ಅಪರಿಚಿತರನ್ನು ಕೆಲಸಕ್ಕೆ ಸೇರಿಸಿಕೊಳ್ಳೋ ಮುನ್ನ ಹುಷಾರ್: ಉಂಡ ಮನೆಗೆ ದ್ರೋಹ ಬಗೆದ ಖದೀಮರು ಅರೆಸ್ಟ್
ಪೊಲೀಸರ ವಿಚಾರಣೆ ವೇಳೆ ಮೂವರು ಆರೋಪಿಗಳು ಎರಡು ಲಕ್ಷ ಹಣ ಪಡೆದು ನಂತರ ಬಿಹಾರಕ್ಕೆ ಎಸ್ಕೇಪ್ ಆಗಲು ಸಂಚು ರೂಪಿಸಿದ್ದರಂತೆ. ಸದ್ಯ ಈ ಬಗ್ಗೆ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು(ಅ.06): ಉಂಡ ಮನೆಗೆ ದ್ರೋಹ ಬಗೆಯೋದು ಅಂದ್ರೆ ಇದೇ ಇರಬೇಕು.. ಹೋಗ್ಲಿ ಅಂತಾ ತನ್ನ ಫ್ಯಾಕ್ಟರಿಯಲ್ಲಿ ಕೆಲಸ ಕೊಟ್ಟು ಮನೆ ಮಗನಂತೆ ಆ ಯುವಕನನ್ನ ನೋಡ್ಕೊಳ್ತಿದ್ರು..ಆದರೆ, ಈ ಖದೀಮ ಉಂಡ ಮನೆಗೆ ದ್ರೋಹ ಬಗೆದಿದ್ದಾನೆ.
ಹೌದು, ನೂರುಲ್ಲಾ ಹುಸೇನ್. ಬಿಹಾರ ಮೂಲದ ಈ ಯುವಕ ಆರ್ ಟಿ ನಗರಲ್ಲಿ ಮೊಹಮ್ಮದ್ ಆಸೀಫ್ ಹಬೀಬ್ ಎಂಬುವರ ಟಯರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಫ್ಯಾಕ್ಟರಿ ಮಾಲೀಕ ಹಬೀಬ್ ಕೂಡ ನೂರುಲ್ಲಾನನ್ನ ಮನೆ ಮಗನಂತೆ ನೋಡಿಕೊಂಡು ಮನೆಯಲ್ಲೇ ಊಟ, ತಿಂಡಿ ಕೊಟ್ಟು ಚೆನ್ನಾಗಿ ನೋಡ್ಕೊಂಡಿದ್ರು. ಅದ್ರೆ ಮಾಲೀಕ ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು ಈ ಪಾಪಿ ಯುವಕನಿಗೆ ದಿಢೀರ್ ಹಣ ಮಾಡಬೇಕು ಅನ್ನೋ ದುರಾಸೆ ತಲೆಗೆ ಹತ್ತಿತ್ತು. ಹೀಗಾಗಿ ಹಣಕ್ಕಾಗಿ ಸಿನಿಮಾ ಸ್ಟೈಲ್ ನಲ್ಲಿ ಕಿಡ್ನಾಪ್ ಕಥೆ ಕಟ್ಟಿದ ಅಸಾಮಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ನಡುರಸ್ತೆಯಲ್ಲೇ ಹೆಣವಾದ ಫೇಮಸ್ ಟೈಲರ್ : ಶಿಷ್ಯನೇ ಅವನ ಕಥೆ ಮುಗಿಸಿದ್ಯಾಕೆ ?
ಆರೋಪಿ ನೂರುಲ್ಲಾ ಹುಸೇನ್ ಸೆಪ್ಟೆಂಬರ್ 29 ರಂದು ಕೆಲಸ ಮುಗಿಸಿ ತಾನು ವಾಸವಿದ್ದ ಬಾಡಿಗೆ ಮನೆಗೆ ಹೋಗಿದ್ದ. ನಂತರ ರಾತ್ರಿ ೧೦ ಗಂಟೆಗೆ ನೂರುಲ್ಲಾ ತನ್ನ ಮಾಲೀಕರಿಗೆ ಕರೆ ಮಾಡಿ ತನ್ನನ್ನ ಇಬ್ಬರು ವ್ಯಕ್ತಿಗಳು ಕಿಡ್ನಾಪ್ ಮಾಡಿದ್ದಾರೆ ಎರಡು ಲಕ್ಷ ಹಣ ಡಿಮ್ಯಾಂಡ್ ಮಾಡುತಿದ್ದಾರೆ ಎಂದಿದ್ದಾನೆ. ಕಿಡ್ನಾಪ್ ವಿಚಾರ ತಿಳಿದ ಮೊಹಮ್ಮದ್ ಹಬೀಬ್ ಪೊಲೀಸರಿಗೆ ಮಾಹಿತಿ ನೀಡಿ ಹಣ ಕೊಡಲು ತಯಾರಿ ಕೂಡ ನಡೆಸಿದ್ದ. ನಂತರ ಮಾಲೀಕ ಹಬೀಬ್ ಗೆ ಕರೆ ಮಾಡಿದ ನೂರುಲ್ಲಾ ತನ್ನ ಖಾತೆಗೆ ಹಣ ಹಾಕುವಂತೆ ಹೇಳಿದ್ದು, ಪೊಲೀಸರು ಹಾಗೂ ಹಬೀಬ್ ಗೆ ಅನುಮಾನ ಹುಟ್ಟಿಸಿದೆ. ನಂತರ ಪೊಲೀಸರು ಆರೋಪಿಗಳ ಟವರ್ ಲೋಕೇಷನ್ ನೋಡಿದಾಗ ಮಂಡ್ಯದ ಪಾರ್ಕ್ ವೊಂದರಲ್ಲಿ ಮೂವರು ಆರೋಪಿಗಳು ಇರುವುದು ಗೊತ್ತಾಗಿದೆ. ಕೂಡಲೇ ಮಂಡ್ಯ ಪೊಲೀಸರಿಗೆ ಮಾಹಿತಿ ನೀಡಿದ ಆರ್ ಟಿ ನಗರ ಪೊಲೀಸರು ಮೂವರನ್ನ ವಶಕ್ಕೆ ಪಡೆದಿದ್ದಾರೆ. ನಂತರ ಆರ್ ಟಿ ನಗರ ಪೊಲೀಸರು ನೂರೂಲ್ಲಾ ಹುಸೇನ್, ಅಬೂಬಕರಗಮ್, ಆಲಿ ರೇಜಾ ಮೂವರನ್ನ ಬಂಧಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಮೂವರು ಆರೋಪಿಗಳು ಎರಡು ಲಕ್ಷ ಹಣ ಪಡೆದು ನಂತರ ಬಿಹಾರಕ್ಕೆ ಎಸ್ಕೇಪ್ ಆಗಲು ಸಂಚು ರೂಪಿಸಿದ್ದರಂತೆ. ಸದ್ಯ ಈ ಬಗ್ಗೆ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಅದೇನೆ ಇರಲಿ ಫ್ಯಾಕ್ಟರಿಯಲ್ಲಿ ಕೆಲಸ ಕೊಟ್ಟು, ಜೊತೆಗೆ ಮನೆ ಮಗನಂತೆ ನೋಡಿಕೊಂಡ ತಪ್ಪಿಗೆ ಅಸಾಮಿ ಮಾಲೀಕನ ಬೆನ್ನಿಗೆ ಚೂರಿ ಹಾಕಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.