ಶಾಲೆಗೆ ಹೋದವರು ಮರಳಿ ಬರಲೇ ಇಲ್ಲ, ಮಣಿಪುರದಲ್ಲಿ ಮೂರೇ ತಿಂಗಳಲ್ಲಿ 30 ಮಂದಿ ನಾಪತ್ತೆ!

ದೇಶಾದ್ಯಂತ ಅತ್ಯಾಚಾರ, ಕೊಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದರಲ್ಲೂ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಮಣಿಪುರದಲ್ಲಿ ಪರಿಸ್ಥಿತಿ ಕೈ ಮೀರಿದೆ. ಹೀಗಿರುವಾಗ ಮಣಿಪುರದಲ್ಲಿ 3 ತಿಂಗಳಲ್ಲಿ 30 ಮಂದಿ ಕಾಣೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

Left For Classes, Never Returned, 30 Go Missing In 3 Months In Manipur Vin

ಮೇ ತಿಂಗಳಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಕನಿಷ್ಠ 30 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಕಾಣೆಯಾದ ದೂರುಗಳ ಸಂಖ್ಯೆ ಮತ್ತು ಸಲ್ಲಿಕೆಯಾಗದ ಮೊದಲ ಮಾಹಿತಿ ವರದಿಗಳ ಸಂಖ್ಯೆಯನ್ನು ಗಮನಿಸಿದರೆ, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮಣಿಪುರದಲ್ಲಿ ನಡೆದ ಭಾರೀ ಹಿಂಸಾಚಾರದ ಆರಂಭಿಕ ದಿನಗಳಲ್ಲಿ, ಪತ್ರಕರ್ತ, ಸಂಶೋಧಕ ಮತ್ತು ಸಾಮಾಜಿಕ ಕಾರ್ಯಕರ್ತ  ಆಟಮ್ ಸಮರೇಂದ್ರ ಸಿಂಗ್ ನಾಪತ್ತೆಯಾಗಿದ್ದರು. ಅಂದಿನಿಂದ ಅವರ ಬಗ್ಗೆ ಯಾವುದೇ ಸುದ್ದಿ ಇಲ್ಲ. ಅವರೊಂದಿಗಿದ್ದ ಸ್ನೇಹಿತ ಯುಮಖೈಬಮ್ ಕಿರಣ್‌ಕುಮಾರ್ ಸಿಂಗ್ ಕೂಡಾ ಮರಳಿ ಬಂದಿಲ್ಲ. ಹೀಗಾಗಿ ಅವರ ಪತ್ನಿ ಕವಿತಾ ತುಂಬಾ ಭಯದಲ್ಲಿದ್ದಾರೆ. 

ಕಾಂಗ್‌ಪೊಕ್ಪಿ ಜಿಲ್ಲೆಯ ತಪ್ಪಲಿನಲ್ಲಿರುವ ಮಣಿಪುರ ಒಲಿಂಪಿಕ್ ಪಾರ್ಕ್‌ಗೆ ಹೊಂದಿಕೊಂಡಿರುವ ಸಾಹೇಬಂಗ್ ಪ್ರದೇಶಕ್ಕೆ ಇಬ್ಬರೂ ತೆರಳಿದ್ದರು. ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ಮತ್ತು ಅವರಿಬ್ಬರೂ ಪತ್ತೆಯಾಗಿಲ್ಲ. ನಾಪತ್ತೆ ದೂರು (Complaint) ದಾಖಲಾದ ನಂತರ ಹುಡುಕಾಟ ನಡೆಸಲಾಗಿದ್ದರೂ ಇನ್ನೂ ಯಾವುದೇ ಯಶಸ್ಸು (Success) ಸಿಕ್ಕಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 6,000ಕ್ಕೂ ಹೆಚ್ಚು ಶೂನ್ಯ ಎಫ್‌ಐಆರ್‌ಗಳಿವೆ ಎಂದು ತಿಳಿದುಬಂದಿದೆ.

