ಪ್ರಜ್ವಲ್ ಮೇಲೆ ಎಫ್‌ಐಆರ್ ದಾಖಲಿಸಲು ಸಿಎಂ ವಿಳಂಬ ಮಾಡಿದ್ದು ಏಕೆ? ಪ್ರಲ್ಹಾದ್ ಜೋಶಿ ಕಿಡಿ
ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಮೇಲೆ ಯಾವುದೇ ಎಫ್‌ಐಆರ್ ಮಾಡದೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.
ಹುಬ್ಬಳ್ಳಿ (ಮೇ.2): ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಮೇಲೆ ಯಾವುದೇ ಎಫ್‌ಐಆರ್ ಮಾಡದೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.
ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಪ್ರಧಾನ ಮಂತ್ರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ತಮ್ಮ ಜವಾಬ್ದಾರಿಯಿಂದ ನುಣಿಚಿಕೊಂಡಿದ್ದಾರೆ. ಬೇರೆಯವರ ಮೇಲೆ ತಪ್ಪು ಹೊರಿಸುವ ಕೆಲಸವನ್ನು ಸಿಎಂ ಮಾಡಿದ್ದಾರೆ. ನಮ್ಮ ಪಶ್ನೆಗಳಿಗೆ ಕಾಂಗ್ರೆಸ್ ಪಕ್ಷದವರು ಒಂದೇ ಒಂದು ಉತ್ತರ ಕೊಟ್ಟಿಲ್ಲ. ಏ.21ಕ್ಕೆ ಕ್ಲಿಪಿಂಗ್ ಹೊರಬಿದ್ದಿದೆ. ಆದರೆ ಏ.28ರವರೆಗೂ ಪ್ರಜ್ವಲ್ ಮೇಲೆ ಎಫ್‌ಐಆರ್ ಮಾಡಿಲ್ಲ ಏಕೆ? ರಾಜ್ಯ ಸರ್ಕಾರ ಯಾವ ಕಾರಣಕ್ಕಾಗಿ ಪ್ರಜ್ವಲ್ ಮೇಲೆ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ ಎಂಬುದನ್ನ ಹೇಳಲಿ . ಈ ವಿಡಿಯೋಗಳು ಒಂದು ವರ್ಷ ಅಥವಾ ಆರು ತಿಂಗಳದ್ದಲ್ಲ, 2018 ರಿಂದಲೂ ವಿಡಿಯೋಗಳಿವೆ. ಆ ಸಂದರ್ಭದಲ್ಲಿ ಇದೇ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಪರ ಪ್ರಜ್ವಲ್ ಪ್ರಚಾರ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಪ್ರಧಾನಿ ಮೋದಿ ಮಹಿಳೆಯರ ರಕ್ಷಣೆಗೆ ಏನು ಮಾಡಿದ್ದಾರೆ? ಪ್ರಿಯಾಂಕಾ ಗಾಂಧಿ
ಇದರಲ್ಲಿ ಕಾಂಗ್ರೆಸ್‌ನಿಂದ ಮತಬ್ಯಾಂಕ್ ಪಾಲಿಟಿಕ್ಸ್ ನಡೆದಿದೆ. ದೇವೇಗೌಡರ ಮೊಮ್ಮಗನನ್ನು ಮುಟ್ಟಿದರೆ ಗೌಡರ ಮತ ಎಲ್ಲಿ ಹೋಗುತ್ತೆ ಅನ್ನೋ ಭಯವಿದೆ. ಹೀಗಾಗಿ ಎಫ್‌ಐಆರ್ ಮಾಡದೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಎಫ್‌ಐಆರ್ ಮಾಡದೆ ಕೇಂದ್ರ ಸರ್ಕಾರ ಏನಂತ ಕ್ರಮ ಕೈಗೊಳ್ಳಬೇಕು ಎಂದು ಪ್ರಶ್ನಿಸಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಮೋದಿ ಪರವಾದ ಪ್ರಚಂಡ ಅಲೆ ಸೃಷ್ಟಿಯಾಗಿದೆ. ಕರ್ನಾಟಕದ ಈ ಭಾಗದಲ್ಲಿಯೂ ಮೋದಿ ಪರ ವಾತಾವರಣ ಇದೆ. ಅಮಿತ್ ಶಾ ಭೇಟಿ ನೀಡಿದ ಕಡೆ ಅತ್ಯದ್ಭುತವಾಗಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ತರ ಕರ್ನಾಟಕ ಭಾಗದ 14 ಸ್ಥಾನಗಳಲ್ಲಿಯೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೇಹಾ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಪೋಷಕರು ಆಗ್ರಹ:
ನೇಹಾ ಪೋಷಕರ ಮನವಿ ಮೇರೆಗೆ ಅಮಿತ್ ಶಾ ರನ್ನು ಭೇಟಿ ಮಾಡಿಸಲಾಗಿತ್ತು. ಈ ವೇಳೆ ನಿರಂಜನ್ ಹಿರೇಮಠ ದಂಪತಿಗಳು ಹಲವಾರು ವಿಚಾರಗಳನ್ನು ಹೇಳಿದ್ದಾರೆ. ನೇಹಾ ಕೊಲೆ ಪ್ರಕರಣದಲ್ಲಿ ಸಿಐಡಿ ಮೇಲೆ ನಮಗೆ ನಂಬಿಕೆ ಇಲ್ಲ, ನಮಗೆ ತ್ವರಿತವಾಗಿ ನ್ಯಾಯ ಬೇಕು. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಹೀಗಾಗಿ ಸಿಬಿಐಗೆ ವಹಿಸುವಂತೆ ಪೋಷಕರು ಅಮಿತ್ ಶಾರನ್ನು ಆಗ್ರಹಿಸಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಅಂತ ಅಮಿತ್ ಶಾ ಭರವಸೆ ಕೊಟ್ಟಿದ್ದಾರೆ. ನಾವಾಗಿಯೇ ಸಿಬಿಐ ತನಿಖೆ ಕೈಗೊಳ್ಳಲು ಬರೊಲ್ಲ. ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕು ಅಥವಾ ಕೋರ್ಟ್ ನಿರ್ದೇಶನ ಕೊಡಬೇಕು ಹಾಗಾದಲ್ಲಿ ಮಾತ್ರ ಸೇವೆ ತನಿಖೆ ಸಾಧ್ಯ ಅಂತ ಅಮಿತ್ ಶಾ ಹೇಳಿದ್ದಾರೆ. ಯಾವುದೇ ಸಂದರ್ಭದಲ್ಲಿ ನಿಮ್ಮ ಜೊತೆ ಇರುತ್ತೇವೆ ಅನ್ನುವ ಭರವಸೆ ಕೊಟ್ಟಿದ್ದಾರೆ ಎಂದರು.
ಭಾರತ ಬಿಟ್ಟು ಪ್ರಜ್ವಲ್ ರೇವಣ್ಣ ಹೋಗಿರುವುದಾರೂ ಎಲ್ಲಿಗೆ..? ಅಶ್ಲೀಲ ವಿಡಿಯೋ ವಿರುದ್ಧ ಬೀದಿಗಿಳಿದು ಪ್ರತಿಭಟನೆ
ಕಾಲೇಜು ಯುವತಿಯನ್ನು ಹಾಡುಹಗಲೇ ಕಾಲೇಜು ಕ್ಯಾಂಪಸ್‌ನೊಳಗೆ ನುಗ್ಗಿ ಕುತ್ತಿಗೆಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿ. ಇದು ಸಾಮಾನ್ಯರು ಮಾಡುವ ಕೊಲೆಯಲ್ಲಿ ಈ ಹತ್ಯೆಯ ಹಿಂದೆ ದೊಡ್ಡ ಸಂಚಿದೆ. ಹತ್ಯೆ ಪ್ರಕರಣವನ್ನು ಸಿಬಿಐ ವಹಿಸುವಂತೆ ಪೋಷಕರು ಒತ್ತಾಯಿಸುತ್ತಿದ್ದರೂ ಸರ್ಕಾರ ಸಿಬಿಐ ಒಪ್ಪಿಸದಿರುವುದು ತನಿಖೆಗೆ ಯಾವ ದಿಕ್ಕಿಗೆ ಸಾಗಲಿದೆ ಎಂಬುದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.