ಊಟ ಕೇಳಿದ ಪತಿಗೆ, ಪತ್ನಿ ಸ್ಬಲ್ಪ ಹೊತ್ತು ಕಾಯಿರಿ ಎಂದು ಹೇಳಿದ್ದು, ಕಾಯುವ ವ್ಯವಧಾನವಿಲ್ಲದ ಪತಿ ಇದರಿಂದ ಸಿಟ್ಟಿಗೆದ್ದು ಆಕೆಯನ್ನು ಕೊಂದೇ ಬಿಟ್ಟಿದ್ದಾನೆ. ಮಧ್ಯಪ್ರದೇಶದ (Madhya Pradesh) ದೇವಾಸ್‌ನ (Dewas) ಹತ್ಪಿಪ್ಲಿಯಾ (Hatpipliya) ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಭೋಪಾಲ್: ಕೌಟುಂಬಿಕ ದೌರ್ಜನ್ಯಗಳು ಇತ್ತೀಚೆಗೆ ಹೆಚ್ಚೆಚ್ಚು ವರದಿಯಾಗುತ್ತಿದೆ. ಕೆಲ ದಿನಗಲ ಹಿಂದಷ್ಟೇ ಸಾಂಬಾರಿಗೆ ಉಪ್ಪು ಜಾಸ್ತಿ ಹಾಕಿದಳು ಎಂದು ಪತಿಯೊಬ್ಬ ತನ್ನ ಪತ್ನಿಯ ತಲೆ ಬೋಳಿಸಿದ ಘಟನೆ ನಡೆದಿತ್ತು. ಈ ಪ್ರಕರಣ ಮಾಸುವ ಮೊದಲೇ ಮಧ್ಯಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ.
ಊಟ ಕೇಳಿದ ಪತಿಗೆ, ಪತ್ನಿ ಸ್ಬಲ್ಪ ಹೊತ್ತು ಕಾಯಿರಿ ಎಂದು ಹೇಳಿದ್ದು, ಕಾಯುವ ವ್ಯವಧಾನವಿಲ್ಲದ ಪತಿ ಇದರಿಂದ ಸಿಟ್ಟಿಗೆದ್ದು ಆಕೆಯನ್ನು ಕೊಂದೇ ಬಿಟ್ಟಿದ್ದಾನೆ. ಮಧ್ಯಪ್ರದೇಶದ (Madhya Pradesh) ದೇವಾಸ್‌ನ (Dewas) ಹತ್ಪಿಪ್ಲಿಯಾ (Hatpipliya) ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಊಟಕ್ಕೆ ಸ್ವಲ್ಪ ಹೊತ್ತು ಕಾಯಿರಿ ಎಂದ ಪತ್ನಿಯನ್ನು, ಪತಿ ಬಟ್ಟೆ ಒಗೆಯಲು ಬಳಸುವ ಲಾಂಡ್ರಿ ಬ್ಯಾಟ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ನಂತರ ಆಕೆಯನ್ನು ಬಾವಿಗೆ ತಳ್ಳಿ ಹಾಕಿದ್ದಾನೆ.
ಸಾಂಬಾರ್‌ಗೆ ಜಾಸ್ತಿ ಉಪ್ಪು ಹಾಕಿದ್ದಕ್ಕೆ ರೇಜರ್ ಹಿಡಿದ ಪತಿ ಮಾಡಿದ್ದು ಭಯಾನಕ ಕೆಲಸ
ಮಂಗಳವಾರ ಸಂಜೆ (ಮೇ.24) ಈ ಅನಾಹುತ ನಡೆದಿದೆ. ತಿಳ್ಯಖೇಡಿಯಲ್ಲಿ ವಾಸವಾಗಿರುವ ಆರೋಪಿ ದಿನೇಶ್ ಮಾಳಿ (Dinesh Mali) ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಇನ್ನೂ ಆಹಾರ ತಯಾರಾಗಿರಲಿಲ್ಲ ಎಂದು ತಿಳಿದು ಬಂದಿದೆ. ಅವನ ಹೆಂಡತಿ ಯಶೋದಾ ಮಾಳಿ (Yashoda Mali) ಜೊತೆ ಆತ ಊಟದ ಬಗ್ಗೆ ಕೇಳಿದಾಗ ಆಕೆ ಮನೆಯ ಬೇರೆ ಮನೆಯ ಕೆಲಸದಲ್ಲಿ ನಿರತಳಾಗಿದ್ದರಿಂದ ಸ್ವಲ್ಪ ಸಮಯ ಕಾಯುವಂತೆ ಗಂಡ ದಿನೇಶ್ ಮಾಳಿಗೆ ಹೇಳಿದ್ದಾಳೆ.
