Asianet Suvarna News Asianet Suvarna News

ಬೆಂಗಳೂರು: ಖಾಸಗಿ ಕಂಪನಿ ಟೆಕ್ಕಿ ಮೇಲೆ ನಡೆದಿದ್ಯಾ ಗ್ಯಾಂಗ್ ರೇಪ್?

ಕೋರಮಂಗಲ ಠಾಣೆಗೆ ಯುವತಿ ದೂರು ನೀಡಿದ್ದು ನಾನು ಇಲ್ಲಿ ಹೇಗೆ ಬಂದೆ ಅನ್ನೋದ ನನಗೆ ಗೊತ್ತಿಲ್ಲ . ಪ್ರಜ್ಞಾಹೀನಳಾಗಿದ್ದಾಗ ನನ್ನ ಮೇಲೆ ಅತ್ಯಾಚಾರ ಆಗಿರೋ‌ ಶಂಕೆ ಇದೆ. ಹೀಗಾಗಿ ಈ ಬಗ್ಗೆ ತನಿಖೆ ಮಾಡಿ ಎಂದು ಯುವತಿ ದೂರು ನೀಡಿದ್ದಾಳೆ. 

Woman Given Complaint about Rape Case in Bengaluru grg
Author
First Published Dec 14, 2023, 11:26 PM IST

ಬೆಂಗಳೂರು(ಡಿ.14): ನನ್ನ ಮೇಲೆ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಆಗಿರೋ ಬಗ್ಗೆ ಶಂಕೆ ಇದೆ. ನನಗೇನಾಗಿದೆ ತನಿಖೆ ಮಾಡಿ ಎಂದು ಯುವತಿಯೊಬ್ಬಳು ದೂರು ನೀಡಿದ್ದಾಳೆ. ಹೌದು, ಯುವತಿ ಕೋರಮಂಗಲ‌ ಪೊಲೀಸ್ ಠಾಣೆಗೆ ದೂರು ನೀಡಿದ್ದು ನನ್ನ ಮೇಲೆ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಆಗಿರೋ ಬಗ್ಗೆ ಶಂಕೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. 

ಡಿ.12 ರ  ರಾತ್ರಿ ಕೋರಮಂಗಲ ಪಬ್ ಗೆ ಆಗಮಿಸಿದ್ದ ಯುವತಿಗೆ ಮನೆಗೆ ತೆರಳದೆ, ಇಲ್ಲಿದ್ದೆ ಅನ್ನೋದು ಕೂಡ ಗೊತ್ತಿರಲಿಲ್ಲ. ಪ್ರಜ್ಞೆ ಬಂದಾಗ ಆಡುಗೋಡಿ ದೇವೇಗೌಡ ಲೇಔಟ್ ಬಳಿ ಯುವತಿ ಇದ್ದಳು. ಪ್ರಜ್ಞೆ ಬಂದು ಮನೆಯೊಂದರ ಬಾಗಿಲು ಬಡಿದಿದ್ದಾಳೆ. ನಂತರ ಸ್ಥಳೀಯರು 112 ಗೆ ಕರೆ ಮಾಡಿದ್ದರು. ಬಳಿಕ ಆಡುಗೋಡಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. 

3 ವರ್ಷದ ಮಗುವಿನ ಮೇಲೆ 55 ವರ್ಷದ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಯತ್ನ: ಬಂಧನ!

ಅಲ್ಲಿದ್ದ ಯುವತಿಯನ್ನ ಪೊಲೀಸರು ರಕ್ಷಿಸಿದ್ದರು. ಅಲ್ಲಿಂದ ಕೋರಮಂಗಲ ಠಾಣೆಗೆ ಯುವತಿಯನ್ನ ಪೊಲೀಸರು ಕರೆತಂದಿದ್ದರು. ಸದ್ಯ ಕೋರಮಂಗಲ ಠಾಣೆಗೆ ಯುವತಿ ದೂರು ನೀಡಿದ್ದು ನಾನು ಇಲ್ಲಿ ಹೇಗೆ ಬಂದೆ ಅನ್ನೋದ ನನಗೆ ಗೊತ್ತಿಲ್ಲ ಪ್ರಜ್ಞಾಹೀನಳಾಗಿದ್ದಾಗ ನನ್ನ ಮೇಲೆ ಅತ್ಯಾಚಾರ ಆಗಿರೋ‌ ಶಂಕೆ ಇದೆ. ಹೀಗಾಗಿ ಈ ಬಗ್ಗೆ ತನಿಖೆ ಮಾಡಿ ಎಂದು ಯುವತಿ ದೂರು ನೀಡಿದ್ದಾಳೆ. 

ಯುವತಿ ಹೇಳಿಕೆ ದಾಖಲಿಸಿಕೊಂಡು ಕೋರಮಂಗಲ ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.  
 

Follow Us:
Download App:
  • android
  • ios