Asianet Suvarna News Asianet Suvarna News

Job for sex: ಕೆಲಸ ಕೊಡಿಸುವ ನೆಪದಲ್ಲಿ 20 ಹುಡುಗಿಯರನ್ನು ಮಂಚಕ್ಕೆ ಕರೆದೊಯ್ದ ಐಎಎಸ್‌ ಅಧಿಕಾರಿ

IAS officer job for sex row: ಅಂಡಮಾನ್‌ ಮತ್ತು ನಿಕೋಬಾರ್‌ನ ಮಾಜಿ ಮುಖ್ಯ ಕಾರ್ಯದರ್ಶಿ ಜಿತೇಂದ್ರ ನರೇನ್‌ ಕೆಲಸ ಕೊಡಿಸುವ ನೆಪದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. 

job for sex row ex andaman and nicobar chief secretary accused of raping over 20 woman
Author
First Published Oct 27, 2022, 3:20 PM IST

ಅಂಡಮಾನ್‌: ಕೇಂದ್ರಾಡಳಿತ ಪ್ರದೇಶ ಅಂಡಮಾನಿನ ಮುಖ್ಯಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್‌ ಅಧಿಕಾರಿ ಇಪ್ಪತ್ತಕ್ಕೂ ಹೆಚ್ಚು ಹುಡುಗಿಯರನ್ನು ಸರ್ಕಾರಿ ಕೆಲಸ ಕೊಡುವ ನೆಪದಲ್ಲಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಕೆಲಸದ ಅಗತ್ಯವಿದ್ದ ಹುಡುಗಿಯರನ್ನು ಪೋರ್ಟ್‌ ಬ್ಲೇರ್‌ನ ನಿವಾಸಕ್ಕೆ ಕರೆಸಿಕೊಂಡು ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂಬ ವಿಚಾರ ತನಿಖೆಯಲ್ಲಿ ಹೊರ ಬಂದಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ದಿನಪತ್ರಿಕೆ ವರದಿ ಮಾಡಿದೆ. ಅಂಡಮಾನ್‌ ಮತ್ತು ನಿಕೋಬಾರ್‌ನ ಮುಖ್ಯ ಕಾರ್ಯದರ್ಶಿಯಾಗಿದ್ದ ಜಿತೇಂದ್ರ ನರೇನ್‌ ಅತಿ ಹೆಚ್ಚು ಕಾಲ ಚೀಫ್‌ ಸೆಕ್ರೆಟರಿಯಾಗಿ ಕಾರ್ಯಸಲ್ಲಿಸಿದ್ದರು. ಈ ಸೆಕ್ಸ್‌ ರ್ಯಾಕೆಟ್‌ ಆಚೆ ಬರಲು 21 ವರ್ಷದ ಯುವತಿ ಮಾಡಿದ ಆರೋಪವೇ ಕಾರಣ. 

ನರೇನ್‌ ಮತ್ತು ಕಾರ್ಮಿಕ ಆಯುಕ್ತ ಆರ್‌ ಎಲ್‌ ರಿಷಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ದೂರು ನೀಡಿದ್ದಳು. ಹೋಟೆಲ್‌ ಮಾಲೀಕರೊಬ್ಬ ಮೂಲಕ ಯುವತಿಗೆ ರಿಷಿ ಪರಿಚಯವಾಗಿತ್ತು, ನಂತರ ರಿಷಿ ನರೇನ್‌ರ ಮನೆಗೆ ಕರೆದುಕೊಂಡು ಹೋದರು. ಅದಾದ ಬಳಿಕ ಅಲ್ಲಿ ಮದ್ಯಪಾನ ಮಾಡುವಂತೆ ನರೇನ್‌ ಹೇಳಿದರು. ಯುವತಿ ಅದನ್ನು ತಿರಸ್ಕರಿಸಿದರು. ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿದ ಅವರು ನಂತರ ಅತ್ಯಾಚಾರ ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು. ಈ ದೂರಿನ ನಂತರ ತನಿಖೆ ನಡೆದಿದ್ದು ಅದರ ವರದಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಯುವತಿಯರನ್ನು ಇದೇ ರೀತಿ ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. 

ಕೆಲ ಯುವತಿಯರಿಗೆ ಸರ್ಕಾರಿ ನೌಕರಿಯನ್ನು ಸಹ ನರೇನ್‌ ಕೊಡಿಸಿದ್ದಾರೆ. ಇನ್ನು ಕೆಲವರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಯುವತಿಯ ದೂರಿನ ಅನ್ವಯ ಆಕೆಯನ್ನು ಎರಡು ವಾರಗಳ ನಂತರ ಮತ್ತೆ ಮನೆಗೆ ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಮಾಡಲಾಗಿದೆ. ಜತೆಗೆ ದೂರು ನೀಡಿದರೆ ಸರಿ ಇರುವುದಿಲ್ಲ ಎಂದು ಬೆದರಿಕೆ ಹಾಕಿ ಕಳಿಸಲಾಗಿದೆ. ಸರ್ಕಾರಿ ನೌಕರಿಯ ಆಸೆಗೆ ಹೋದವಳನ್ನು ಲೈಂಗಿಕವಾಗಿ ಬಳಸಿಕೊಂಡು ಹೆದರಿಸಿ ಕಳಿಸಲಾಗಿದೆ.

