ಗೆಳೆಯರಿಲ್ಲ ಮೊಬೈಲೇ ಎಲ್ಲಾ... ನೇಣಿಗೆ ಶರಣಾದ ಪಿಯು ವಿದ್ಯಾರ್ಥಿನಿ

ತಿರುವನಂತಪುರಂ: ಮೊಬೈಲ್‌ ಚಟದಿಂದ ಖಿನ್ನತೆಗೆ ಜಾರಿದ್ದ ಪ್ಲಸ್‌ ಒನ್‌ ವಿದ್ಯಾರ್ಥಿನಿಯೊಬ್ಬಳು ತನ್ನ ಜೀವನವನ್ನೇ ಅಂತ್ಯಗೊಳಿಸಿರುವ ಘಟನೆ ದೇವರ ನಾಡು ಕೇರಳದಲ್ಲಿ ನಡೆದಿದೆ. 

kerala Plus One student ends life over mobile phone addiction akb

ತಿರುವನಂತಪುರಂ: ಮೊಬೈಲ್‌ ಚಟದಿಂದ ಖಿನ್ನತೆಗೆ ಜಾರಿದ್ದ ಪ್ಲಸ್‌ ಒನ್‌ ವಿದ್ಯಾರ್ಥಿನಿಯೊಬ್ಬಳು ತನ್ನ ಜೀವನವನ್ನೇ ಅಂತ್ಯಗೊಳಿಸಿರುವ ಘಟನೆ ದೇವರ ನಾಡು ಕೇರಳದಲ್ಲಿ ನಡೆದಿದೆ. ಕೇರಳದ ಕಲ್ಲಂಬಲಂ (Kallambalam) ಮೂಲದ ಜೀವ ಮೋಹನ್ (Jeeva Mohan) ಮೃತ ಯುವತಿ. ಶನಿವಾರ ಆಕೆ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಕೊಠಡಿಯಿಂದ ಪೊಲೀಸರು ಮೂರು ಪುಟಗಳ ಸೂಸೈಡ್ ನೋಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿರುವಂತೆ, ಅವಳು ತನ್ನ ಮೊಬೈಲ್ ಫೋನ್‌ಗೆ ಹೆಚ್ಚು ವ್ಯಸನಿಯಾಗಿದ್ದು, ಅದರಿಂದ ಹೊರಬರಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಬರೆದುಕೊಂಡಿದ್ದಾಳೆ.

ಮೊಬೈಲ್ ಚಟಕ್ಕೆ ಬಿದ್ದಿದ್ದ ಆಕೆ ಅದರಿಂದ  ಹೊರಬರಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಬರೆದುಕೊಂಡಿದ್ದಾಳೆ. ತಾನು ಮೊಬೈಲ್ ಫೋನ್‌ನ ಗುಲಾಮಳಾಗಿ ಬದಲಾಗಿದ್ದೇನೆ, ಅದರ ಬಳಕೆಯನ್ನು ನಿಯಂತ್ರಿಸಲು ನನಗೆ ಸಾಧ್ಯ ಆಗುತ್ತಿಲ್ಲ ಮತ್ತು ಇದು ನನ್ನ ಶೈಕ್ಷಣಿಕ ಶ್ರೇಣಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ. 

 

2 ಪುಟಗಳ ಸೂಸೈಡ್‌ ನೋಟ್‌ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ, ರಕ್ತದಲ್ಲಿ ಬರೆದಿತ್ತು ಆ ಒಂದು ವಾಕ್ಯ!

ಆದರೆ, ಜೀವಾ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆದಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆಕೆ ಯೂಟ್ಯೂಬ್‌ನಲ್ಲಿ ಆಗಾಗ್ಗೆ ಕೊರಿಯನ್ ಸಂಗೀತ ಬ್ಯಾಂಡ್‌ಗಳ (Korean music bands) ಸಂಗೀತ ಕಚೇರಿಗಳು ಮತ್ತು ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದರು ಎಂಬುದು ಇಂಟರ್‌ನೆಟ್ ಸರ್ಚ್‌ ಹಿಸ್ಟರಿಯಿಂದ ತಿಳಿದು ಬಂದಿದೆ. ಈ ಕುರಿತು ವಿಸ್ತೃತ ತನಿಖೆ ಆರಂಭಿಸಿರುವುದಾಗಿ ಪೊಲೀಸರು  ಹೇಳಿದ್ದಾರೆ.

 

ತುಮಕೂರು ವಿದ್ಯಾರ್ಥಿನಿ ಆತ್ಮಹತ್ಯೆ, ಮದ್ವೆ ಎಂಬುದೇ ಈಕೆಯ ಜೀವಕ್ಕೆ ಬಿರುಗಾಳಿಯಾಯ್ತೆ?

ಜೀವ ಮೋಹನ್ (Jeeva Mohan) ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಎಸ್‌ಎಸ್‌ಎಲ್‌ಸಿಯನ್ನು ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಳು. ಅವಳು ಓದುವಾಗ ತನ್ನ ಕೋಣೆಯನ್ನು ಸದಾ ಲಾಕ್‌ ಮಾಡಿಕೊಂಡು ಇರುತ್ತಿದ್ದಳು. ಜೀವಾ ತನ್ನ ಕೋಣೆಗೆ ಹೋಗಿ ಶನಿವಾರವೂ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಳು. ಅವಳ ಸಹೋದರಿ ಊಟಕ್ಕೆಂದು ಅವಳನ್ನು ಕರೆಯಲು ಹೋಗಿದ್ದು, ಆದರೆ ಅವಳು ಬಾಗಿಲು ತೆರೆಯಲಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಕಪಕ್ಕದವರು ಆಕೆಯ ಮಲಗುವ ಕೋಣೆಯ ಕಿಟಕಿಗಳನ್ನು ಒಡೆದು ನೋಡಿದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಅವರು ತಕ್ಷಣ ಬಾಗಿಲನ್ನು ಒದ್ದು ಜೀವಾಳನ್ನು ಕುಣಿಕೆಯಿಂದ  ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದ್ದರು. ಅಷ್ಟರಲ್ಲಾಗಲೇ, ಅವಳು ಸಾವನ್ನಪ್ಪಿದ್ದಳು ಎಂದು ವೈದ್ಯರು ಘೋಷಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ವಿದ್ಯಾರ್ಥಿನಿಯೋರ್ವಳು ಬೆಂಕಿ ಹಚ್ಚಿಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮದಲ್ಲಿ ಕಳೆದ ತಿಂಗಳು ನಡೆದಿತ್ತು. ತೇಜಾ (19) ಆತ್ಮಹತ್ಯೆ ಮಾಡಿಕೊಂಡು ವಿದ್ಯಾರ್ಥಿನಿ. ಈಕೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಳಗಿನಜಾವ 4.30ರ ಸುಮಾರಿನಲ್ಲಿ ಈ ಘಟನೆ ನಡೆದಿತ್ತು. ತೇಜಾ, ಪಾವಗಡದಲ್ಲಿ ಮೊದಲನೇ ವರ್ಷದ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದಳು. ಇದೇ ಮೇ 24-25 ರಂದು ಮದುವೆ ನಿಶ್ಚಯವಾಗಿತ್ತು‌. ಪೋಷಕರು ಮದುವೆ ಆಮಂತ್ರಣ ಪತ್ರಿಕೆಯನ್ನು ಎಲ್ಲಾ ಕಡೆ ಕೊಟ್ಟಿದ್ದರು‌. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈಕೆಗೆ ಮದುವೆ ಇಷ್ಟವಿರಲಿಲ್ಲವೋ ಅಥವಾ ಇನ್ನಾವ ಕಾರಣದಿಂದ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಎಂಬ ತಿಳಿದಿಲ್ಲ. 

Latest Videos
Follow Us:
Download App:
  • android
  • ios