Asianet Suvarna News Asianet Suvarna News

'ಎಂಥ ಕಾಯಿಲೆಯನ್ನಾದರೂ ಗುಣಪಡಿಸುತ್ತೇನೆ' ಇಡೀ ರಾತ್ರಿ ರೇಪ್ ಮಾಡ್ತಿದ್ದ ಬಾಬಾ!

ಪೂಜೆ ಹೆಸರಿನಲ್ಲಿ ಇಡೀ ರಾತ್ರಿ ಮಹಿಳೆ ಮೇಲೆ ಅತ್ಯಾಚಾರ/ ಎರಡು ವರ್ಷದ ನಂತರ ಸಿಕ್ಕಿಬಿದ್ದ  ನಕಲಿ ಬಾಬಾ/ ಕರ್ನಾಟಕ ಮೂಲದ ಬಾಬಾನ ಹೈದರಾಬಾದ್ ಜಗತ್ತು

 

Karnataka Fake godman held sexual assault case Hyderabad
Author
Bengaluru, First Published Aug 25, 2020, 4:27 PM IST

ಹೈದರಾಬಾದ್ (ಆ. 25)  ನಕಲಿ ಬಾಬಾಗಳ ಹಾವಳಿ  ದೇಶದ ಮೂಲೆ ಮೂಲೆಯಿಂದ ವರದಿಯಾಗುತ್ತಲೇ ಇರುತ್ತವೆ.  ಚಿಕಿತ್ಸೆ ಹೆಸರಿನಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನೆಡೆಸುವ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಅಮಾಯಕರು ವಂಚಕರ ಬಲೆಗೆ ಬೀಳುತ್ತಾರೆ.

ಎಂಥ ಕಾಯಿಲೆಯನ್ನಾದರೂ ಗುಣಪಡಿಸುತ್ತೇನೆ ಎಂದು ಹೇಳಿಕೊಂಡ ನಕಲಿ ಬಾಬಾ ಇಡೀ ರಾತ್ರಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು ಸೈಬರಾಬಾದ್ ಪೊಲೀಸರು  ಆತನನ್ನು ಬಂಧಿಸಿದ್ದಾರೆ.

ಅರ್ಷದ್ ಜಲಾವುದ್ದೀನ್ (45) ನಕಲಿ ಬಾಬಾ ಪೊಲೀಸರ ಬಲೆಗೆ ಬಿದ್ದಿದ್ದಾನೆ.  ಮೂಲತಃ ಕರ್ನಾಟಕ ಮೂಲದ ಅರ್ಷದ್  ಪ್ರಾರ್ಥನೆ ಮತ್ತು ಮಾಟದಿಂದ ಯಾವುದೇ ಅನಾರೋಗ್ಯವನ್ನು ಗುಣಪಡಿಸುತ್ತೇನೆ ಎಂದು ಜನರನ್ನು ನಂಬಿಸುವ ಕೆಲಸ ಮಾಡುತ್ತಿದ್ದ.

ರೇಪ್ ಮಾಡಿ ಸೆಕ್ಸ್ ಸಿಡಿ ಲೈಬ್ರರಿ ಸಿದ್ಧ ಮಾಡಿದ್ದ ದೇವಮಾನವ

2018 ರಲ್ಲಿ ಮಹಿಳೆಯೊಬ್ಬಳೂ ತನ್ನ ಮೇಲೆ ನಕಲಿ ಬಾಬಾ ಅತ್ಯಾಚಾರವೆಸಗಿದ್ದಾನೆ ಎಂದು ದೂರು ಸಲ್ಲಿಸಿದ್ದಳು, ನಾಪತ್ತೆಯಾಗಿದ್ದವ ಈಗ ಸಿಕ್ಕಿಬಿದ್ದಿದ್ದಾನೆ.

ಮಗುವಿಗೆ ಜನ್ಮ ನೀಡಿದ ನಂತರ ಮಹಿಳೆ ಅನಾರೋಗ್ಯಕ್ಕೆ ಒಳಗಾಗಿದ್ದಳು. ಎಷ್ಟೇ ಚಿಕಿತ್ಸೆ ಪಡೆದರೂ ಅವಳು ಗುಣಮುಖವಾಗಲಿಲ್ಲವಾದ್ದರಿಂದ, ಆಕೆ ಮತ್ತು ಆಕೆಯ ಪತಿ ಅರ್ಷದ್ ನನ್ನು ಸಂಪರ್ಕಿಸಿ ಗುಣಮುಖ ಮಾಡಬೇಕು ಎಂದು ಕೇಳಿಕೊಂಡಿದ್ದರು.

ಇದೇ ಅವಕಾಶ  ಬಳಸಿಕೊಂಡ ನಕಲಿ ಬಾಬಾ ಪೂಜೆಯ ಹೆಸರಿನಲ್ಲಿ ಮಹಿಳೆಯ ಮನೆಗೆ ಮಧ್ಯರಾತ್ರಿ ತೆರಳಿ ಕೋಣೆಗೆ ಕರೆದೊಯ್ದು ಮಹಿಳೆಯ ಪ್ರಜ್ಞೆ ತಪ್ಪಿಸಿದ್ದಾನೆ.  ಅತ್ಯಾಚಾರ ಎಸಗಿ ಏನೂ ಗೊತ್ತಿಲ್ಲದಂತೆ ತೆರಳಿದ್ದಾನೆ. ಮಹಿಳೆಯ ಅನುಭವಕ್ಕೆ ವಿಚಾರ ಬಂದ ನಂತರ ಆಕೆ ದೂರು ದಾಖಲಿಸಿದ್ದರು.

ಅಲ್ಲಿಂದ ತಲೆ ತಪ್ಪಿಸಿಕೊಂಡಿದ್ದ ಬಾಬಾ ಹೆಸರು ಬದಲಾಯಿಸುತ್ತ ಹಲವು ಊರುಗಳನ್ನು ಸುತ್ತಾಡಿದ್ದಾನೆ.  ಬಂಧಿಸಲು ತೆರಳಿದ್ದಾಗ ಎರಡು ಸಾರಿ ತಪ್ಪಿಸಿಕೊಂಡಿದ್ದ.  ಈಗ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು  ತಿಳಿಸಿದ್ದಾರೆ. 

Follow Us:
Download App:
  • android
  • ios