ಯುವತಿಯೊಬ್ಬಳು ವಿವಾಹಿತನ ಮೋಹಕ್ಕೆ ಬಿದ್ದು ಕೊನೆಗೆ ಪ್ರಾಣವನ್ನೇ ಕೊಟ್ಟಿರುವ ಘಟನೆ ನಡೆದಿದೆ. ಮುಂದಿನ ಜನ್ಮದಲ್ಲಿ ಗಂಡ-ಹೆಂಡತಿಯಾಗುತ್ತೇವೆ ಎಂದು ಬರೆದಿಟ್ಟಿದ್ದಾಳೆ.

ರಾಯಚೂರು, (ಡಿ.12): ವಿವಾಹಿತನೊಂದಿಗೆ ಅಪ್ರಾಪ್ತ ಬಾಲಕಿಯೊಬ್ಬಳು ಪ್ರೇಮಿಸಿ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಯಚೂರಿನ ಲಿಂಗಸಗೂರು ತಾಲೂಕಿನ ಪೈದೊಡ್ಡಿ ಗ್ರಾಮ ಹೊರವಲಯದಲ್ಲಿ ನಡಿದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆತ್ಮಹತ್ಯೆಗೆ ಯತ್ನಿಸಿದ್ದ ಜಾಲೇರದೊಡ್ಡಿಯ ಮಹಾದೇವಿ (17) ಸಾವನ್ನಪ್ಪಿದ್ದಾಳೆ. ಇನ್ನು ಯರಜಂತಿ ಗ್ರಾಮದ ನರಸಪ್ಪ (28) ಸ್ಥಿತಿ ಗಂಭೀರವಾಗಿದೆ.

ಇದೆಂಥಾ ಕ್ರೌರ್ಯ... ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ ಅಪರಿಚಿತ

ಈಗಾಗಲೇ ನರಸಪ್ಪಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೂ, ಇವರಿಬ್ಬರೂ ಪ್ರೀತಿಸುತ್ತಿದ್ದರು. ವಿವಾಹಿತನೊಂದಿಗೆ ಮಗಳ ಪ್ರೀತಿ ವಿಚಾರ ತಿಳಿದ ಮಹಾದೇವಿ ಪಾಲಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಮನನೊಂದು ನಮ್ಮ ಸಾವಿಗೆ ಯಾರು ಕಾರಣರಲ್ಲ ಎಂದು ಚೀಟಿ ಬರೆದಿಟ್ಟು ಒಟ್ಟಿಗೆ ವಿಷ ಸೇವಿಸಿದ್ದಾರೆ. ದುರದೃಷ್ಟವಶಾತ್ ಯುವತಿ ಸಾವನ್ನಪ್ಪಿದ್ದಾಳೆ. ಮುಂದಿನ ಜನ್ಮದಲ್ಲಿ ಗಂಡ-ಹೆಂಡತಿಯಾಗುತ್ತೇವೆ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾರೆ. ಈ ಘಟನೆ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.