ಸಾಂಬಾರ್‌ಗೆ ಹೆಚ್ಚು ಉಪ್ಪು ಹಾಕಿದಳು ಎಂದು ಸಿಟ್ಟಿಗೆದ್ದ ಪತಿ ರೇಜರ್‌ ಹಿಡಿದು ಪತ್ನಿಯ ತಲೆ ಬೋಳಿಸಿದ ಪತಿ ಗುಜರಾತ್‌ನಅಹ್ಮದಾಬಾದ್‌ನಲ್ಲಿ ಅಮಾನವೀಯ ಘಟನೆ

ಅಹಮದಾಬಾದ್: ಸಾಂಬಾರ್‌ಗೆ ಹೆಚ್ಚು ಉಪ್ಪು ಹಾಕಿದಳು ಎಂದು ಪತಿಯೋರ್ವ ತನ್ನ ಪತ್ನಿಯ ತಲೆಯನ್ನು ಸಂಪೂರ್ಣ ಬೋಳಿಸಿದ ಘಟನೆ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ (Ahmedabad) ನಡೆದಿದೆ. 27 ವರ್ಷದ ಯುವಕನೊಬ್ಬ ತನ್ನ 28 ವರ್ಷದ ಪತ್ನಿಯ ತಲೆ ಬೋಳಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಈಗ ಪೊಲೀಸರಿಗೆ ದೂರು ನೀಡಿದ್ದಾಳೆ. ಮೇ 8 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಗರದ ಇನ್ಸಾನಿಯತ್‌ನಗರದ (Insaniyatnagar) ಫ್ಲಾಟ್‌ನ ನಿವಾಸಿ ರಿಜ್ವಾನಾ ಶೇಖ್ (Rizvana Shaikh) ಅವರೇ ಹೀಗೆ ಗಂಡನಿಂದ ದೌರ್ಜನ್ಯಕ್ಕೆ ಒಳಗಾದ ಮಹಿಳೆ. ಘಟನೆ ನಡೆದು ಮೂರು ದಿನಗಳ ನಂತರ ಈಕೆ ತನ್ನ ಪತಿ ಇಮ್ರಾನ್ ಶೇಖ್ (Imran Shaikh) ವಿರುದ್ಧ ವತ್ವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದಿನಗೂಲಿ ಕೆಲಸ ಮಾಡುತ್ತಿರುವ ಇಮ್ರಾನ್‌ ಶೇಖ್ ಜೊತೆ ಎಂಟು ವರ್ಷಗಳ ಹಿಂದೆ ರಿಜ್ವಾನಾ ಶೇಖ್ ಮದುವೆ ನಡೆದಿತ್ತು.

ವರದಕ್ಷಿಣೆ ನೀಡದ್ದಕ್ಕೆ ಗ್ಯಾಂಗ್‌ರೇಪ್‌: ವಿಡಿಯೋ ಯೂಟ್ಯೂಬ್‌ಗೇ ಅಪ್ಲೋಡ್‌

ಮೇ 8 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಇಮ್ರಾನ್ ಮನೆಗೆ ಊಟಕ್ಕೆ ಬಂದಾಗ ರಿಜ್ವಾನಾ ಪತಿಗೆ ಚಪಾತಿ ಮತ್ತು ಕರಿ (ಸಾಂಬಾರ್ ಅಥವಾ ಪಲ್ಯ) ಬಡಿಸಿದಳು ಎಂದು ರಿಜ್ವಾನಾ ಹೇಳಿದ್ದಾರೆ. ಆದರೆ, ಆತನಿಗೆ ರುಚಿ ನಾಲಗೆಗೆ ಹಿಡಿಸಿಲ್ಲ. ಅಲ್ಲದೇ ಆಹಾರಕ್ಕೆ ಹೆಚ್ಚು ಉಪ್ಪು ಹಾಕಿದ್ದೀಯಾ ಎಂದು ಆಕೆಯನ್ನು ನಿಂದಿಸಲು ಶುರು ಮಾಡಿದ. ನಾನು ಇದರ ಬದಲಾಗಿ ಬೇರೆ ಏನಾದರೂ ಮಾಡುತ್ತೇನೆ ಎಂದು ಅವನಿಗೆ ಹೇಳಿದ್ದರೂ, ಅವನು ನನ್ನನ್ನು ಮೌಖಿಕವಾಗಿ ನಿಂದಿಸುವುದನ್ನು ಮುಂದುವರೆಸಿದನು. ಇಂತಹ ಸಣ್ಣ ವಿಷಯಕ್ಕೆ ತನ್ನನ್ನು ನಿಂದಿಸಬೇಡಿ ಎಂದು ರಿಜ್ವಾನಾ ಹೇಳಿದಾಗ, ಇಮ್ರಾನ್ ಅವಳನ್ನು ಕೋಲಿನಿಂದ ಹೊಡೆಯಲು ಪ್ರಾರಂಭಿಸಿದನು.

