Chitradurga: ಪ್ರೀತಿ ತಿರಸ್ಕರಿಸಿದ್ದಕ್ಕೆ ಕಿಡ್ನಾಪ್: ಅತ್ಯಾಚಾರವೆಸಗಿ ಯುವತಿ ಕೊಂದ ಪಾಗಲ್ ಪ್ರೇಮಿ!

ಪ್ರೀತಿ ತಿರಸ್ಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಕಿಡ್ನಾಪ್ ಮಾಡಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಚಿತ್ರದುರ್ಗ ತಾಲೂಕಿನ ಹುಲ್ಲೂರು ನಿವಾಸಿ ಅರ್ಪಿತಾ (19) ಹತ್ಯೆಯಾದ ಯುವತಿ. 

Lover Kidnaped Girlfriend And Murder For Refusing His Love In Chitradurga gvd

ಚಿತ್ರದುರ್ಗ (ಅ.07): ಪ್ರೀತಿ ತಿರಸ್ಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಕಿಡ್ನಾಪ್ ಮಾಡಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಚಿತ್ರದುರ್ಗ ತಾಲೂಕಿನ ಹುಲ್ಲೂರು ನಿವಾಸಿ ಅರ್ಪಿತಾ (19) ಹತ್ಯೆಯಾದ ಯುವತಿ. ಆರೋಪಿ ಅಜೇಯ ಅಕ್ಟೋಬರ್ 3 ರಂದು ಆಟೋದಲ್ಲಿ ಯುವತಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಹಲ್ಲೆ ನಡೆಸಿ ಬಳಿಕ ಆಸ್ಪತ್ರೆಗೆ ಅಡ್ಮಿಟ್ ಮಾಡಿ ಎಸ್ಕೇಪ್ ಆಗಿದ್ದ. ತಲೆಗೆ ಪೆಟ್ಟು ಹಿನ್ನೆಲೆ ಬ್ರೈನ್ ಡೆಡ್‌ನಿಂದಾಗಿ ಯುವತಿ ಮೃತಪಟ್ಟಿದ್ದಾರೆ. ಸದ್ಯ ಯುವತಿ ಪೋಷಕರು ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿ ಅಜಯ್‌ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮೈಸೂರಲ್ಲಿ ವೇಶ್ಯೆ ಹತ್ಯೆ: ಲೈಂಗಿಕ ಕಾರ್ಯಕರ್ತೆಯೊಬ್ಬರನ್ನು ಲಾಡ್ಜ್‌ಗೆ ಕರೆದೊಯ್ದು ಸಂಭೋಗ ನಡೆಸಿದ ನಂತರ ಕತ್ತು ಹಿಸುಕಿ ಕೊಲೆ ಮಾಡಿ, ಆಕೆಯ ಚಿನ್ನಾಭರಣ ಮತ್ತು ಹಣ ದೋಚಿದ್ದ ವ್ಯಕ್ತಿಗೆ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ. ಲೈಂಗಿಕ ಕಾರ್ಯಕರ್ತೆಯ ಅತ್ಯಾಚಾರ, ಕೊಲೆ ಮತ್ತು ದರೋಡೆ ಪ್ರಕರಣದಿಂದ ಮಂಡ್ಯ ಜಿಲ್ಲೆಯ ಕೊಮ್ಮೇರಹಳ್ಳಿ ನಿವಾಸಿ ಕೆ.ಸಿ.ಗಿರೀಶ್‌ (31) ಎಂಬಾತನನ್ನು ಖುಲಾಸೆಗೊಳಿಸಿ ಮೈಸೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಮೈಸೂರಿನ ಲಷ್ಕರ್‌ ಠಾಣಾ ಪೊಲೀಸರು ಕ್ರಿಮಿನಲ್‌ ಮೇಲ್ಮನವಿಯನ್ನು ಸಲ್ಲಿಸಿದ್ದರು.

ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎಚ್​.ಬಿ. ಪ್ರಭಾಕರ್​ ಶಾಸ್ತ್ರಿ ಅವರ ನೇತೃತ್ವದ ವಿಭಾಗೀಯ ಪೀಠ, ಗಿರೀಶ್‌ನನ್ನು ಅಪರಾಧಿಯೆಂದು ತೀರ್ಮಾನಿಸಿತು. ಜತೆಗೆ, ಹತ್ಯೆ ಅಪರಾಧಕ್ಕೆ ಜೀವಾವಧಿ ಮತ್ತು 30 ಸಾವಿರ ರು. ದಂಡ, ದರೋಡೆ ಅಪರಾಧಕ್ಕೆ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿದ್ದು, ಶಿಕ್ಷಾವಧಿಯನ್ನು ಏಕಕಾಲದಲ್ಲಿ ಪೂರೈಸಬೇಕು ಎಂದು ಸ್ಪಷ್ಪಪಡಿಸಿದೆ.

ವಿದ್ಯಾರ್ಥಿನಿಯಿಂದ ಶೌಚಾಲಯ ಕ್ಲೀನ್ ಮಾಡಿಸಿರೋ ಶಿಕ್ಷಕರು: ಆಸಿಡ್, ಬ್ಲಿಚಿಂಗ್ ವಾಸನೆಗೆ ಅಸ್ವಸ್ಥಗೊಂಡ ಬಾಲಕಿ

ಅಲ್ಲದೆ, ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮೈಸೂರು ಸೆಷನ್ಸ್‌ ನ್ಯಾಯಾಲಯ ಮೃತ ಸಂತ್ರಸ್ತೆಯ ಪುತ್ರನನ್ನು ಪತ್ತೆ ಹಚ್ಚಿ ಆತನಿಗೆ ದಂಡ ಮೊತ್ತದ ಪೈಕಿ 35 ಸಾವಿರ ರು. ಹಣವನ್ನು ಹಸ್ತಾಂತರಿಸಬೇಕು. ಉಳಿದ ಐದು ಸಾವಿರ ರು. ಹಣವನ್ನು ರಾಜ್ಯ ಸರ್ಕಾರಕ್ಕೆ ಪಾವತಿಸಬೇಕು. ಅಪರಾಧಿಯು ಮುಂದಿನ 45 ದಿನಗಳಲ್ಲಿ ಮೈಸೂರಿನ ಸೆಷನ್ಸ್‌ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಆದೇಶದಲ್ಲಿ ಹೈಕೋರ್ಟ್‌ ನಿರ್ದೇಶಿಸಿದೆ.

Latest Videos
Follow Us:
Download App:
  • android
  • ios