Asianet Suvarna News Asianet Suvarna News

ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಸರಣಿ ಹತ್ಯೆ: ಒಂದೂವರೆ ತಿಂಗಳಲ್ಲಿ ಐವರು ಬಲಿ

ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಸರಣಿ ಹತ್ಯೆ ಮುಂದುವರೆದಿದ್ದು ಪಿಎಚ್‌ಡಿ ವ್ಯಾಸಾಂಗ ಮಾಡುತ್ತಿದ್ದ ಸಮೀರ್ ಕಾಮತ್ (23) ಎಂಬ ವಿದ್ಯಾರ್ಥಿ ಅಮೆರಿಕದ ವಾರನ್ ಕೌಂಟಿಯಲ್ಲಿ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಇದು ಈ ವರ್ಷ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ನಿಗೂಢವಾಗಿ ಸಾವನ್ನಪ್ಪಿದ 5ನೇ ಪ್ರಕರಣವಾಗಿದೆ. 

Serial killing of Indian origin students in America Five dead in mysterious circumstance in one and a half months akb
Author
First Published Feb 8, 2024, 8:21 AM IST

ನ್ಯೂಯಾರ್ಕ್: ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಸರಣಿ ಹತ್ಯೆ ಮುಂದುವರೆದಿದ್ದು ಪಿಎಚ್‌ಡಿ ವ್ಯಾಸಾಂಗ ಮಾಡುತ್ತಿದ್ದ ಸಮೀರ್ ಕಾಮತ್ (23) ಎಂಬ ವಿದ್ಯಾರ್ಥಿ ಅಮೆರಿಕದ ವಾರನ್ ಕೌಂಟಿಯಲ್ಲಿ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಇದು ಈ ವರ್ಷ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ನಿಗೂಢವಾಗಿ ಸಾವನ್ನಪ್ಪಿದ 5ನೇ ಪ್ರಕರಣವಾಗಿದೆ. 

ಮತ್ತೊಂದೆಡೆ ಚಿಕಾಗೋದಲ್ಲಿ ಭಾರತೀಯ ಮೂಲದ ಐಟಿ ವಿದ್ಯಾರ್ಥಿ ಸೈಯದ್ ಮಜಾಹಿರ್‌ ಅಲಿ ಮೇಲೆ ಅಪರಿಚಿತರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ರಕ್ತ ಸಿಕ್ತವಾಗಿದ್ದ ಸೈಯದ್ ತಮ್ಮನ್ನು ಅಪರಿಚಿತ ವ್ಯಕ್ತಿಗಳು ಬೆನ್ನಟ್ಟಿ ಏಕಾಏಕಿ ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಯಾತನೆ ಪಟ್ಟಿರುವ ತಮ್ಮ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೈದರಾಬಾದ್ ಮೂಲದ ಸೈಯದ್ ಮುಜಾಹಿರ್ ಅಲಿ ವಿವಾಹಿತರಾಗಿದ್ದು, ಮಕ್ಕಳಿದ್ದಾರೆ. ಹಲ್ಲೆಗೊಳಗಾದ ತನ್ನ ಪತಿಯನ್ನು ತಲುಪಲು ನನಗೆ ನೆರವಾಗಬೇಕು ಎಂದು ಅವವರ ಪತ್ನಿ ವಿದೇಶಾಂಗ ಸಚಿವಾಲಯಕ್ಕೆ ಈಗಾಗಲೇ ಮನವಿ ಮಾಡಿದ್ದಾರೆ.

ಅಮೆರಿಕದಲ್ಲಿ ಮತ್ತೋರ್ವ ಭಾರತೀಯ ವಿದ್ಯಾರ್ಥಿ ನಿಗೂಢ ಸಾವು, ತಿಂಗಳಲ್ಲಿ ನಡೆದ 4ನೇ ಘಟನೆ

ಈ ಸರಣಿ ಘಟನೆಗಳ ಹಿನ್ನೆಲೆಯಲ್ಲಿ  ಭಾರತೀಯ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಅಮೆರಿಕದಲ್ಲಿ ಹತ್ಯೆ ಹಾಗೂ ಹಲ್ಲೆ ನಡೆಸಲಾಗುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2024ರ  ಜನವರಿಯಿಂದ ಈವರೆಗೆ ಭಾರತೀಯ ಮೂಲದ 5 ವಿದ್ಯಾರ್ಥಿಗಳು ಅಮೆರಿಕದಲ್ಲಿ ನಿಗೂಢವಾಗಿ ಹತ್ಯೆಯಾಗಿದ್ದಾರೆ. ಓಹಿಯೋದಲ್ಲಿ 19 ವರ್ಷದ ಶ್ರೇಯಸ್ ರೆಡ್ಡಿ, ಜ.16ಕ್ಕೆವಿವೇಕ್ ಸೈನಿ (25), ಅಕುಲ್ ಬಿ ಧವನ್ (18) ಮತ್ತು ಜ.28ರಂದು ನೀಲ್ ಆಚಾರ್ಯ ಎಂಬ ವಿದ್ಯಾರ್ಥಿಗಳು ಹತ್ಯೆಯಾಗಿದ್ದಾರೆ.

4 ವರ್ಷದಿಂದ ಅಮೆರಿಕದಲ್ಲಿ ನಾಪತ್ತೆಯಾದ ಭಾರತೀಯ ವಿದ್ಯಾರ್ಥಿನಿ: ಹುಡುಕಿಕೊಟ್ಟವ್ರಿಗೆ ಭಾರಿ ಬಹುಮಾನ ಘೋಷಿಸಿದ ಎಫ್‌ಬಿಐ

Follow Us:
Download App:
  • android
  • ios