ಸೂರತ್(ಡಿ. 11)  ನಿರ್ಮಾಣ ಹಂತದ ಕಟ್ಟಡದಲ್ಲಿ ತಂದೆ ಪಕ್ಕವೆ ಮಲಗಿದ್ದ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಕ್ರೌರ್ಯ ಮೆರೆಯಲಾಗಿದೆ.

ಸೂರತ್‌ನಲ್ಲಿ 7 ವರ್ಷದ ಬಾಲಕಿಯನ್ನು ಅಪರಿಚಿತ ವ್ಯಕ್ತಿಯೊಬ್ಬ ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ತನ್ನ ತಂದೆಯೊಂದಿಗೆ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಮಲಗಿದ್ದ ವೇಳೆ ಆಕೆಯನ್ನು ಎತ್ತಿಕೊಂಡು ನಿರ್ಜನ ಪ್ರದೇಶಕ್ಕೆ ತೆರಳಿದ್ದಾನೆ.

ಸಚಿನ್ ಜಿಐಡಿಸಿ ಪ್ರದೇಶದಲ್ಲಿ ದೌರ್ಜನ್ಯ ನಡೆದಿದ್ದು  ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾಗಿದ್ದು ಪೊಲೀಸರು ಬಲೆ ಬೀಸಿದ್ದಾರೆ. ಟೀ ಅಂಗಡಿ ಮಾಲೀಕರೊಬ್ಬರು ರಕ್ತ ಸಿಕ್ತವಾಗಿ ಬಿದ್ದಿದ್ದ ಬಾಲಕಿಯನ್ನು ಆಕೆ ನಾಪತ್ತೆಯಾಗಿ ಒಂಬತ್ತು ಗಂಟೆಗಳ ನಂತರ ನೋಡಿದ್ದಾರೆ. ನಂತರ ಕುಟುಂಬದವರಿಗೆ ತಿಳಿಸಲಾಗಿದ್ದು ಪೊಲೀಸರಿಗೂ ಮಾಹಿತಿ ಹೋಗಿದೆ.

ರೇಪಿಸ್ಟ್ ಗಳಿಗೆ ಮರಣದಂಡನೆ ಫಿಕ್ಸ್; ಸಚಿವ ಸಂಪುಟ ಒಪ್ಪಿಗೆ

ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋದಾಗ ಅತ್ಯಾಚಾರ ನಡೆದಿರುವುದು  ಗೊತ್ತಾಗಿದೆ. ಬಾಲಕಿಯ ಗುಪ್ತಾಂಗಗಳ ಮೇಲೆ ಇದ್ದ  ಗಾಯಗಳು ದಾರುಣ ಕತೆ ಹೇಳಿವೆ.

ಖಾಲಿ ಸಿಮೆಂಟ್ ಚೀಲವನ್ನು ಹಾಸಿಕೊಂಡು ಬಾಲಕಿ ತಂದೆ ಜತೆ ನಿದ್ರಿಸುತ್ತಿದ್ದಳು. ಈ ವೇಳೆ ಕೆಂಪು ಟೀ ಶರ್ಟ್ ಧರಿಸಿದ ವ್ಯಕ್ತಿ ಅಲ್ಲಿಗೆ ಬಂದಿದ್ದಾನೆ. ಆತನೆ ಅಪಹರಣ ಮಾಡಿ ದೌರ್ಜನ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ಹೇಳಿವೆ.

ಮಧ್ಯರಾತ್ರಿ ಒಂದು ಗಂಟೆಗೆ ಎಚ್ಚೆತ್ತ ತಂದೆ ಮಗಳಮನ್ನು ಹುಡುಕಿದ್ದಾರೆ. ಎಷ್ಟೆ ಹುಡುಕಿದರೂ ಬಾಲಕಿ ಸಿಕ್ಕಿಲ್ಲ. ನಂತರ ಮರುದಿನ ಘೋರ ಘಟನೆ ಬೆಳಕಿಗೆ ಬಂದಿದೆ.