ಹಾಲು ಕೊಡುವ‌ ಗೋ ಮಾತೆ ಜೊತೆ ಕಾಮಚೇಷ್ಟೇ! ಗೋ ಮಾತೆಯನ್ನು ಕಾಮುಕರಿಂದ ರಕ್ಷಿಸುವಂತಹ ಪರಿಸ್ಥಿತಿ!

ಬೆಂಗಳೂರು: ಹಾಲು ಕೊಡುವ ಗೋ ಮಾತೆಯನ್ನು ದೇವರಿಗೆ ಹೋಲಿಸಿ ಪೂಜಿಸುವ ನಾಡು ನಮ್ಮದು. ಆದರೆ ಇಂತಹ ನಾಡಿನಲ್ಲಿ ಕಾಮುಕನೋರ್ವ ಗೋ ಮಾತೆಯಾಗಿರುವ ಹಸುವಿನ ಮೇಲೆರಗಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಮುಂದಾಗಿದ್ದ ಘಟನೆ ಬೆಳಕಿಗೆ ಬಂದಿದೆ.

ಹೆಣ್ಣು ಮಕ್ಕಳನ್ನು ರಕ್ಷಿಸುವಂತೆ ಇದೀಗ ಗೋ ಮಾತೆಯನ್ನು ಕಾಮುಕರಿಂದ ರಕ್ಷಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಘಟನೆ ನಡೆದಿರುವುದು ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಾಣ ವ್ಯಾಪ್ತಿಯ ದೇವಸಂದ್ರದಲ್ಲಿ. 

ಸೋಮವಾರ ಮುಂಜಾನೆ ದೇವಸಂದ್ರದಲ್ಲಿ ಮುನಿರಾಜು ಹಾಗೂ ರತ್ನ ದಂಪತಿಗಳ ಎರಡು ಹಸುಗಳು ಕಳವಾಗಿದ್ದವು. ಈ ಸಂಬಂಧ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

ಈ ಪ್ರಕರಣವನ್ನು ಭೇದಿಸುವ ನಿಟ್ಟಿನಲ್ಲಿ ಕೆ.ಆರ್.ಪುರಂ ಪೊಲೀಸರು ತನಿಖೆ ನಡೆಸುವ ಸಲುವಾಗಿ ಮತ್ತಷ್ಟು ಸಿಸಿಟಿವಿ ಪುಟೇಜ್ ಪರಿಶೀಲಿಸಿದಾಗ ಇಂತಹ ಘೋರ ಪ್ರಕರಣ ಬೆಳಕಿಗೆ ಬಂದಿದೆ. 

ಮಾದಕ ವಸ್ತು ಸೇವಿಸಿದ್ದ 8 ಮಂದಿ ಕಾಮಾಂಧರು ಗರ್ಭಿಣಿ ಮೇಕೆಯೊಂದರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಇದರಿಂದ ಮೇಕೆ ಸತ್ತುಹೋಗಿರುವ ಘಟನೆ ಕೆಲದಿನಗಳ ಹಿಂದೆ ಹರ್ಯಾಣದಲ್ಲಿ ವರದಿಯಾಗಿತ್ತು.

ಇದನ್ನೂ ಓದಿ: 8 ಮಂದಿ ಸಾಮೂಹಿಕ ಅತ್ಯಾಚಾರ : ಗರ್ಭಿಣಿ ಮೇಕೆ ಸಾವು