ಬೆಡ್‌ರೂಮ್‌ನಲ್ಲಿ ಮಕ್ಕಳ ಮೃತದೇಹ, ಬಾತ್‌ರೂಮ್‌ನಲ್ಲಿ ಗನ್‌: ಅಮೆರಿಕದಲ್ಲಿ ಸಾವಿಗೆ ಶರಣಾದ ಭಾರತೀಯ ಕುಟುಂಬ!

Indian family found dead in California home ಕೇರಳ ಮೂಲದ ಭಾರತೀಯ ಕುಟುಂಬ ದೂರದ ಅಮೆರಿಕದಲ್ಲಿ ಸಾವಿಗೆ ಶರಣಾಗಿದೆ. ಕುಟುಂಬದ ಇಬ್ಬರು ಪುಟ್ಟ ಗಂಡು ಮಕ್ಕಳು ಸೇರಿ ನಾಲ್ವರ ಶವ ಪತ್ತೆಯಾಗಿದೆ ಎಂದು ಕ್ಯಾಲಿಫೋರ್ನಿಯಾ ಪೊಲೀಸರು ತಿಳಿಸಿದ್ದಾರೆ.

Kerala Man Anand Sujith Henry family found dead in California home couple had gunshot wounds san


ನವದೆಹಲಿ (ಫೆ.14): ದೂರದ ಅಮೆರಿಕದಲ್ಲಿ ಮತ್ತೊಂದು ಭಾರತೀಯ ಕುಟುಂಬ ಸಾವಿಗೆ ಶರಣಾಗಿದೆ. ಇಬ್ಬರು ಮಕ್ಕಳಿದ್ದ ನಾಲ್ವರು ಸದಸ್ಯರ ಮಲೆಯಾಳಿ ಕುಟುಂಬ ತಮ್ಮ ಮನೆಯಲ್ಲಿಯೇ ಸಾನವನ್ನು ಸ್ವಾಗತಿಸಿದ್ದಾರೆ. ಮೊದಲಿಗೆ ತಮ್ಮ ಮಕ್ಕಳಿಬ್ಬರನ್ನು ಕೊಂದ ತಂದೆ ತಾಯಿ ಬಳಿಕ, ತಾವೂ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಯಾನ್ ಮಾಟಿಯೊದಲ್ಲಿ ವಾಸಿಸುತ್ತಿದ್ದ ಆನಂದ್ ಸುಜಿತ್ ಹೆನ್ರಿ (42), ಅವರ ಪತ್ನಿ ಆಲಿಸ್ ಪ್ರಿಯಾಂಕಾ ಬೆಂಜಿಗರ್ (40) ಮತ್ತು ಅವರ ಅವಳಿ ಮಕ್ಕಳಾದ ನೋಹ್ ಮತ್ತು ನೀಥಾನ್ (4) ಸಾವಿನ ಕುರಿತು ಸ್ಯಾನ್ ಮಾಟಿಯೊ ಪೊಲೀಸರು ವಿವರವಾದ ತನಿಖೆ ಆರಂಭ ಮಾಡಿದ್ದಾರೆ. ಆನಂದ್ ಮತ್ತು ಅವರ ಪತ್ನಿ ಆಲಿಸ್ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಈ ಹಿಂದೆ ಮಾಹಿತಿ ಪಡೆದುಕೊಂಡಿದ್ದರು. ದೇಶದಲ್ಲಿರುವ ಅವರ ಸಂಬಂಧಿಕರಿಗೂ ಈ ಬಗ್ಗೆ ದೃಢೀಕರಣ ಸಿಕ್ಕಿದೆ. ದಂಪತಿಯ ಶವಗಳು ಮನೆಯ ಸ್ನಾನಗೃಹದಲ್ಲಿ ಪತ್ತೆಯಾಗಿವೆ. ಇಬ್ಬರ ಮೈಮೇಲೆ ಗುಂಡಿನ ಗಾಯಗಳಿದ್ದವು. ಬಾಥ್‌ರೂಮ್‌ನಿಂದ ಲೋಡ್ ಮಾಡಲಾದ 9 ಎಂಎಂ ಪಿಸ್ತೂಲ್‌ಅನ್ನು ಕೂಡ  ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅದೇ ಸಮಯದಲ್ಲಿ, ಮಕ್ಕಳ ದೇಹದ ಮೇಲೆ ಯಾವುದೇ ಗುಂಡಿನ ಗುರುತುಗಳಿಲ್ಲ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ವಿಷವುಣಿಸಿ ಅಥವಾ ಉಸಿರುಗಟ್ಟಿಸಿ ಮಕ್ಕಳನ್ನು ಕೊಂದಿರಬಹುದು ಎಂದು ಪ್ರಾಥಮಿಕ ತೀರ್ಮಾನವನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ ಎಂದು ಅಮೆರಿಕದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಆನಂದ್ ತನ್ನ ಹೆಂಡತಿಗೆ ಗುಂಡು ಹಾರಿಸಿದ ನಂತರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳೀಯ ಕಾಲಮಾನ ಸೋಮವಾರ ಬೆಳಗ್ಗೆ 9:13ಕ್ಕೆ ಸ್ಯಾನ್ ಮಾಟಿಯೊ ಅಲಮೇಡಾ ಡೆ ಲಾಸ್ ಪಾಲ್ಗಾಸ್‌ನಲ್ಲಿರುವ ಮನೆಯೊಳಗೆ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಿಗ್ಗೆ ಮನೆಗೆ ಬಂದಾಗ ಯಾರಿಂದಲೂ ಪ್ರತಿಕ್ರಿಯೆ ಬರಲಿಲ್ಲ. ತಪಾಸಣೆ ವೇಳೆ ಯಾರೊಬ್ಬರೂ ಬಲವಂತವಾಗಿ ಮನೆಗೆ ನುಗ್ಗಿರುವ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಮನೆಯೊಳಗೆ ನಡೆಸಿದ ತಪಾಸಣೆಯಲ್ಲಿ ನಾಲ್ವರ ಮೃತ ದೇಹಗಳು ಪತ್ತೆಯಾಗಿವೆ. ಕ್ರಿಮಿನಲ್ ಇನ್ವೆಸ್ಟಿಗೇಶನ್ ಬ್ಯೂರೋ (ಸಿಐಬಿ) ಘಟನೆಯ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಇದೊಂದು ಪ್ರತ್ಯೇಕ ಘಟನೆಯಾಗಿದ್ದು, ಸಾರ್ವಜನಿಕರಿಗೆ ಯಾವುದೇ ಅಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಿಂದ ಯಾವುದೇ ನೋಟ್‌ಗಳು ಅಥವಾ ಪತ್ರಗಳನ್ನು ಪಡೆದಿಲ್ಲ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಮನೆಯ ಬೆಡ್ ರೂಂನಲ್ಲಿ ಮಕ್ಕಳ ಶವ ಪತ್ತೆಯಾಗಿದೆ. ಅವರ ಸಾವಿಗೆ ಕಾರಣ ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಆನಂದ್‌ ಹಾಗೂ ಆಲಿಸ್‌ 2016 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಮತ್ತು ನಂತರ ಅದನ್ನು ಮುಂದುವರಿಸಲಿಲ್ಲ ಎಂದು ಅಮೆರಿಕದ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಆದರೆ, ಈ ಬಗ್ಗೆ ಸಂಬಂಧಿಕರಿಗೆ ಯಾವುದೇ ಮಾಹಿತಿ ಗೊತ್ತಿರಲಿಲ್ಲ ಎಂದು ತಿಳಿಸಲಾಗಿದೆ.

