Bengaluru Crime: ಅನಾರೋಗ್ಯ ತಾಳಲಾರದೇ 19ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಮಹಿಳೆ
ಬೆಂಗಳೂರಿನ ತಲ್ಲಘಟ್ಟಪುರ ಬಳಿಯಲ್ಲಿರುವ ಪೂರ್ವ ಹೈಲ್ಯಾಂಡ್ ಅಪಾರ್ಟ್‌ಮೆಂಟ್‌ನ 19ನೇ ಮಹಡಿಯಿಂದ ಮಹಿಳೆಯೊಬ್ಬರು ಬಿದ್ದು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ವರದಿ- ಕಿರಣ್.ಕೆ.ಎನ್. ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಡಿ.25): ಅದು ಭಾರತೀಯ ಮೂಲದ ಎನ್ ಆರ್ ಐ ಕುಟುಂಬ. ಕಳೆದ ಹದಿನೈದು ವರ್ಷದಿಂದ ಕೆನಡಾದಲ್ಲಿ ವಾಸವಾಗಿದ್ದ ಆ ಕುಟುಂಬದ ಒಡತಿಗೆ ಅದೊಂದು ರೀತಿಯ ಕಾಯಿಲೆ ಶುರುವಾಗಿತ್ತು. ಪರಿಣಾಮ ಕೆಲಸಕ್ಕೆ ಗುಡ್ ಬಾಯ್ ಹೇಳಿ, ಚಿಕಿತ್ಸೆಗೆ ಅಂತಾ ತವರಿಗೆ ವಾಪಸ್ ಆಗಿದ್ದರು. ಚಿಕಿತ್ಸೆ ಪಡೆಯುತಿದ್ದ ಮಹಿಳೆ ಇಂದು ತಾವು ವಾಸವಾಗಿದ್ದ ಅಪಾರ್ಟ್ಮೆಂಟ್ ನ 19ಏ ಪ್ಲೋರ್ ನಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇಂಥದೊಂದು ಘಟನೆ ನಡೆದಿರೋದು ಬೆಂಗಳೂರಿನ ತಲಘಟ್ಟಪುರದಲ್ಲಿ.. ಇಲ್ಲಿನ ಪೂರ್ವ ಹೈರ್ಲಾಂಡ್ ಅಪಾರ್ಟ್ಮೆಂಟ್ ನಲ್ಲಿ ಇಂದು ಮಧ್ಯಾಹ್ನ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ಕರಿಷ್ಮಾ ಮತ್ತು ಕರನ್ ಅನ್ನೋ ದಂಪತಿಗಳು ಕಳೆದ ಹದಿನೈದು ವರ್ಷಗಳಿಂದ ಕೆನಡಾದಲ್ಲಿ ವಾಸವಾಗಿದ್ದರು. ಅಲ್ಲಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ದಂಪತಿ, ಖುಷಿ ಖುಷಿಯಾಗೇ ಲೈಪ್ ಲೀಡ್ ಮಾಡುತ್ತಿದ್ದರು.
7ನೇ ಮಹಡಿಯಿಂದ ಜಿಗಿದು ಎಲ್‌ಎಲ್‌ಬಿ ವಿದ್ಯಾರ್ಥಿನಿ ಆತ್ಮಹತ್ಯೆ!
ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಚರಿಷ್ಮಾ: ಹೀಗೆ ಇದ್ದ ಕುಟುಂಬದಲ್ಲಿ ದುರದೃಷ್ಟವಶಾತ್, ಮನೆಯ ಒಡತಿ ಕರಿಷ್ಮಾ ದಿನ ಕಳೆದಂತೆ ಮಾನಸಿಕ ಖಿನ್ನತೆ ಗೆ ಒಳಗಾಗಿದ್ದರು. ಕೆನಡಾದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ರು ಪ್ರಯೋಜನ ವಾಗಿರಲಿಲ್ಲ.. ಇದರಿಂದ ಬೇಸತ್ತ ಕುಟುಂಬ, ಕೆನಡಾ ಬಿಟ್ಟು ತವರು ಬೆಂಗಳೂರಿಗೆ ಹೋಗಿಬಿಡೋಣ.. ಬೆಂಗಳೂರಿನಲ್ಲೇ ಉತ್ತಮ ಚಿಕಿತ್ಸೆ ಸಿಗುತ್ತೆ ಅಂತಾ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕೆನಡಾ ದಿಂದ ಬೆಂಗಳೂರಿಗೆ ವಾಪಸು ಆಗಿ, ತಲಘಟ್ಟಪುರದ ಪೂರ್ವ ಹೈಲ್ಯಾಂಡ್ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು.
ಚಿಕಿತ್ಸೆ ನಡುವೆಯೂ ಆತ್ಮಹತ್ಯೆಗೆ ಯತ್ನ: ಬೆಂಗಳೂರಿಗೆ ಬಂದ ದಂಪತಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಪತ್ನಿಯ ಮಾನಸಿಕ ಖಿನ್ನತೆ ಗೆ ಚಿಕಿತ್ಸೆ ಕೂಡ ಶುರು ಮಾಡಿದ್ದರು. ಚಿಕಿತ್ಸೆ ಮಧ್ಯೆಯೂ ಕರಿಷ್ಮಾ ಕಳೆದ ಒಂದು ತಿಂಗಳ ನಡುವೆ ಒಮ್ಮೆ ಆತ್ಮಹತ್ಯೆ ಯತ್ನಿಸಿದ್ದರು. ಈ ವೇಳೆ ಮನೆಯಲ್ಲಿದ್ದ ಕುಟುಂಬಸ್ಥರು ತಕ್ಷಣ ಆಕೆಯನ್ನು ರಕ್ಷಣೆ ಮಾಡದ್ದರು. ಆದರೆ ಇಂದು ಮಧ್ಯಾಹ್ನ ಮನೆಯಲ್ಲಿದ್ದ ನಲವತ್ತು ವರ್ಷದ ಎನ್ ಆರ್ ಐ ಕರಿಷ್ಮಾ ಅಪಾರ್ಟ್ಮೆಂಟ್ ನ ಹತ್ತೊಂಬತ್ತನೆ ಫ್ಲೋರ್ ನಿಂದ ಹಾರಿ ಆತ್ಮಹತ್ಯೆ ಗೆ ಮಾಡಿಕೊಂಡಿದ್ದಾಳೆ. ಮೇಲಿದ್ದ ಬಿದ್ದ ಪರಿಣಾಮ, ಕರಿಷ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಚಾರ ತಿಳಿದ ತಲಘಟ್ಟಪುರ ಪೊಲೀಸರು, ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಪತ್ನಿಯೊಂದಿಗೆ ಜಗಳ: ಕಂದನನ್ನು ಬಾಲ್ಕನಿಯಿಂದ ಕೆಳಗೆಸೆದು ತಾನು ಹಾರಿದ
ಸದ್ಯ ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.. ನೆಮ್ಮದಿಯ ಜೀವನ ಅರಸಿ ಬೆಂಗಳೂರಿಗೆ ಬಂದ ಕುಟುಂಬ, ಈ ರೀತಿ ದಾರುಣ ಸಾವಿಗೀಡಾಗಿದ್ದು ಮಾತ್ರ ವಿಪರ್ಯಾಸ.