Manipur: ಬಿಎಸ್‌ಎಫ್‌ ಯೋಧನಿಂದ ಮಹಿಳೆಗೆ ಲೈಂಗಿಕ ಕಿರುಕುಳ ; ಸಿಸಿ ಕ್ಯಾಮರಾದಲ್ಲಿ ಸೆರೆ

ಕೋಚಿಂಗ್‌ಗೆ ತೆರಳಿದ್ದ ವಿದ್ಯಾರ್ಥಿನಿ ನಾಪತ್ತೆ
'ನನ್ನ ತಂದೆ ತುಂಬಾ ಕಷ್ಟಪಟ್ಟು ಕೆಲಸ ಮಾಡಿದರು ಮತ್ತು ಶಿಲ್ಲಾಂಗ್‌ನಲ್ಲಿ ನಡೆದ ಇಸ್ರೋದ ಯುವ ವಿಜ್ಞಾನಿ ಕಾರ್ಯಕ್ರಮಕ್ಕೆ ನಾನು ಸೇರಬೇಕೆಂದು ಬಯಸಿದ್ದರು'  ಎಂದು ಸಿಂಗ್ ಅವರ ಪುತ್ರ ಆಟಮ್ ಥೋಯಿಹೆನ್ಬಾ ತಿಳಿಸಿದ್ದಾರೆ. 'ಕುಟುಂಬಗಳಿಗೆ ಕನಿಷ್ಠ ಡಿಎನ್ಎ ಪರೀಕ್ಷೆಗಾಗಿ ಮಾದರಿಗಳನ್ನು ನೀಡಬೇಕು. ಆದ್ದರಿಂದ ನಾವು ಅಂತಿಮ ವಿಧಿಗಳನ್ನು ಮಾಡಬಹುದು. ಆದರೆ ಮಣಿಪುರ ಸರ್ಕಾರವು ಅದನ್ನು ಸಹ ಮಾಡುತ್ತಿಲ್ಲ' ಎಂದು ಸಿಂಗ್ ಅವರ ಚಿಕ್ಕಪ್ಪ ಆಟಮ್ ಮೇಘಜಿತ್ ಹೇಳಿದರು.

ಪತ್ರಕರ್ತ ಮತ್ತು ಅವರ ಸ್ನೇಹಿತ ನಾಪತ್ತೆಯಾದ ಎರಡು ತಿಂಗಳ ನಂತರ, ಜುಲೈ 6ರಂದು ಇಂಫಾಲ್‌ನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. 17 ವರ್ಷದ ಹಿಜಾಮ್ ಲುವಾಂಗ್ಬಿ ಲಿಂಥೋಯಿಂಗಂಬಿ, ಬೆಳಗ್ಗೆ ಕರ್ಫ್ಯೂ ಸಡಿಲಗೊಂಡಾಗ ನೀಟ್ ಕೋಚಿಂಗ್ ತರಗತಿಗಳಿಗಾಗಿ ತನ್ನ ಮನೆಯಿಂದ ಹೊರಟಿದ್ದಳು. ಆಕೆಯನ್ನು ಆಕೆಯ ಗೆಳೆಯ 17 ವರ್ಷದ ಫಿಜಾಮ್ ಹೇಮಂಜಿತ್ ಕರೆದುಕೊಂಡು ಹೋದರು. ಹೀಗೆ ಲಾಂಗ್‌ ರೈಡ್‌ಗೆ ಹೋದ ಇಬ್ಬರೂ ನಾಪತ್ತೆ (Missing)ಯಾಗಿದ್ದಾರೆ. ಅವರ ಪೋಷಕರು ಎರಡು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ಇಬ್ಬರೂ ಇಂಫಾಲ್ ಕಣಿವೆಯ ನಂಬೋಲ್ ಪ್ರದೇಶದ ಕಡೆಗೆ ಹೋಗುತ್ತಿರುವುದನ್ನು ದೃಢಪಡಿಸುವ ಸಿಸಿಟಿವಿ ದೃಶ್ಯಗಳಿವೆ ಎಂದು ಪೊಲೀಸರು ಹೇಳುತ್ತಾರೆ.

Manipur: ಒಂದಲ್ಲ.. ಎರಡಲ್ಲ.. 7 ಅತ್ಯಾಚಾರ ನಡೆದಿದೆ: ಬಗೆದಷ್ಟೂ ಬಯಲಿಗೆ ಬರ್ತಿದೆ ರೇಪ್‌ ಕೇಸ್‌!