ಈ ವೇಳೆ ದೌರ್ಜನ್ಯ ನಿಲ್ಲಿಸದಿದ್ದರೆ ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದ್ದೆ. ಈ ವೇಳೆ ಸುತ್ತಲೂ ನೋಡಿದ ಆತ ರೇಜರ್ ಹಿಡಿದು ಏನಾಗುತ್ತಿದೆ ಎಂದು ನಾನು ಅರ್ಥಮಾಡಿಕೊಳ್ಳುವ ಮೊದಲು, ಅವನು ನನ್ನನ್ನು ಬಲವಂತವಾಗಿ ಹಿಡಿದು ನನ್ನ ಕೂದಲನ್ನು ಎಳೆದುಕೊಂಡು ನನ್ನ ತಲೆಯನ್ನು ನಿರ್ದಯವಾಗಿ ಬೋಳಿಸಲು ಪ್ರಾರಂಭಿಸಿದನು ಎಂದು ರಿಜ್ವಾನಾ ಹೇಳಿರುವುದನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 

ಗಂಡನ ತೊರೆದು ಬೇರೆಡೆ ವಾಸಿಸುವ ಪತ್ನಿ ಜೀವನಾಂಶಕ್ಕೆ ಅರ್ಹ: ಕೋರ್ಟ್‌

ಸ್ವಲ್ಪ ಕರುಣೆ ತೋರುವಂತೆ ಆತನಿಗೆ ಮನವಿ ಮಾಡಿದರೂ, ಆಕೆಯ ಮನವಿಗೆ ಆತ ಕಿವುಡಾಗಿದ್ದ ಆತ ಆಕೆಯ ಸಂಪೂರ್ಣ ತಲೆ ಬೋಳಿಸಿದ ನಂತರ ಶಾಂತನಾದ ಎಂದು ಪತ್ನಿ ರಿಜ್ವಾನಾ (Rizvana) ದೂರಿನಲ್ಲಿ ಹೇಳಿದ್ದಾಳೆ. ಈ ಜೋಡಿಯ ಕಿರುಚಾಟ ನೋಡಿದ ನೆರೆಹೊರೆಯವರು (Neighbours) ಆತನ ಮನೆಗೆ ಧಾವಿಸಿ ಬಂದಿದ್ದಾರೆ. ನೆರೆಹೊರೆಯವರು ನನಗೆ ತಕ್ಷಣ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡುವಂತೆ ಹೇಳಿದರು. ಆದರೆ ನಾನು ತುಂಬಾ ಭಯಭೀತಳಾಗಿದ್ದು ದೂರು ನೀಡಲು ನಿರಾಕರಿಸಿದೆ. ಹೀಗಾಗಿ ಘಟನೆ ನಡೆದ ಮೂರು ದಿನಗಳ ನಂತರ ನಾನು ಎಫ್‌ಐಆರ್‌ ದಾಖಲಿಸಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ. ಏತನ್ಮಧ್ಯೆ, ಪೊಲೀಸರು ಇಮ್ರಾನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ಬೆಳಗ್ಗಿನ ಉಪಾಹಾರಕ್ಕೆ ತಯಾರಿಸಿದ ಖಿಚಡಿಗೆ ಉಪ್ಪು ಹೆಚ್ಚು ಹಾಕಿದಳು ಎಂದು ಸಿಟ್ಟುಗೊಂಡ ಪತಿಯೋರ್ವ ಪತ್ನಿಯನ್ನೇ ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಳೆದ ಎಪ್ರಿಲ್‌ನಲ್ಲಿ ಮಹಾರಾಷ್ಟ್ರದ (Maharashtra) ಥಾಣೆ (Thane)ಜಿಲ್ಲೆಯಲ್ಲಿ ನಡೆದಿತ್ತು. 46 ವರ್ಷದ ನಿಲೇಶ್ ಘಾಗ್ ತನ್ನ 40 ವರ್ಷದ ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದ.