Asianet Suvarna News Asianet Suvarna News

ನಟಿಯ ರೇಪ್‌ ಮಾಡಿದ್ರಾ ಜೆಎಸ್‌ಡಬ್ಲ್ಯು ಗ್ರೂಪ್‌ ಸಿಎಂಡಿ ಸಜ್ಜನ್‌ ಜಿಂದಾಲ್‌, ಮುಂಬೈನಲ್ಲಿ ಎಫ್‌ಐಆರ್‌

ಜಿಂದಾಲ್‌ ಸೌತ್‌-ವೆಸ್ಟ್‌ ಫೌಂಡೇಷನ್‌ ಪ್ರಖ್ಯಾತವಾಗಿ ಜೆಎಸ್‌ಡಬ್ಲ್ಯು ಎಂದೇ ಗುರುತಿಸಿಕೊಂಡಿರುವ ಕಂಪನಿಯ ಸಿಎಂಡಿ ಸಜ್ಜನ್‌ ಜಿಂದಾಲ್‌ ವಿರುದ್ಧ ರೇಪ್‌ ಕೇಸ್‌ ದಾಖಲಾಗಿದೆ. 2022ರ ಜನವರಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈದ್ಯೆಯೊಬ್ಬರು ಮುಂಬೈನಲ್ಲಿ ಎಫ್‌ಐಆರ್‌ ದಾಖಲು ಮಾಡಿದ್ದಾರೆ.
 

JSW Group Chairman Sajjan Jindal accused of rape actress lodged FIR in Mumbai san
Author
First Published Dec 17, 2023, 4:42 PM IST

ಮುಂಬೈ (ಡಿ.17): ದೇಶದ ಪ್ರಸಿದ್ಧ ಕಂಪನಿಗಳಲ್ಲಿ ಒಂದಾದ ಜೆಎಸ್‌ಡಬ್ಲ್ಯು ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (MD) ಸಜ್ಜನ್ ಜಿಂದಾಲ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ. ಮಹಿಳೆ ವೃತ್ತಿಯಲ್ಲಿ ವೈದ್ಯೆ. ಮುಂಬೈ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯಲ್ಲಿ ಜಿಂದಾಲ್ ವಿರುದ್ಧ ಐಪಿಸಿ ಸೆಕ್ಷನ್ 376, 354 ಮತ್ತು 503 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕೆಲವು ಮೂಲಗಳು ಪ್ರಕಾರ ಈಕೆ ನಟಿಯೂ ಕೂಡ ಆಗಿದ್ದಾರೆ ಎನ್ನುವ ವರದಿಗಳಿವೆ. ಈ ಪ್ರಕರಣವು 2022ರ ಜನವರಿ 24ರಂದು ನಡೆದಿದ್ದಾರೆ. ಈ ಬಗ್ಗೆ ಮಹಿಳೆ ಫೆಬ್ರವರಿ 2022 ರಲ್ಲಿ ಪೊಲೀಸರಿಗೆ ದೂರು ನೀಡಿದ್ದರು, ಆದರೆ ಪೊಲೀಸರು ಆಗ ಪ್ರಕರಣವನ್ನು ದಾಖಲಿಸಿರಲಿಲ್ಲ. ಈ ಕುರಿತಾಗಿ ಡಿಸೆಂಬರ್‌ 5 ರಂದು ಮಹಿಳೆ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿನೆ ಮಾಡಿದ್ದರು. ನಂತರ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು 13 ಡಿಸೆಂಬರ್ 23 ರಂದು ಎಫ್ಐಆರ್ ದಾಖಲು ಮಾಡಲಾಗಿದೆ.

