ ಆಮಿರ್ ಖ್ವಾಜಿ ಪಾಠಕ್ಕಿಂತ ಶಿಕ್ಷಕಿಯರ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಬ್ಯೂಸಿಯಾಗಿದ್ದ. ಶಿಕ್ಷಕಿಯರನ್ನು ಐಸ್ ಕ್ರೀಂ ಪಾರ್ಲರ್, ಜ್ಯೂಸ್ ಸೆಂಟರ್, ಸಣ್ಣ ಸಣ್ಣ ಟ್ರಿಪ್ ಕರೆದುಕೊಂಡು ಹೋಗುವುದರಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದ.

9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ, 2 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್

ಶಾಲಾ ಆಡಳಿತ ಮಂಡಳಿ ಜೊತೆ ಉತ್ತಮ ಸಂಬಂಧ ಹಾಗೂ ಪ್ರಾಬಲ್ಯ ಹೊಂದಿದ್ದ ಈ ಆಮಿರ್ ಖ್ವಾಝಿಗೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಇತ್ತೀಚೆಗೆ ಮೂವರು ಶಿಕ್ಷಕಿಯರ ಜೊತೆ ಸರಸ ಸಲ್ಲಾಪ ನಡೆಸಿದ್ದಾನೆ. ಈ ಸಲ್ಲಾಪದ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ. ಬೆಳಗ್ಗೆ ಶಾಲೆ, ರಾತ್ರಿ ಸೆಕ್ಸ್. ಇದು ಪ್ರತಿ ದಿನ ನಡೆಯುತ್ತಿತ್ತು. ಇದರ ನಡುವೆ ಆಮಿರ್ ಬೇಡಿಕೆ ಹೆಚ್ಚಾಗಿದೆ. ಪ್ರತಿ ದಿನ ಸೆಕ್ಸ್‌ಗೆ ಬೇಡಿಕೆ ಇಟ್ಟಿದ್ದಾನೆ. ಇಷ್ಟೇ ಅಲ್ಲ ಇತರ ಇಬ್ಬರು ಶಿಕ್ಷಕಿಯರನ್ನು ಒಪ್ಪಿಸಿ ಕರೆತರಲು ಸೂಚಿಸಿದ್ದಾನೆ.

ಈ ವಿಚಾರಕ್ಕೆ ಮೂವರು ಶಿಕ್ಷಕಿಯರ ಹಾಗೂ ಶಿಕ್ಷಕ ಆಮಿರ್ ಜೊತೆ ಮನಸ್ತಾಪವಾಗಿದೆ. ಇತ್ತ ಆಕ್ರೋಶಗೊಂಡ ಅಮೀರ್ ಖ್ವಾಜಿ, ತಾನು ರಹಸ್ಯವಾಗಿ ಚಿತ್ರೀಕರಿಸಿಕೊಂಡಿದ್ದ ಸೆಕ್ಸ್ ವಿಡಿಯೋಗಳನ್ನು ಪೋರ್ನ್ ಸೈಟ್‌ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆ ಭಾರಿ ಸಂಚಲನ ಸೃಷ್ಟಿಯಾಗಿದೆ. ವಿಡಿಯೋಗಳು ವ್ಯಾಟ್ಸ್ಆ್ಯಪ್ ಸೇರಿದಂತೆ ಹಲವು ಪ್ಲಾಟ್‌ಪಾರ್ಮ್‌ನಲ್ಲಿ ವೈರಲ್ ಆಗಿದೆ.

ಬೆಂಗಳೂರಲ್ಲಿ ರಾಪಿಡೋ ಹತ್ತಿದ ಯುವತಿಗೆ ಲೈಂಗಿಕ ಕಿರುಕುಳ, ವಿರೋಧಿಸಿದ್ದಕ್ಕೆ ಹೊರದಬ್ಬಿದ ಚಾಲಕ!

ವಿಡಿಯೋ ಮಾಹಿತಿ ಶಾಲಾ ಆಡಳಿತ ಮಂಡಳಿ ಗಮನಕ್ಕೂ ಬಂದಿದೆ. ಇತ್ತ ವಿಡಿಯೋ ಪೋಸ್ಟ್ ಮಾಡಿ ಶಿಕ್ಷಕ ಆಮೀರ್ ಖ್ವಾಝಿ ನಾಪತ್ತೆಯಾಗಿದ್ದಾನೆ. ಇತ್ತ ಆಡಳಿತ ಮಂಡಳಿ ಮೂವರು ಶಿಕ್ಷಕಿಯರನ್ನು ಅಮಾನತು ಮಾಡಿದೆ. 
 

Follow Us:
Download App:
  • android
  • ios