ಇದನ್ನೂ ಓದಿ: ಅಕ್ರಮ ಸಂಬಂಧ ಬಯಲು; ಹೆಂಡತಿಯ ಮೇಲೆ ಕಾರು ಹತ್ತಿಸಿದ ಸಿನೆಮಾ ನಿರ್ಮಾಪಕ 

ಮೂಲಗಳ ಪ್ರಕಾರ ಘಟನೆ ನಡೆದ ದಿನ ಯುವತಿ, ರಿಷಿ ಮತ್ತು ನರೇನ್‌ ಮೂವರ ಮೊಬೈಲ್‌ ಕೂಡ ಒಂದೇ ಲೊಕೇಷನ್‌ನಲ್ಲಿ ಇರುವುದು ದೃಢಪಟ್ಟಿದೆ. ಉಳಿದಂತೆ ಮನೆಯ ಸಿಸಿಟಿವಿ ಫೂಟೇಜ್‌ ಅನ್ನು ಡಿಲೀಟ್‌ ಮಾಡಲಾಗಿದ್ದು, ಸರ್ಕಾರಿ ನಿವಾಸ ಖಾಲಿ ಮಾಡುವಾಗ ಸಿಸಿಟಿವಿಯನ್ನೂ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಜುಲೈ ತಿಂಗಳಲ್ಲಿ ಪೋರ್ಟ್‌ ಬ್ಲೇರ್‌ನಿಂದ ದೆಹಲಿಗೆ ನರೇನ್‌ ವರ್ಗಾವಣೆಯಾಗಿತ್ತು. 

ನರೇನ್‌ ಸದ್ಯ ಸೇವೆಯಿಂದ ಅಮಾನತ್ತಾಗಿದ್ದು ಆರೋಪಗಳನ್ನು ಅಲ್ಲಗಳೆದಿದ್ದಾರೆ. ತಮ್ಮ ವಿರುದ್ಧ ನಡೆಸಿರುವ ಷಡ್ಯಂತ್ರ ಇದಾಗಿದೆ, ತಾವು ಯಾವುದೇ ಮಹಿಳೆಯನ್ನೂ ಲೈಂಗಿಕವಾಗಿ ಬಳಕೆ ಮಾಡಿಕೊಂಡಿಲ್ಲ ಎಂದು ನರೇನ್‌ ಗೃಹ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಮತ್ತು ಈ ಆರೋಪಗಳು ಸುಳ್ಳು ಎಂದು ಸಾಬೀತುಪಡಿಸಲು ನನ್ನ ಬಳಿಯೂ ದಾಖಲೆ ಇದೆ ಎಂದು ನರೇನ್‌ ಹೇಳಿದ್ದಾರೆ. 

ಇದನ್ನೂ ಓದಿ: Crime News: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನ ಬಂಧನ

ಘಟನೆ ನಡೆದಿರುವ ಎರಡು ದಿನಾಂಕಗಳಲ್ಲಿ ಒಂದು ದಿನ ಪೋರ್ಟ್‌ಬ್ಲೇರ್‌ನಲ್ಲಿ ತಾವು ಇರಲೇ ಇಲ್ಲ ಎಂಬುದನ್ನೂ ಕೋರ್ಟ್‌ನಲ್ಲಿ ನರೇನ್‌ ಪ್ರಶ್ನಿಸಿದ್ದಾರೆ. ಫ್ಲೈಟ್‌ ಟಿಕೆಟ್‌ಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದು, ದೆಹಲಿಯಲ್ಲಿ ನಿಯೋಜನೆಯಾಗಿದ್ದ ಸಭೆಗಳನ್ನೂ ಕೋರ್ಟ್‌ಗೆ ನೀಡಿದ್ದಾರೆ. ಇಂಡಿಯನ್‌ ಎಕ್ಸ್‌ಪ್ರೆಸ್‌ನಲ್ಲಿ ವರದಿ ಬಂದ ಮರುದಿನವೇ ಗೃಹ ಇಲಾಖೆ ನರೇನ್‌ರನ್ನು ಅಮಾನತ್ತು ಮಾಡಿದೆ. ನರೇನ್‌ ನಿರೀಕ್ಷಣಾ ಜಾಮೀನಿಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು, ಜಾಮೀನು ರಹಿತ ವಾರಂಟ್‌ ಕೂಡ ನೀಡಲಾಗಿದೆ. 
 

Follow Us:
Download App:
  • android
  • ios