ಭೋಪಾಲ್ (ಆ. 14) ಮೂವರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಮಧ್ಯಪ್ರದೇಶದ ಸ್ವಯಂಘೋಷಿತ ದೇವಮಾನವನನ್ನು ಬಂಧಿಸಲಾಗಿದೆ. ಮಧ್ಯಪ್ರದೇಶದ ನರಸಿಂಗ್‍ಪುರ ಜಿಲ್ಲೆಯಲ್ಲಿ ಘಟನೆ ನಡೆದಿದೆ.

ಆರೋಪಿಯನ್ನು ಧರ್ಮೇಂದ್ರ ದಾಸ್ ಅಲಿಯಾಸ್ ಧರ್ಮೇಂದ್ರ ದಾಸ್ (35) ಎಂದು ಗುರುತಿಸಲಾಗಿದೆ. ಈತನನ್ನು ಈಗಾಗಲೇ ಬೇರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಬಂಧಿಸಿದ ನಂತರ ಮೂವರು ಮಹಿಳೆಯರು ಪೊಲೀಸ್ ಠಾಣೆಗೆ ಬಂದು ದುಬೆ ವಿರುದ್ಧ ದೂರು ದಾಖಲಿಸಿದ್ದಾರೆ.

ಮಾಂತ್ರಿಕ ಶಕ್ತಿಗಳ ಮೂಲಕ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತೇನೆ ಎಂದು ನಂಬಿಸಿ ರೇಪ್ ಮಾಡಿದ್ದಾನೆ. ಅಪ್ರಾಪ್ತ ಸಹೋದರಿಯರಿಗೂ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆಯರು ಆರೋಪಿಸಿದ್ದು ನಾಲ್ಕು ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ.

ಅರೆಬಿಕ್ ಕಲಿಸಲು ಬಂದ ಶಿಕ್ಷಕ ಮಗುವಿನ ಮೇಲೆ ಎಗರಿದ

ಆರೋಪಿ ದಾಸ್ ಮದುವೆಯಾಗಿ ಸಂಸಾರಿಯಾದರೂ ಸನ್ಯಾಸಿ.  ಮಗು ಸಹ ಇದೆ. ಈತ ತನ್ನ ಮನೆಯ ಆವರಣದಲ್ಲಿ ಒಂದು ಸಣ್ಣ ಆಶ್ರಮವನ್ನು ನಿರ್ಮಿಸಿಕೊಂಡಿದ್ದು, ಸ್ವಯಂ ದೇವಮಾನವ ಎಂದು ಘೋಷಿಸಿಕೊಂಡು ಜನರನ್ನು ಮರುಳು ಮಾಡುತ್ತಿದ್ದ. ಕಳೆದ ವಾರ ಬಂದ ದೂರಿನ ಆಧಾರಲ್ಲಿ ಆತನ ಬಂಧನ ಮಾಡಿದಾಗ ಒಂದೊಂದೆ ಮಾಹಿತಿ ಹೊರಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದುಬೆ ಆಶ್ರಮದಲ್ಲಿ ಎರಡು ಕಿಲೋಗ್ರಾಂಗಳಷ್ಟು ಗಾಂಜಾ ಪತ್ತೆಯಾಗಿದೆ. ಅಲ್ಲದೇ ಅಶ್ಲೀಲ ಸಿಡಿಗಳು, ಫೋಟೋಗಳು ಪತ್ತೆಯಾಗಿದ್ದು, ಎಲ್ಲವನ್ನು ವಶಪಡಿಸಿಕೊಳ್ಳಲಾಗಿದೆ. ಮೊದಲು ಆರೋಪಿಯನ್ನು ಬಂಧಿಸಿದ ಮಾಹಿತಿ ಹರಿದಾಡಿದ ನಂತರ ಮೂವರು ಮಹಿಳೆಯರು ಬಂದು ಅತ್ಯಾಚಾರದ ದೂರು  ನೀಡಿದ್ದಾರೆ.

ಆಶ್ರಮದಿಂದ ವಶಪಡಿಸಿಕೊಂಡ ಸಿಡಿಗಳಲ್ಲಿ ಮಹಿಳೆಯೊಂದಿಗೆ ಸೆಕ್ಸ್ ಮಾಡಿದ್ದ ವಿಡಿಯೋಗಳು ಪತ್ತೆಯಾಗಿವೆ. ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಿ ಅನೇಕ ತಿಂಗಳುಗಳಿಂದ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಈತನಿಂದ ದೌರ್ಜನ್ಯಕ್ಕೆ ಒಳಗಾದ ಎಲ್ಲರಿಂದಲೂ ದೂರು ಪಡೆದುಕೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.