ಮಂಗಳೂರಿನಲ್ಲಿ ವಿಮಾನದ ಇಂಧನಕ್ಕೆ ಸೀಮೆಎಣ್ಣೆ ಮಿಕ್ಸಿಂಗ್ ದಂಧೆ: ಅಧಿಕಾರಿಗಳ ದಾಳಿ

ವಿಮಾನಗಳಿಗೆ ಬೇಕಾಗುವ ದುಬಾರಿ ಎಟಿಎಫ್ ಇಂಧನಕ್ಕೆ ಸೀಮೆ ಎಣ್ಣೆ ಕಲಬೆರಕೆ ಮಾಡುತ್ತಿದ್ದ ಅಕ್ರಮ ದಂಧೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಪತ್ತೆ ಹಚ್ಚಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಾಳಾ ಎಂಬಲ್ಲಿ ನಡೆದಿದೆ. ‌

Kerosene adulteration in aviation fuel busted, accused escaped in mangaluru gow

ಮಂಗಳೂರು (ನ.8): ವಿಮಾನಗಳಿಗೆ ಬೇಕಾಗುವ ದುಬಾರಿ ಎಟಿಎಫ್ ಇಂಧನಕ್ಕೆ ಸೀಮೆ ಎಣ್ಣೆ ಕಲಬೆರಕೆ ಮಾಡುತ್ತಿದ್ದ ಅಕ್ರಮ ದಂಧೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಪತ್ತೆ ಹಚ್ಚಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಾಳಾ ಎಂಬಲ್ಲಿ ನಡೆದಿದೆ. ‌ವಿಮಾನಗಳಿಗೆ ಬೇಕಾಗುವ ಇಂಧನಕ್ಕೆ ಸೀಮೆ ಎಣ್ಣೆ ಕಲಬೆರೆಕೆ ಮಾಡಿ ಪೆಟ್ರೋಲ್ ಕಳವು ಮಾಡುತ್ತಿದ್ದರು ಎನ್ನಲಾಗಿದೆ. ಸುರತ್ಕಲ್ ಸಮೀಪದ ಬಾಳ ಪ್ರದೇಶಕ್ಕೆ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಪೆಟ್ರೋಲ್, ಎರಡು ಟ್ಯಾಂಕರ್, ಪಿಕಪ್ ಸಹಿತ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಬಾಳ ಒಟ್ಟೆಕಾಯರ್ ತಿರುವ ಬಳಿ ದಾಳಿ ನಡೆಸಿದಾಗ ಗುಪ್ತವಾಗಿ ನಿರ್ಮಿಸಿದ ಅಂಡರ್ ಟ್ಯಾಂಕ್ ಒಂದು ಪತ್ತೆಯಾಯಿತು. ಎರಡು ಟ್ಯಾಂಕರ್ ಗಳಿಂದ ಪೆಟ್ರೋಲನ್ನು ಭೂಗತ ಟ್ಯಾಂಕ್‍ಗೆ ತುಂಬಿಸಿ, ಬಳಿಕ ಟ್ಯಾಂಕರ್ ಗೆ ಸೀಮೆ ಎಣ್ಣೆಯನ್ನು ರಾಸಾಯನಿಕ ಬಳಸಿ ಯಾರಿಗೂ ತಿಳಿಯದಂತೆ ಮಿಶ್ರಣ ಮಾಡಲಾಗುತ್ತಿತ್ತು ಎನ್ನಲಾಗಿದೆ. ದಾಳಿಯ ವೇಳೆ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.