ಖಿಚಡಿಗೆ ಉಪ್ಪು ಹೆಚ್ಚು ಹಾಕಿದ್ದಕ್ಕೆ ಕತ್ತು ಹಿಸುಕಿ ಪತ್ನಿಯ ಕೊಲೆ
ಇದನ್ನು ಕೇಳಿದ ದಿನೇಶ ಮಾಳಿ ಕೋಪಗೊಂಡು ಅವಳನ್ನು ಬೈಯಲು ಪ್ರಾರಂಭಿಸಿದ್ದಾನೆ. ನಂತರ ಆತ ಲಾಂಡ್ರಿ ಬ್ಯಾಟ್‌ನಿಂದ ಆಕೆಯ ತಲೆಗೆ ಹೊಡೆದಿದ್ದಾನೆ. ಅಲ್ಲದೇ ಆತಕೆಯನ್ನು ಮನೆಯಿಂದ ಹೊರ ಹಾಕಲು ಯತ್ನಿಸಿದ್ದಾನೆ. ಈ ವೇಳೆ ಮಗಲು ನಿಕಿತಾ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ದಿನೇಶ್ ಆಕೆಗೂ ಬ್ಯಾಟ್‌ನಿಂದ ಹೊಡೆದಿದ್ದಾನೆ. ನಂತರ ಆತ ತನ್ನ ಪತ್ನಿಯನ್ನು ಎಳೆದುಕೊಂಡು ಹೋಗಿ ಬಾವಿಗೆ ಎಸೆದಿದ್ದು, ಇದಾದ ಬಳಿಕ ಸ್ಥಳದಿಂದ ಹೊರಟು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಅಪ್ಪ ಅಮ್ಮನ ನಡುವಿನ ಹೊಡೆದಾಟದ ಬಗ್ಗೆ ಮಗಳು ನಿಕಿತಾ (Nikita) ಸಂಬಂಧಿಗಳಿಗೆ ಫೋನ್ ಮಾಡಿ ತಿಳಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಸಂಬಂಧಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಆಗಮಿಸಿದ ನಂತರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಶವಾಗಾರಕ್ಕೆ ರವಾನಿಸಲಾಗಿತ್ತು. ಗಂಡ ಥಳಿಸಿದ ನಂತರವೂ ಮಹಿಳೆ ಜೀವಂತವಾಗಿದ್ದಳು. ಆದರೆ ಬಾವಿಗೆ ನೂಕಿದ ನಂತರ ಬಾವಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಊಹಿಸಿದ್ದು, ಆಕೆಯ ಸಾವು ನಿಖರವಾಗಿ ಹೇಗೆ ಸಂಭವಿಸಿದೆ ಎಂಬುದು ತಿಳಿದು ಬಂದಿಲ್ಲ.
ಘಟನೆಯ ಬಗ್ಗೆ ಐಪಿಸಿ ಸೆಕ್ಷನ್ 302, 294, 323, ಮತ್ತು 201 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಹತ್ಪಿಪ್ಲಿಯಾ ಪೊಲೀಸ್ ಠಾಣೆ ಪ್ರಭಾರಿ ಸಜ್ಜನ್ ಸಿಂಗ್ ಮುಕಾತಿ (Sajjan Singh Mukati) ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಸಾಂಬಾರ್‌ಗೆ ಹೆಚ್ಚು ಉಪ್ಪು ಹಾಕಿದಳು ಎಂದು ಪತಿಯೋರ್ವ ತನ್ನ ಪತ್ನಿಯ ತಲೆಯನ್ನು ಸಂಪೂರ್ಣ ಬೋಳಿಸಿದ ಘಟನೆ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ (Ahmedabad) ನಡೆದಿತ್ತು. 27 ವರ್ಷದ ಯುವಕನೊಬ್ಬ ತನ್ನ 28 ವರ್ಷದ ಪತ್ನಿಯ ತಲೆ ಬೋಳಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದ.ಮೇ 8 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು.
