Asianet Suvarna News Asianet Suvarna News

ಇನ್ಸ್ಟಾಗ್ರಾಮ್‌ ಮೇಲೆ ಖಾಕಿ ಕಣ್ಣು: ರಸೀದಿ ಹಿಡಿದು ಮನೆಗೆ ಬಂದ ಪೊಲೀಸರು

ಒಂದೇ ಬೈಕ್‌ನಲ್ಲಿ ಕೇರಳದ ಐವರು ವಿದ್ಯಾರ್ಥಿಗಳು ಪ್ರಯಾಣಿಸಿದ್ದು, ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋವನ್ನು ಕೇರಳ ಪೊಲೀಸರು ಕೂಡ ಗಮನಿಸಿದ್ದು, ದಂಡದ ರಸೀದಿಯೊಂದಿಗೆ ಸ್ಟಂಟ್‌ ಮಾಡಿದ ವಿದ್ಯಾರ್ಥಿಗಳ ಮನೆ ಬಾಗಿಲು ತಟ್ಟಿದ್ದಾರೆ.

Kerala police keep eye on intagram 5 youths fined for there bike stunt akb
Author
Bangalore, First Published Jul 1, 2022, 9:57 AM IST

ಕೇರಳ: ವಿವಿಧ ರೀತಿಯ ಸ್ಟಂಟ್ ಮಾಡಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಇವತ್ತಿನ ಯುವ ಸಮೂಹದ ಟ್ರೆಂಡ್ ಆಗಿದ್ದು, ಒಂದು ಲೈಕ್ಸ್, ಕಾಮೆಂಟ್‌ಗಾಗಿ ಕಾಯುತ್ತಾ ಕೂರುತ್ತಾರೆ. ಅಲ್ಲದೇ ಹೆಚ್ಚು ಹೆಚ್ಚು ಲೈಕ್ಸ್ ಕಾಮೆಂಟ್‌ಗಾಗಿ ಭಿನ್ನ ವಿಭಿನ್ನವಾದ ಸ್ಟಂಟ್ ಮಾಡಲು ಹೋಗಿ ತಮ್ಮನ್ನು ತಾವೇ ಅಪಾಯಕ್ಕೆ ದೂಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬದಲಾದ ಜಮಾನದಲ್ಲಿ ಪೊಲೀಸರು ಕೂಡ ಆನ್‌ಲೈನ್‌ನಲ್ಲಿಯೂ ಕಾರ್ಯನಿರ್ವಹಿಸಬೇಕಾಗಿದೆ. ಈಗ ಇನ್ಸ್ಟಾಗ್ರಾಮ್‌ ರೀಲ್ಸ್‌ಗಳ ಮೇಲೂ ಪೊಲೀಸರು ಕಣ್ಣಿಟ್ಟಿದ್ದು, ಅನಾಹುತಕ್ಕೆ ದಾರಿ ಮಾಡುವಂತಹ ವಿಡಿಯೋ ಮಾಡುವವರನ್ನು ಪತ್ತೆ ಮಾಡಿ ದಂಡ ವಿಧಿಸಲು ಮುಂದಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಹೆಲ್ಮೆಟ್ ಇಲ್ಲದೇ ಬೈಕ್ ಸ್ಟಂಟ್ ಮಾಡಿದ್ದಕ್ಕೆ ಟಿಕ್‌ಟಾಕ್ ಸ್ಟಾರ್ ಧನ್‌ವೀರ್ ಎಂಬುವವರಿಗೆ ಪೊಲೀಸರು ಬರೋಬರಿ 17000 ದಂಡ ವಿಧಿಸಿದ್ದರು. ಈಗ ಕೇರಳ ಪೊಲೀಸರ ಸರದಿ

ಒಂದೇ ಬೈಕ್‌ನಲ್ಲಿ ಕೇರಳದ ಐವರು ವಿದ್ಯಾರ್ಥಿಗಳು ಪ್ರಯಾಣಿಸಿದ್ದು, ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋವನ್ನು ಕೇರಳ ಪೊಲೀಸರು ಕೂಡ ಗಮನಿಸಿದ್ದು, ದಂಡದ ರಸೀದಿಯೊಂದಿಗೆ ಸ್ಟಂಟ್‌ ಮಾಡಿದ ವಿದ್ಯಾರ್ಥಿಗಳ ಮನೆ ಬಾಗಿಲು ತಟ್ಟಿದ್ದಾರೆ. ಬೈಕ್ ಚಾಲನೆ ಮಾಡುತ್ತಿದ್ದ ವಿದ್ಯಾರ್ಥಿಗೆ ಎರಡು ಸಾವಿರ ದಂಡ ವಿಧಿಸಿದ್ದು, ಈತನೊಂದಿಗೆ ಬೈಕ್‌ನಲ್ಲಿದ್ದ ಇತರ ನಾಲ್ವರು ವಿದ್ಯಾರ್ಥಿಗಳಿಗೂ ಎರಡು ದಿನಗಳ ಶಿಕ್ಷೆ ನೀಡಲಾಗಿದೆ. 

ಇನ್ಸ್ಟಾಗ್ರಾಂ ಮೇಲೆ ಖಾಕಿ ಕಣ್ಣು: ಟಿಕ್​ಟಾಕ್​​ ಸ್ಟಾರ್‌​ಗೆ ಬಿತ್ತು 17 ಸಾವಿರ ರೂ. ದಂಡ!