ದೂರುದಾರರ ಪ್ರಕಾರ, ಅವರು ಮೊದಲು ಜಿಂದಾಲ್ ಅವರನ್ನು 2021ರ ಅಕ್ಟೋಬರ್ 8 ರಂದು ದುಬೈನಲ್ಲಿ ಭೇಟಿಯಾಗಿದ್ದರು,, ಇಬ್ಬರು ಕ್ರೀಡಾಂಗಣದ ವಿಐಪಿ ಬಾಕ್ಸ್‌ನಲ್ಲಿ ಐಪಿಎಲ್ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಅದರ ನಂತರ, ಅವರು ಜೈಪುರದಲ್ಲಿ ಸಂಸದ ಪ್ರಫುಲ್ ಪಟೇಲ್ ಅವರ ಪುತ್ರನ ವಿವಾಹದಲ್ಲಿ ಭೇಟಿಯಾದರು. ಮುಂಬೈನಲ್ಲಿ ಅವರ ಭೇಟಿಯ ನಂತರ ಜಿಂದಾಲ್ ವೈಯಕ್ತಿಕ ವಿಚಾರವನ್ನು ಹಂಚಿಕೊಳ್ಳುವ ಮೂಲಕ ಇನ್ನಷ್ಟು ಹತ್ತಿರವಾಗಲು ಪ್ರಾರಂಭಿಸಿದರು ಮತ್ತುಈ ಸಮಯದಲ್ಲಿ ಬಲವಂತವಾಗಿ ಒಲಿಸಿಕೊಳ್ಳಲು ಪ್ರಯತ್ನಿಸಿದರು ಎಂದು ಮಹಿಳೆ ದೂರಿದ್ದಾರೆ. ಇದರ ನಂತರ, ಇಬ್ಬರೂ ಅಕ್ಟೋಬರ್ 2021 ರಿಂದ ಜನವರಿ 2022 ರವರೆಗೆ ಹಲವಾರು ಬಾರಿ ಭೇಟಿಯಾಗಿದ್ದೆವು ಎಂದು ಹೇಳಿದ್ದಾರೆ.

ಜನವರಿ 24 ರಂದು ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿರುವ ಜಿಂದಾಲ್‌ನ ಪೆಂಟ್‌ಹೌಸ್‌ನಲ್ಲಿರುವ ಕಛೇರಿಗೆ ನಾನು ಹೋಗಿದ್ದೆ. ಈ ವೇಳೆ ಅವರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.   ಎಫ್‌ಐಆರ್‌ನ ಪ್ರಕಾರ, ಮಹಿಳೆಯು 2022ರ ಫೆಬ್ರವರಿ 16 ರಂಎಫ್‌ಐಆರ್ ದಾಖಲಿಸುವಲ್ಲಿ ವಿಳಂಬ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.
ಎಫ್‌ಐಆರ್‌ ವಿಳಂಬ ನಿರಾಕರಿಸಿದ ಮುಂಬೈ ಪೊಲೀಸ್: ಈ ನಡುವೆ ಕೇಸ್‌ನಲ್ಲಿ ಎಫ್‌ಐಆರ್‌ ದಾಖಲು ಮಾಡಲು ವಿಳಂಬ ಮಾಡಿದ್ದನ್ನು ಮುಂಬೈ ಪೊಲೀಸರು ನಿರಾಕರಿಸಿದ್ದಾರೆ. ಅದಲ್ಲದೆ, ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ದೂರುದಾರರು ತಿಳಿಸಿದ್ದಾರೆ.

ವಾರಕ್ಕೆ 70 ಗಂಟೆ ಕೆಲಸಕ್ಕೆ ಬೆಂಬಲ; ಪ್ರಧಾನಿ ಕೂಡ ದಿನಕ್ಕೆ 16 ಗಂಟೆ ಕೆಲಸ ಮಾಡ್ತಾರೆ ಎಂದ ಸಜ್ಜನ್‌ ಜಿಂದಾಲ್‌!

1982ರಲ್ಲಿ ಉಕ್ಕಿನ ಕಾರ್ಖಾನೆಯೊಂದಿಗೆ ಸಜ್ಜನ್‌ ಜಿಂದಾಲ್‌ ಅವರ ವೃತ್ತಿಜೀವನ ಪ್ರಾರಂಭವಾಗಿತ್ತು. ಕಂಪನಿಯ ವೆಬ್‌ಸೈಟ್ ಪ್ರಕಾರ, ಸಜ್ಜನ್ ಜಿಂದಾಲ್ ಅವರು 1982 ರಲ್ಲಿ ಉಕ್ಕಿನ ಕಾರ್ಖಾನೆಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಪ್ರಸ್ತುತ ಈ ಕಂಪನಿಯು ಭಾರತದ ಅತಿದೊಡ್ಡ ಉಕ್ಕು ಕಂಪನಿಯಾಗಿದೆ. ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್‌ನ ಪ್ರಸ್ತುತ ಮಾರುಕಟ್ಟೆ ಮೌಲ್ಯ 2.11 ಲಕ್ಷ ಕೋಟಿ ರೂಪಾಯಿ ಆಗಿದೆ.

ಬೆಂಗಳೂರು: ಖಾಸಗಿ ಕಂಪನಿ ಟೆಕ್ಕಿ ಮೇಲೆ ನಡೆದಿದ್ಯಾ ಗ್ಯಾಂಗ್ ರೇಪ್?

Follow Us:
Download App:
  • android
  • ios