ಪೊಲೀಸರು ಆ ಸ್ಥಳಕ್ಕೆ ಹೋಗಲು ಧೈರ್ಯ ಮಾಡುತ್ತಿಲ್ಲ ಎಂದು ಪೋಷಕರ ಆರೋಪ
'ಸೈಬರ್ ಕ್ರೈಮ್ ಪೋಲೀಸ್ ವರದಿಗಳು ಕ್ವಾಕ್ಟಾದಲ್ಲಿ ಹುಡುಗಿಯ ಫೋನ್ ಕೊನೆಯದಾಗಿ ಸ್ವಿಚ್ ಆಫ್ ಆಗಿತ್ತು ಮತ್ತು ಹುಡುಗನ ಫೋನ್ ಲ್ಯಾಮ್ಡಾನ್‌ನಲ್ಲಿ ಸ್ವಿಚ್ ಆಫ್ ಆಗಿತ್ತು' ಎಂದು ಹುಡುಗಿಯ ತಂದೆ ಹಿಜಾಮ್ ಕುಲ್ಲಾಜಿತ್ ಹೇಳಿದರು. ಎರಡು ಸ್ಥಳಗಳು ಎರಡು ವಿಭಿನ್ನ ಜಿಲ್ಲೆಗಳಲ್ಲಿ. ಬಿಷ್ನ್‌ಪುರ ಜಿಲ್ಲೆಯ ಕ್ವಾಕ್ತಾ, ಚುರಚಂದಪುರದ ಲ್ಯಾಮ್‌ಡಾನ್ - ಮತ್ತು ಅವು ಪರಸ್ಪರ 18 ಕಿಮೀ ದೂರದಲ್ಲಿವೆ. ಕಣಿವೆ ಮತ್ತು ಬೆಟ್ಟಗಳ ಗಡಿ ಭಾಗಗಳಲ್ಲಿ ಭಾರೀ ಹಿಂಸಾಚಾರ ನಡೆದಿದೆ.

'ಮಗಳು ಸಮಯಕ್ಕೆ ಸರಿಯಾಗಿ ಹಿಂತಿರುಗದ ಕಾರಣ ನಾನು ಅವಳಿಗೆ ಕರೆ ಮಾಡಿದೆ. ಅವಳು ತುಂಬಾ ಭಯಗೊಂಡಂತೆ ಇದ್ದಳು. ನಾನು ನಂಬೋಲ್‌ನಲ್ಲಿದ್ದೇನೆ ಎಂದು ಹೇಳಿದಳು. ಹೆಚ್ಚಿನ ಮಾಹಿತಿ ಹೇಳು. ಕರೆದುಕೊಂಡು ಹೋಗಲು ತಂದೆ ಬರುತ್ತಾರೆಂದು ಹೇಳುತ್ತಿದ್ದೆ. ನಂತರ ಮೊಬೈಲ್ ಸ್ವಿಚ್ ಆಫ್ ಆಯಿತು' ಎಂದು ಹುಡುಗಿಯ (Girl) ತಾಯಿ ಹೇಳಿದ್ದಾರೆ. ಅದಲ್ಲದೆ, ಹೇಮಂಜಿತ್ ಮೊಬೈಲ್‌ನ್ನು ಈಗ ಮತ್ತೊಬ್ಬರು ಬಳಸ್ತಿರೋದು ತಿಳಿದುಬಂದಿದೆ. ಆದರೆ ಪೊಲೀಸರು ಆ ಸ್ಥಳಕ್ಕೆ ಹೋಗಲು ಧೈರ್ಯ ಮಾಡುತ್ತಿಲ್ಲ ಎಂದು ಹೇಮಾನ್‌ಜಿತ್‌ನ ತಂದೆ ಫಿಜಾಮ್ ಹೇಳಿದ್ದಾರೆ.

ನಾಗರಿಕ ಸಮಾಜವು ಕಾಣೆಯಾದ ಪ್ರಕರಣಗಳನ್ನು ದಾಖಲಿಸಿದೆ ಮತ್ತು ಶವಗಳನ್ನು ಇನ್ನೂ ಹಿಂತಿರುಗಿಸದ ಪ್ರಕರಣಗಳನ್ನು ಸಹ ದಾಖಲಿಸಿದೆ. ಆಗಸ್ಟ್ 3 ರಂದು ಸಾಮೂಹಿಕ ಅಂತ್ಯಕ್ರಿಯೆ (Creamation) ನಡೆಸಲು ಯೋಜಿಸಲಾಗಿದೆ. ನಾಪತ್ತೆಯಾದ ಜನರ 44 ಮೃತದೇಹಗಳು ಈಗ ಇಂಫಾಲ್ ಆಸ್ಪತ್ರೆಗಳ ಶವಾಗಾರದಲ್ಲಿವೆ ಎಂದು ವರದಿಗಳಿವೆ. ಆ ಶವಗಳನ್ನು ಅಂತ್ಯಕ್ರಿಯೆಗೆ ಕಳುಹಿಸಲು ನಾವು ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ವಕ್ತಾರ ಗಿಂಜಾ ವುಲ್ಜಾಂಗ್ ಹೇಳಿದ್ದಾರೆ. .

Latest Videos
Follow Us:
Download App:
  • android
  • ios