ಹಣಕ್ಕಾಗಿ ನೀಟ್ ತಯಾರಿಯಲ್ಲಿದ್ದ ವಿದ್ಯಾರ್ಥಿ ಅಪಹರಿಸಿ ಕೊಲೆ, ಶವ ಸೂಟ್‌ಕೇಸ್‌ನಲ್ಲಿಟ್ಟ ಹೋಟೆಲ್ ಮಾಲೀಕ!
ಕೋಲ್ಕತ್ತಾದ ಹೊರವಲಯದಲ್ಲಿರುವ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ NEET ಬರೆಯಲು ತಯಾರಿಯಲ್ಲಿದ್ದ 19 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಕೊಲೆ ಮಾಡಿ ಸೂಟ್‌ಕೇಸ್ ನಲ್ಲಿ ತುಂಬಿಸಿಟ್ಟ ಘಟನೆ ನಡೆದಿದೆ.
ಪಶ್ಚಿಮ ಬಂಗಾಳ (ಅ.7): ಕೋಲ್ಕತ್ತಾದ ಹೊರವಲಯದಲ್ಲಿರುವ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ NEET ಬರೆಯಲು ತಯಾರಿಯಲ್ಲಿದ್ದ 19 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಕೊಲೆ ಮಾಡಿ ಆತನ ಶವವನ್ನು ಸೂಟ್‌ಕೇಸ್‌ನಲ್ಲಿ ಬಾಯಿಗೆ ಟೇಪ್ ಅಂಟಿಸಿ ತುಂಬಿಡಲಾಗಿತ್ತು ಎಂದು ಬಿಧಾನನಗರ ಪೊಲೀಸ್ ಕಮಿಷನರೇಟ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದ ನ್ಯೂ ಟೌನ್ ಪ್ರದೇಶದ ಮಹಿಷಾಬಥನ್‌ನಲ್ಲಿ ವಾಸಿಸುತ್ತಿದ್ದ ಸಾಜಿದ್ ಹೊಸೈನ್ (19) ಮೃತ ವಿದ್ಯಾರ್ಥಿಯಾಗಿದ್ದು, ಮಾಲ್ಡಾ ಜಿಲ್ಲೆಯ ಬೈಸ್ನಾಬ್‌ನಗರ ಪ್ರದೇಶದ ಯುವಕ ಅಕ್ಟೋಬರ್ 4 ರಿಂದ ನಾಪತ್ತೆಯಾಗಿದ್ದ, ಮೊಬೈಲ್ ಸಂಖ್ಯೆ ಕೂಡ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಮೃತ ವಿದ್ಯಾರ್ಥಿ ತನ್ನ NEET ತಯಾರಿಗಾಗಿ ಮನೆ ಬಾಡಿಗೆಗೆ ಪಡೆದಿದ್ದ ಎಂದು ತಿಳಿದುಬಂದಿದೆ.
CHITRADURGA: ಪ್ರೀತಿ ತಿರಸ್ಕರಿಸಿದ್ದಕ್ಕೆ ಕಿಡ್ನಾಪ್: ಅತ್ಯಾಚಾರವೆಸಗಿ ಯುವತಿ ಕೊಂದ ಪಾಗಲ್ ಪ್ರೇಮಿ!
ವಿದ್ಯಾರ್ಥಿ ನಾಪತ್ತೆಯಾದ ಬಳಿಕ ತನ್ನ ಮಗ ನಾಪತ್ತೆಯಾಗಿದ್ದು, ಆತನ ಫೋನ್ ಸ್ವಿಚ್ ಆಫ್ ಆಗಿದೆ ಎಂದು ತಂದೆ ಮೊಖ್ತಾರ್ ಹುಸೇನ್ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದಾದ ಬಳಿಕ ಆತನ ಬಿಡುಗಡೆ ಮಾಡಬೇಕಾದರೆ 30 ಲಕ್ಷ ರೂ ನೀಡಬೇಕೆಂದು ಮಗ ಸಾಜಿದ್ ಫೋನ್‌ನಿಂದ ಪೋಷಕರಿಗೆ ಫೋನ್ ಕರೆ ಬಂದಿತ್ತು. ತಕ್ಷಣ ಕಾರ್ಯಪ್ರವರ್ತರಾದ ಪೊಲೀಸರು ಶೋಧ ನಡೆಸಿದ್ದರು.
ಸಾಜಿದ್ ಹೊಸೇನ್ ಎಂಬ ವಿದ್ಯಾರ್ಥಿಯನ್ನು ಆತನಿಗೆ ಪರಿಚಯವಿರುವರೇ ಅಪಹರಿಸಿದ್ದಾರೆ ಎಂದು ಶಂಕಿಸಿದ ಪೊಲೀಸರು ಸ್ಥಳೀಯ ಉಪಹಾರ ಗೃಹದ ಮಾಲೀಕ ಗೌತಮ್ ಸಿಂಗ್ ಎಂಬಾತನ ನಿವಾಸದ ಮೇಲೆ ದಾಳಿ ನಡೆಸಿದರು. ಈ ವೇಳೆ ಸೂಟ್‌ಕೇಸ್‌ನಲ್ಲಿ ಶವ ಪತ್ತೆಯಾಗಿದೆ. ಸಾವಿಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಅಪರಿಚಿತರನ್ನು ಕೆಲಸಕ್ಕೆ ಸೇರಿಸಿಕೊಳ್ಳೋ ಮುನ್ನ ಹುಷಾರ್: ಉಂಡ ಮನೆಗೆ
ಸಾಜಿದ್ ನಿಯಮಿತವಾಗಿ ಉಪಾಹಾರ ಗೃಹಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಸಿಂಗ್ ಅವರ ಮನೆಯಲ್ಲಿ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಸಿಂಗ್ ಮತ್ತು ಅವರ ಸಹಚರರಲ್ಲಿ ಒಬ್ಬರಾದ ಪಪ್ಪು ಘೋಷ್ ಅವರನ್ನು ಕೂಡ ಬಂಧಿಸಲಾಗಿದೆ. ಮಿಕ್ಕ ನಾಲ್ವರು ಶಂಕಿತರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ ಸಾಜಿದ್‌ಗೆ ಪಾನೀಯವನ್ನು ನೀಡಿ ನಂತರ ದಿಂಬಿನಿಂದ ಮುಖ ಒತ್ತಿ ಉಸಿರುಗಟ್ಟಿಸಿ, ಬಳಿಕ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾವು ಶ್ರೀಮಂತರಲ್ಲ, ಆದರೆ ನನ್ನ ಮಗನಿಗೆ ಐಫೋನ್ ಬೇಕು ಎಂದು ನಾನು ಖರೀದಿಸಿ ಕೊಟ್ಟಿದ್ದೆ. ಬಹುಶಃ ಅಪಹರಣಕಾರರು ಶ್ರೀಮಂತ ಕುಟುಂಬದಿಂದ ಬಂದ ಹುಡುಗ ಎಂದು ಭಾವಿಸಿದ್ದರಾಗಿರಬೇಕು ಎಂದು ಕೊಲೆಯಾದ ವಿದ್ಯಾರ್ಥಿ ತಂದೆ ಪೊಲೀಸ್ ಠಾಣೆಯಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