ಕೇರಳದ (Kerala) ಇಡುಕ್ಕಿ (Idukki) ರಾಜಮುಡಿ ಮಾರ್ ಸ್ಲೀವಾ ಫ್ಯಾಕಲ್ಟಿಯ (Rajamudi Mar Sleeva Faculty) ಬಿಬಿಎ ಎರಡನೇ ವರ್ಷದ ವಿದ್ಯಾರ್ಥಿಗಳು ಸ್ಟಂಟ್ ಮಾಡಲು ಹೋಗಿ ಪೊಲೀಸರ ಕೈಗೆ ತಗಲಾಕಿಕೊಂಡವರು. ಪೊಲೀಸರು ಈಗ ಈ ವಿದ್ಯಾರ್ಥಿಗಳ ಚಾಲನಾ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತುಗೊಳಿಸಿದ್ದಾರೆ. ಅಲ್ಲದೇ ಎರಡು ಸಾವಿರ ರೂ ದಂಡ ವಿಧಿಸಿದ್ದಾರೆ. ಅಲ್ಲದೇ ಇಡುಕ್ಕಿಯ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಸಮಾಜ ಸೇವೆ ಮಾಡುವಂತೆ ಅವರಿಗೆ ಪೊಲೀಸರು ಸೂಚಿಸಿದ್ದಾರೆ. 

ಹೀಗೆ ಸ್ಟಂಟ್ ಮಾಡಿದವರನ್ನು ಜೋಯಲ್ ವಿ ಜೋಮೋನ್ (Joyal V Jomon) , ಅಲ್ಬಿನ್ ಶಾಜಿ (Albin Shaji) , ಅಖಿಲ್ ಸಾಬು (Akhil Sabu), ಅಗಿಲ್ ಜೋಸೆಫ್ (Agil Joseph) ಮತ್ತು ಅಲ್ಬಿನ್ ಆಂಟೋನಿ (Albin Antony) ಎಂದು ಗುರುತಿಸಲಾಗಿದೆ. ಇವರು ಕಡಿದಾದ ಇಳಿಜಾರಿನ ರಸ್ತೆಯಲ್ಲಿ ಜೀವಕ್ಕೆ ಸಂಚಾಕಾರ ತಂದೊಡ್ಡುವ ರೀತಿಯಲ್ಲಿ ಸ್ಟಂಟ್ ಮಾಡಿದ್ದರು ಎಂದು ಆರ್‌ಟಿಒ ಆರ್ ರಮಣನ್  (R Ramanan) ಹೇಳಿದರು. ಇವರ ವಿಡಿಯೋವನ್ನು ಯಾರೋ ಉಡುಂಬಂಚೋಳ ಜಂಟಿ ಆರ್‌ಟಿಒಗೆ ರವಾನೆ ಮಾಡಿದ್ದರು. ನಂತರ ಅವರು ಈ ಕೃತ್ಯವೆಸಗಿದವರನ್ನು ಪತ್ತೆ ಮಾಡಿದರು ಎಂದು ಅವರು ಹೇಳಿದರು.

200 ಮಿಲಿಯನ್‌ ಇನ್‌ಸ್ಟಾಗ್ರಾಂ ಫ್ಯಾನ್ಸ್‌ ಕ್ಲಬ್ ಸೇರಿ ಹೊಸ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ..!
 

ಸ್ಕೂಟರ್ ಓಡಿಸಿದ ಜೋಯಲ್ ಗೆ ದಂಡ ವಿಧಿಸಿ, ಡ್ರೈವಿಂಗ್ ಲೈಸನ್ಸ್ ಅಮಾನತುಗೊಳಿಸಲಾಗಿದೆ. ಹಾಗೆಯೇ, ಈ ವಿದ್ಯಾರ್ಥಿಗಳು ಇಡುಕ್ಕಿ ವೈದ್ಯಕೀಯ ಶಾಲೆಯಲ್ಲಿ 2 ದಿನಗಳ ಕಾಲ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸಬೇಕಾಗಿದೆ. ನಾನು ವೈದ್ಯಕೀಯ ಶಾಲಾ ಅಧೀಕ್ಷಕರನ್ನು ಸಂಪರ್ಕಿಸಿ, ಯಾವುದೇ ಅರ್ಹ ವಿಭಾಗದಲ್ಲಿ ಯುವಕರ ಸೇವೆಯನ್ನು ಬಳಸಿಕೊಳ್ಳುವಂತೆ ನಿರ್ದೇಶನ ನೀಡಿದ್ದೇನೆ ಎಂದು ಆರ್‌ಟಿಒ ಹೇಳಿದ್ದಾರೆ. ಈ ಆದೇಶವನ್ನು ಹೊರಡಿಸುವುದಕ್ಕಿಂತ ಮುಂಚೆಯೇ, ನಾನು ಇವರ ತಂದೆ ಮತ್ತು ತಾಯಿಯರನ್ನು ಕರೆಸಿ ಈ ಕಾಲೇಜು ವಿದ್ಯಾರ್ಥಿಗಳಿಗೆ ರಾಶ್ ಡ್ರೈವಿಂಗ್‌ನ ಅಪಾಯಗಳ ಬಗ್ಗೆ  ಮಾಹಿತಿ ನೀಡಿದ್ದೇನೆ ಎಂದರು. ಈ ವಿದ್ಯಾರ್ಥಿಗಳು ತಮ್ಮ ತಂದೆ ಮತ್ತು ತಾಯಿಯ ಸಮ್ಮುಖದಲ್ಲಿ ಇಂತಹ ಕೃತ್ಯಗಳನ್ನು ಪುನರಾವರ್ತಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ರಮಣನ್ ಉಲ್ಲೇಖಿಸಿದ್ದಾರೆ. 

Follow Us:
Download App:
  • android
  • ios