40 ಲಕ್ಷ ರೂ. ಮೌಲ್ಯದ 2 ಟ್ಯಾಂಕರ್, 12 ಲಕ್ಷ ರೂ.ಮೌಲ್ಯದ ಪಿಕಪ್, ಲಕ್ಷಾಂತರ ರೂ.ಮೌಲ್ಯದ 16 ಸಾವಿರ ಲೀಟರ್ ಎಟಿಎಫ್ ಪೆಟ್ರೋಲ್ ಹಾಗೂ ಡ್ರಮ್‍ಗಳು, ಒಂದು ಜನರೇಟರ್ ನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಐಜಿಪಿ ಸತ್ಯನಾರಾಯಣ ಅವರು 2012ರಲ್ಲಿ  ಮಧ್ಯರಾತ್ರಿ ರಹಸ್ಯ ದಾಳಿ ನಡೆಸಿ ಇಂತಹ ದಂಧೆಯನ್ನು ಪತ್ತೆ ಹಚ್ಚಿ ಮಟ್ಟ ಹಾಕಿದ್ದರು. ಇದೀಗ ಮತ್ತೆ ಪೆಟ್ರೋಲ್ ಕಲಬೆರಕೆ ದಂದೆ ಈ ಜಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದು, ಕೆಲವೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಆಹಾರ ಇಲಾಖೆಯ ಮಾಣಿಕ್ಯ, ಚೇತನ್ , ಉಪತಹಶೀಲ್ದಾರ್ ನವೀನ್, ಸುರತ್ಕಲ್ ಠಾಣೆ ಎಸ್ ಐ ಪುನೀತ್ ಗಾಂವ್ಕರ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ವಿದ್ಯುತ್‌ ಬ್ಯಾಟರಿಯಲ್ಲಿ ಸಂಗ್ರಹಿಸಲು ಡಿಪಿಆರ್‌

ರಷ್ಯಾಗೆ ಜೈಶಂಕರ್‌ ಪ್ರವಾಸ ಶುರು: ಯುದ್ಧದ ಬಳಿಕ ಮೊದಲ ಭೇಟಿ
ನವದೆಹಲಿ: ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ ಬಳಿಕ ಇದೇ ಮೊದಲ ಬಾರಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಸೋಮವಾರ 2 ದಿನಗಳ ಭೇಟಿಗಾಗಿ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅವರು ರಷ್ಯಾ ವಿದೇಶಾಂಗ ಸಚಿವ ಸೆರ್ಗೈ ಲಾವ್ರೋವ್‌ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

Oil Import From Russia: ಭಾರತಕ್ಕೆ ತೈಲ ರಫ್ತು ಮಾಡೋದ್ರಲ್ಲಿ ರಷ್ಯಾನೇ ನಂ.1!

ಯುದ್ಧದ ಬಳಿಕ ಇದು ಉಭಯ ರಾಷ್ಟ್ರಗಳ ಉನ್ನತ ನಾಯಕರ ಮೊದಲ ಭೇಟಿಯಾಗಿದೆ. ಹಾಗಾಗಿ ಈ ಭೇಟಿ ಭಾರಿ ಕುತೂಹಲ ಕೆರಳಿಸಿದೆ. ಈ ವೇಳೆ ಉಭಯ ನಾಯಕರು ಜಾಗತಿಕ ಮಟ್ಟದಲ್ಲಿ ಮತ್ತು ಏಷ್ಯಾ ಪೆಸಿಫಿಕ್‌ ವಲಯದಲ್ಲಿ ಪರಸ್ಪರ ಸಹಕಾರದ ಕುರಿತಾಗಿ ಚರ್ಚೆ ನಡೆಸಬಹುದು. ಪ್ರಸ್ತುತ ಜಾಗತಿಕ ಸಮಸ್ಯೆಗಳ ಬಗ್ಗೆ ಹಾಗೂ ಭಾರತಕ್ಕೆ ಅಗತ್ಯವಾದ ತೈಲ ಪೂರೈಕೆ ಬಗ್ಗೆ ಮಾತುಕತೆ ನಡೆಸಬಹುದು ಎಂದು ಹೇಳಲಾಗಿದೆ.

Latest Videos
Follow Us:
Download App:
  • android
  • ios