Asianet Suvarna News Asianet Suvarna News
breaking news image

ಮಹಾರಾಷ್ಟ್ರದಿಂದ ಹೈದ್ರಬಾದ್‌ಗೆ ಅಕ್ರಮ ಮಾಂಸ ಸಾಗಾಟ; ವಾಹನ ಹಿಡಿದು ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು

ಅಕ್ರಮವಾಗಿ ಮಾಂಸ ಸಾಗಾಟ ಮಾಡುವ ವೇಳೆ ಹಿಂದೂ ಕಾರ್ಯಕರ್ತರು ವಾಹನ ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಬಳಿ ನಡೆದಿದೆ.

Illegal meat transport 3 people including  driver were arrested at hunsagi yadgir district rav
Author
First Published May 5, 2024, 8:40 PM IST

ಯಾದಗಿರಿ (ಮೇ.5) ಅಕ್ರಮವಾಗಿ ಮಾಂಸ ಸಾಗಾಟ ಮಾಡುವ ವೇಳೆ ಹಿಂದೂ ಕಾರ್ಯಕರ್ತರು ವಾಹನ ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಬಳಿ ನಡೆದಿದೆ.

ಮಹಾರಾಷ್ಟ್ರದಿಂದ ತಾಳಿಕೋಟೆ ಮಾರ್ಗವಾಗಿ ಹೈದರಾಬಾದ್‌ಗೆ ಹೋಗುತ್ತಿದ್ದ ವಾಹನ. ಮಾಂಸ ಸಾಗಾಟದ ಬಗ್ಗೆ ಅನುಮಾನ ವ್ಯಕ್ತಪಡಿಸಿ ವಾಹನವನ್ನು ಹುಣಸಗಿ ಬಳಿ ತಡೆದು ನಿಲ್ಲಿಸಿದ ಹಿಂದೂ ಕಾರ್ಯಕರ್ತರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ವಾಹನ ಪರಿಶೀಲಿಸಿದಾಗ ಮಾಂಸ ಸಾಗಾಟ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆ ಮಾಂಸ ಸಮೇತ ವಾಹನವನ್ನು ವಶಕ್ಕೆ ಪಡೆದ ಪೊಲೀಸರು. ಆದರೆ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಮಾಂಸ ಯಾವ ಪ್ರಾಣಿಯದ್ದು ಎಂಬುದು ಖಚಿತವಾಗಿಲ್ಲ. ಈ ಬಗ್ಗೆ ಪಶು ಇಲಾಖೆ ವೈದ್ಯರು ಪರಿಶೀಲನೆಗೆ ಕಲಬುರಗಿಗೆ ಕಳಿಸಿದ್ದಾರೆ.

ಅಕ್ರಮ ಗೋ ಸಾಗಾಟ: ಲಾರಿ ಚಾಲಕನಿಗೆ ಹಿಂದೂ ಕಾರ್ಯಕರ್ತರಿಂದ ಹಿಗ್ಗಾಮುಗ್ಗಾ ಥಳಿತ, ಲಾರಿ ಗಾಜು ಪುಡಿ ಪುಡಿ!

 ರಾಮಸೇನಾ ಜಿಲ್ಲಾಧ್ಯಕ್ಷ ಶರಣಕುಮಾರ ನಾಯಕ ದೂರು ನೀಡಿದ ಹಿನ್ನೆಲೆ ಅಕ್ರಮ ಮಾಂಸ ಸಾಗಾಟ ಮಾಡುತ್ತಿದ್ದ ವಾಹನ ಚಾಲಕ ಶಿವಾನಂದ ದೊಂಡಿರಾಮ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಸಂಬಂಧ ಚಾಲಕ ಶಿವಾನಂದ ಅಕ್ಷಯ್ ಜಾವೀರ್, ಲಖನ್ ಎಂಬುವವರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

Latest Videos
Follow Us:
Download App:
  • android
  • ios