ಬೆಂಗಳೂರಿನಲ್ಲಿ ರಾಪಿಡೋ ಆಟೋ ರಿಕ್ಷಾ ಡ್ರೈವರ್‌ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದು, ವಿರೋಧಿಸಿದಕ್ಕೆ ಆಟೋದಿಂದ ಹೊರ ಹಾಕಲ್ಪಟ್ಟ ದಾರುಣ ಘಟನೆ ನಡೆದಿದೆ. ಈ ಬಗ್ಗೆ ರಾಪಿಡೋ ಗಮನಕ್ಕೂ ತಂದರೂ ಕ್ರಮ ತೆಗೆದುಕೊಂಡಿಲ್ಲ.  

ಬೆಂಗಳೂರು (ಡಿ.1): ಬೆಂಗಳೂರಿನಲ್ಲಿ ರಾಪಿಡೋ ಆಟೋ ರಿಕ್ಷಾ ಡ್ರೈವರ್‌ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದು, ವಿರೋಧಿಸಿದಕ್ಕೆ ಆಟೋದಿಂದ ಹೊರ ಹಾಕಲ್ಪಟ್ಟ ದಾರುಣ ಘಟನೆ ನಡೆದಿದೆ. ಈ ಬಗ್ಗೆ ರಾಪಿಡೋ ಗಮನಕ್ಕೂ ತಂದರೂ ಕ್ರಮ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.

ಮೈಕ್ರೋ-ಬ್ಲಾಗಿಂಗ್ ತಾಣ 'ಎಕ್ಸ್' (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರೊಬ್ಬರು ಇತ್ತೀಚೆಗೆ ಬೆಂಗಳೂರಿನಲ್ಲಿ ರಾಪಿಡೋ ಆಟೋ ರಿಕ್ಷಾ ಡ್ರೈವರ್‌ನಿಂದ ತನ್ನ ಸ್ನೇಹಿತೆ ಅನುಭವಿಸಿದ ಲೈಂಗಿಕ ದೌರ್ಜನ್ಯದ ಸಂಕಟವನ್ನು ಹಂಚಿಕೊಂಡಿದ್ದಾರೆ.

BREAKING ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಬೆದರಿಕೆ, ಬಾಂಬ್‌ ನಿಷ್ಕ್ರಿಯ ದಳ ದೌಡು

ಅಂಕುರ್ ಬಾಗ್ಚಿ ಎಂಬುವವರು ಈ ಬಗ್ಗೆ ಬರೆದುಕೊಂಡಿದ್ದು, ಗೆಳತಿಯು ಆಟೋ ಡ್ರೈವರ್‌ನಿಂದ ಅಸಮರ್ಪಕ ಸ್ಪರ್ಶವನ್ನು ಎದುರಿಸಿದ್ದು ಆಕೆ ವಿರೋಧಿಸಿದಾಗ ಚಲಿಸುವ ಆಟೋದಿಂದ ಬಲವಂತವಾಗಿ ಆಕೆಯನ್ನು ಹೊರಹಾಕಲಾಯ್ತು. ಜೊತೆಗೆ ಆಟೋ ಸವಾರಿಯ ಸಮಯದಲ್ಲಿ ಡ್ರೈವರ್‌ ಅಶ್ಲೀಲ ಕಾಮೆಂಟ್‌ ಮಾಡುತ್ತಿದ್ದನು ಏರು ಧ್ವನಿಯಲ್ಲಿ ಮಾತನಾಡುತ್ತಿದ್ದನು ಎಂದು ಹೇಳಿದ್ದಾರೆ.

ಮಾತ್ರವಲ್ಲ ತನ್ನ ಸ್ನೇಹಿತೆಯು Rapido ಗೆ ದೂರು ಸಲ್ಲಿಸಿದ್ದರೂ, ಕಂಪನಿಯ ಪ್ರತಿಕ್ರಿಯೆಯು ಕೇವಲ ಕ್ಷಮೆಯಾಚನೆಯಾಗಿದೆ ಹೊರತು ರಿಕ್ಷಾ ಚಾಲಕನ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಪಿಡೋ ಬಳಸುವವರು ಎಚ್ಚರದಿಂದಿರಿ ಅಲ್ಲಿ ನರಭಕ್ಷಕರಿದ್ದಾರೆ ಎಂದು ರಾಪಿಡೋ ಬಳಸಲೇಬೇಡಿ ಎಂದು ತನ್ನ ಆಕ್ರೋಶ ಹೊರಹಾಕಿದ್ದಾರೆ. ಘಟನೆ ನಡೆದು ಒಂದು ದಿನದ ನಂತರ ಎಫ್‌ಐಆರ್ ದಾಖಲಿಸಲಾಗಿದೆ.

ಹೆಸರಾಂತ ಸಲೂನ್‌ ಜತೆ ಇಶಾ ಅಂಬಾನಿಯ 8.4 ಲಕ್ಷ ಕೋಟಿ ಬ್ರಾಂಡ್ ಒಪ್ಪಂದ ರದ್ದು!

Scroll to load tweet…