ಕಾಲೇಜು ಉಪನ್ಯಾಸಕಿ ಆತ್ಮಹತ್ಯೆ: ಹುಟ್ಟು ಹಬ್ಬದಂದೇ ದುರಂತ ಅಂತ್ಯ
ತನ್ನ ಹುಟ್ಟುಹಬ್ಬ ದಿನದಂದೇ ಕಾಲೇಜು ಉಪನ್ಯಾಸಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಡೆತ್ ನೋಟ್ ಪತ್ತೆಯಾಗಿದೆ.
ಚಾಮರಾಜನಗರ, (ಆಗಸ್ಟ್. 09): ಕಾಲೇಜು ಉಪನ್ಯಾಸಕಿಯೊಬ್ಬರು ಹಾಸ್ಟೆಲ್ನಲ್ಲಿ ನೇಣುಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಂದನಾ(26) ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ. ಇಂದು(ಆಗಸ್ಟ್ 9) ಅವರ ಬರ್ತ್ ಡೇ. ಈ ದಿನವೇ ಜೆಎಸ್‌ಎಸ್ ಕಾಲೇಜಿನ ಹಾಸ್ಟೆಲ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಿಯತಮನಿಗಾಗಿ ಗಂಡನನ್ನೇ ಕೊಂದುಬಿಟ್ಲು, ಫೋನ್ ರೆಕಾರ್ಡಿಂಗ್ ಕೇಳಿ ಪೊಲೀಸ್ರು ಬೆಚ್ಚಿಬಿದ್ರು!
ಆತ್ಮಹತ್ಯೆಗೂ ಮುನ್ನ ಉಪನ್ಯಾಸಕಿ ಚಂದನಾ ಡೆತ್ ನೋಟ್ ಬರೆದಿಟ್ಟಿದ್ದು, ಅದು ಪತ್ತೆಯಾಗಿದೆ. ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಚಂದನಾ, ಚಾಮರಾಜನಗರದ ಜೆಎಸ್‌ಎಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಡೆತ್ನೋಟ್ ಪತ್ತಯಾಗಿದ್ದು, 'ನನ್ನ ಸಾವಿಗೆ ನಾನೇ ಕಾರಣ' ಎಂದು ಬರೆಯಲಾಗಿದೆ. ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.