Asianet Suvarna News Asianet Suvarna News

Raichuru: ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಪ್ರೇಮಿಗಳು ಆತ್ಮಹತ್ಯೆ!

ರೈಲಿಗೆ ತಲೆಕೊಟ್ಟು ಇಬ್ಬರು ಪ್ರೇಮಿಗಳು ಪ್ರಾಣಬಿಟ್ಟ ಘಟನೆ ರಾಯಚೂರು ಸಮೀಪದ ಕೃಷ್ಣ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.  ಇಬ್ಬರು ನವಜೋಡಿಗಳು ರೈಲ್ವೆ ಹಳಿಯ ಮೇಲೆ ಮಲಗಿಕೊಂಡು ಪ್ರಾಣಬಿಟ್ಟಿದ್ದಾರೆ.  

Lovers from andhra pradesh commit suicide in moving train at Raichuru  gow
Author
First Published Dec 25, 2022, 7:41 PM IST

ರಾಯಚೂರು (ಡಿ.25): ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಇಬ್ಬರು ಪ್ರೇಮಿಗಳು ಪ್ರಾಣಬಿಟ್ಟ ಘಟನೆ ರಾಯಚೂರು ಸಮೀಪದ ಕೃಷ್ಣ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.  ಇಬ್ಬರು ನವಜೋಡಿಗಳು ರೈಲ್ವೆ ಹಳಿಯ ಮೇಲೆ ಮಲಗಿಕೊಂಡು ಪ್ರಾಣಬಿಟ್ಟಿದ್ದಾರೆ.  ಕೃಷ್ಣ ರೈಲು ನಿಲ್ದಾಣದ ಹತ್ತಿರದ ರೈಲ್ವೆ ಟ್ರ್ಯಾಕ್ ನಲ್ಲಿ ಜೋಡಿಗಳ ಶವ ಪತ್ತೆಯಾಗಿದ್ದು. ರೈಲ್ವೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತರನ್ನ ತೆಲಂಗಾಣದ ಎಮ್ಮಿಗನೂರು ಮೂಲದ 26 ವರ್ಷದ ಶಿವಕುಮಾರ್, 16 ವರ್ಷದ ಅನಿತಾ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ರೈಲು ಬರುವ ಸಮಯ ನೋಡಿಕೊಂಡು ಇಬ್ಬರೂ ಕೂಡ ಜೋಡಿಯಾಗಿಯೇ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು  ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಕುರಿತು ಸದ್ಯ ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ‌.

ಯುವತಿ ಹತ್ಯೆಗೈದ ಆರೋಪಿ ಸಾವು
ದಾವಣಗೆರೆ: ಹಾಡಹಗಲೇ ನಡುರಸ್ತೆಯಲ್ಲಿ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ವಿಷ ಸೇವಿಸಿದ್ದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಸಾದತ್‌ ಅಲಿಯಾಸ್‌ ಚಾಂದ್‌ ಪೀರ್‌(29 ವರ್ಷ) ಮೃತ ವ್ಯಕ್ತಿ. ನಗರದ ಪಿಜೆ ಬಡಾವಣೆಯಲ್ಲಿ ಹಾಡಹಗಲೇ ಚಾಂದ್‌ ಸುಲ್ತಾನ್‌ ಎಂಬ ಯುವತಿ ಮುಖ, ಕುತ್ತಿಗೆಗೆ ಚಾಕುವಿನಿಂದ ಅಮಾನುಷವಾಗಿ ಇರಿದು ಕೊಲೆ ಮಾಡಿದ್ದ ಆರೋಪಿ ಸಾದತ್‌ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ವಿಷ ಸೇವಿಸಿ ಅಸ್ವಸ್ಥನಾಗಿದ್ದ ಆರೋಪಿ ಸಾದತ್‌ ಅಲಿಯಾಸ್‌ ಚಾಂದ್‌ ಪೀರ್‌ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಕಾಕನಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ
ಗೋಕಾಕ ನಗರದ ಉಪಕರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬ ಬುಧವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಮೋದಿನಅಲಿ ಗೊಟೆ (24) ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರಣಾಧೀನ ಕೈದಿ. ಈತ ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ. ಕಳೆದ ಬುಧವಾರ ಉಪಕಾರಾಗೃಹದ ಸೆಲ್‌ನ ಹೊರಭಾಗದಲ್ಲಿರುವ ಕಟ್ಟಿಗೆಯ ಜಂತಿಗೆ ಬೆಡ್‌ಸೀಟಿನಿಂದ ನೇಣು ಬಿಗಿದುಕೊಂಡಿದ್ದಾನೆ. ಆರೋಪಿಯು ಕಳೆದ 15 ದಿನಗಳ ಹಿಂದಷ್ಟೇ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಗೋಕಾಕ ಉಪ ಕಾರಾಗೃಹಕ್ಕೆ ಕೈದಿಯನ್ನು ಕರೆತರಲಾಗಿತ್ತು. ಈ ಕುರಿತು ಗೋಕಾಕ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಶ್ಚಿತಾರ್ಥವಾಗಿದ್ದ ಯುವತಿಯ ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ಯುವಕ
ದಾವಣಗೆರೆ: ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿಯನ್ನು ನಡುರಸ್ತೆಯಲ್ಲೇ ಕೊಲೆ ಮಾಡಿದ್ದ ಆರೋಪಿ ತಾನೂ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕೊಲೆ ಮಾಡಿದ ವ್ಯಕ್ತಿಯನ್ನು ಸಾದತ್‌ ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಹಾಡಹಗಲೇ ನಡುರಸ್ತೆಯಲ್ಲಿ ಚಾಂದ್‌ ಸುಲ್ತಾನ ಎನ್ನುವ ಮಹಿಳೆಯನ್ನು ರಸ್ತೆಯಲ್ಲಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ.