ಪುಷ್ಪಾ 'ಐಟಂ ಸಾಂಗ್' ಮಾಡಬೇಡ ಅಂದ್ರೂ ಮಾಡಿದ್ರಂತೆ ಸಮಂತಾ; ನೋಡಿ, ಅಸಲಿಯತ್ತಿನ ಗಮ್ಮತ್ತು!

ಕಳೆದ ನಾಲ್ಕು ವರ್ಷಗಳಿಂದ ಹೆಚ್ಚು ಕಾಲ ದಂಪತಿಗಳು ಸ್ಯಾಟ್‌ ಮಾಟಿಯೋದಲ್ಲಿರುವ ಮನೆಯಲ್ಲಿ ವಾಸ ಮಾಡುತ್ತಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ತಮ್ಮ ಕುಟುಂಬದೊಂದಿಗೆ ಅವರು ಸಂತೋಷವಾಗಿದ್ದು, ಒಟ್ಟಗೆ ಅವೆರೆಲ್ಲ ವಾಕಿಂಗ್‌ಗೆ ಹೋಗುವಾಗ ನೋಡುತ್ತಿದ್ದೆವು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಆಲಿಸ್ ಗರ್ಭಿಣಿಯಾಗಿದ್ದಾಗ ದಂಪತಿಗಳು ವಾಕಿಂಗ್ ಹೋಗುತ್ತಿದ್ದರು. ಮಕ್ಕಳನ್ನು ಪಡೆದ ನಂತರ ದಂಪತಿ ಮಕ್ಕಳೊಂದಿಗೆ ಹೊರಗೆ ಹೋಗುತ್ತಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ.

ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಸರಣಿ ಹತ್ಯೆ: ಒಂದೂವರೆ ತಿಂಗಳಲ್ಲಿ ಐವರು ಬಲಿ

Latest Videos
Follow Us:
Download App:
  • android
  • ios