Asianet Suvarna News Asianet Suvarna News

ಹಸುವಿನ ಜೊತೆ ಲೈಂಗಿಕ ಕ್ರಿಯೆ, ಸಿಸಿಟಿವಿಯಲ್ಲಿ ಸೆರೆಯಾಯ್ತು ವಿಕೃತ ಕಾಮಿಯ ಹೇಯ ಕೃತ್ಯ!

ಮೂಕ ಪ್ರಾಣಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ ವಿಕೃತ ಕಾಮಿಯ ಆಟ ಸಿಸಿಟಿವಿಯಲ್ಲಿ ಬಯಲಾಗಿದೆ. ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕ ಬಂಧನಕ್ಕೆ ಬಲೆ ಬೀಸಿದ್ದಾರೆ.

Madhya Pradesh Crime man allegedly indulging in an unnatural act with a cow police register complaint ckm
Author
Bengaluru, First Published Aug 7, 2022, 8:13 PM IST

ಗ್ವಾಲಿಯರ್(ಆ.07):  ವಿಕೃತ ಕಾಮುಕನ ಹೇಯ ಕೃತ್ಯ ಸಿಸಿಟಿವಿಯಿಂದ ಬಯಲಾಗಿದೆ. ಮೂಕ ಪ್ರಾಣಿ ಹಸುವಿನ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನ ದೀನದಯಾಳ್ ನಗರದಲ್ಲಿ ನಡೆದಿದೆ.  ಘಟನೆ ನಡೆದ ಸ್ಥಳದ ಪಕ್ಕದ ಮನೆಯಲ್ಲಿದ್ದ ಸಿಸಿಟಿಯಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ತಕ್ಷಣವೇ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಕೃತ ಕಾಮಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಆಗಸ್ಟ್ 4 ರಂದು ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಯಾರೂ ಇಲ್ಲದ ಜಾಗದಲ್ಲಿ ನಿಂತಿದ್ದ ಹಸುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಹಸುವನ್ನು ಕಟ್ಟಿ ಹಾಕಿ ಈ ಕೃತ್ಯ ಎಸಗಿದ್ದಾನೆ. 

ಈ ಘಟನೆ ನಡೆದ ಪಕ್ಕದಲ್ಲಿದ್ದ ಮನೆ ಇದೆ. ಆದರೆ ಆ ಮನೆಯಲ್ಲಿ ಯಾರೂ ಇರಲಿಲ್ಲ. ಈ ಮನೆಯಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಈ ವಿಕೃತ ಕಾಮಿಯ ಹೇಯ ಕೃತ್ಯ ಸೆರೆಯಾಗಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇಶದಲ್ಲಿ ಮೂಕ ಪ್ರಾಣಿಯನ್ನು ಬಿಡುತ್ತಿಲ್ಲ ಕಾಮುಕರು ಎಂದು ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ಹರಿದಾಡಲು ಆರಂಭಿಸಿದೆ. ಮಧ್ಯಪ್ರದೇಶದ ರಾಷ್ಟ್ರೀಯ ಗೋರಕ್ಷಕ ವಾಹಿನಿ ಅಧ್ಯಕ್ಷ ನಿರ್ಪಾತ್ ಸಿಂಗ್ ಥೋಮರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೃಶ್ಯಗಳನ್ನು ಆಧಾರವಾಗಿಟ್ಟುಕೊಂಡು ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದರು.  ದೂರಿನ ಆಧಾರದ ಮೇಲೆ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 

ಮಂಗಳೂರು:  ಕರುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ವಿಡಿಯೋ ವೈರಲ್, ಆರೋಪಿಗೆ ಶೋಧ

ಬೆಂಗಳೂರಿನಲ್ಲೂ ನಡೆದಿತ್ತು ಇದೇ ರೀತಿ ಘಟನೆ
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಗೋವಿನ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ವಿಕೃತಿ ಕಾಮಿಯನ್ನು ಪೊಲೀಸರು ಬಂಧಿಸಿದ್ದರು. ಸಿಂಗಾಪುರ ಲೇಔಟ್‌ ನಿವಾಸಿ ಮುನಿ ಹನುಮಂತಪ್ಪ ಎಂಬುವರು ಐದು ಹಸುಗಳು ಹಾಗೂ ಆರು ಕರುಗಳನ್ನು ಸಾಕುತ್ತಿದ್ದು, ತಮ್ಮ ಮನೆ ಮುಂದಿನ ಜಾಗದಲ್ಲಿ ಅವುಗಳನ್ನು ಕಟ್ಟಿಹಾಕುತ್ತಿದ್ದರು. ಆರೋಪಿಯು ತಡರಾತ್ರಿ ಹಸು ಕಟ್ಟುವ ಜಾಗಕ್ಕೆ ಬಂದು ಬಟ್ಟೆಬಚ್ಚಿ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಇದನ್ನು ಗಮನಿಸಿದ್ದ ನೆರೆಹೊರೆಯವರು ಹಸುಗಳ ಮಾಲೀಕ ಹನುಮಂತಪ್ಪ ಅವರಿಗೆ ತಿಳಿಸಿದ್ದರು. ಹೀಗಾಗಿ ಹನುಮಂತಪ್ಪ ಅವರು ಫೆ.19ರ ರಾತ್ರಿ ಕಾದು ಕುಳಿತಿದ್ದರು. ಮಧ್ಯರಾತ್ರಿ ಹಸು ಕಟ್ಟುವ ಜಾಗಕ್ಕೆ ಬಂದಿರುವ ಆರೋಪಿ ವೆಂಕಟೇಶ್‌, ಎಂದಿನಂತೆ ಬಟ್ಟೆಬಿಚ್ಚಿ ಹಸುವೊಂದರೊಂದಿಗೆ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾನೆ. ಇದನ್ನು ಕಣ್ಣಾರೆ ಕಂಡ ಹನುಮಂತಪ್ಪ ಹೌಹಾರಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆಡಾಯ್ತು, ಕಾಮುಕರಿಂದ ಈಗ ಗೋವೂ ಸೇಫಲ್ಲ! ಬೆಂಗಳೂರಿನಲ್ಲಿ ಹೇಯ ಕೃತ್ಯ

ದಾವಣಗೆರೆ ಮೂಲದ ಆರೋಪಿ ವೆಂಕಟೇಶ್‌, ನಗರದ ಅವೆನ್ಯೂ ರಸ್ತೆಯಲ್ಲಿ ಪುಸ್ತಕ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸಿಂಗಾಪುರ ಲೇಔಟ್‌ನಲ್ಲಿ ವಾಸವಿದ್ದ. ಆರೋಪಿಯನ್ನು ಸದ್ಯ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Follow Us:
Download App:
  • android
  • ios