ಮದುವೆಗೆ ನಿರಾಕರಿಸಿದ ಯುವತಿ: ಅಮಾನುಷವಾಗಿ ಹಲ್ಲೆ ಮಾಡಿದ ಬಾಯ್‌ಫ್ರೆಂಡ್‌; ಕ್ಯಾಮೆರಾದಲ್ಲಿ

ಕೆ.ಎ.17, ಈಎಸ್‌ 2632 ಸಂಖ್ಯೆ ಬಿಳಿ ಬಣ್ಣದ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಮಹಿಳೆ ಪಿ.ಜೆ.ಬಡಾವಣೆಯ 9ನೇ ಮುಖ್ಯ ರಸ್ತೆಗೆ ಆಗಮಿಸುತ್ತಿದ್ದಂತೆ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಮಹಿಳೆಯನ್ನು ಅಡ್ಡಗಟ್ಟಿನಿಲ್ಲಿಸಿದ್ದಾನೆ. ಈ ವೇಳೆ ಪರಸ್ಪರ ಮಾತನಾಡಿಕೊಂಡಿದ್ದಾರೆ. ಮಹಿಳೆಯೊಂದಿಗೆ ಮಾತನಾಡುತ್ತಾ ನಿಂತಿದ್ದ ವ್ಯಕ್ತಿ ತನ್ನ ಜೇಬಿನಿಂದ ಹರಿತವಾದ ಚಾಕುವನ್ನು ತೆಗೆದು ಆಕೆಯ ಕುತ್ತಿಗೆಗೆ ಇರಿದಿದ್ದಾನೆ. ಈ ವೇಳೆ ಮಹಿಳೆ ಪ್ರತಿರೋಧ ತೋರಿದರೂ ಆಕೆಯನ್ನು ಬಿಡದೇ ತನ್ನ ಮನಸ್ಸಿಗೆ ಬಂದಂತೆ ಮಹಿಳೆಯ ಕುತ್ತಿಗೆ ಚಾಕು ಹಾಕಿದ್ದಾನೆ.

BENGALURU CRIME: ಅನಾರೋಗ್ಯ ತಾಳಲಾರದೇ 19ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಮಹಿಳೆ

ಚೀರುತ್ತಾ, ಒಡ್ಡಾಡುತ್ತಾ ರಸ್ತೆಯ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಗಮನಿಸಿದ ಆರೋಪಿ ತಕ್ಷಣವೇ ತಾನು ತಂದಿದ್ದ ಬೈಕ್‌ನಲ್ಲಿ ಹತ್ತಿಕೊಂಡು ಪರಾರಿ ಆಗಿದ್ದಾನೆ. ನಂತರ ಘಟನೆಯನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Follow Us:
Download App:
  • android
  • ios