Ias Officer  

(Search results - 111)
 • Inayat

  India14, Feb 2020, 1:05 PM IST

  ಪುಲ್ವಾಮಾ ಹುತಾತ್ಮರ ಹೆಣ್ಮಕ್ಕಳನ್ನು ದತ್ತು ಪಡೆದ ಮಹಿಳಾ IAS!

  ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಇಂದು ಒಂದು ವರ್ಷ. CRPF ಸೈನಿಕರ ಮೇಲೆ ನಡೆದ ಈ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಈ ಕೃತ್ಯದಿಂದ ಇಡೀ ದೇಶದಲ್ಲೇ ಶೋಕ ಮಡುಗಟ್ಟಿತ್ತು. ಬಾಲಿವುಡ್ ಸ್ಟಾರ್ ಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ದೇಶದ ಜನ ಸಾಮಾನ್ಯರೂ ಹುತಾತ್ಮರ ಕುಟುಂಬದ ನೆರವಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದರು. ಇವರಲ್ಲಿ ಓರ್ವ ಮುಸ್ಲಿಂ ಮಹಿಳಾ IAS ಅಧಿಕಾರಿ ಕೂಡಾ ಸದ್ದು ಮಾಡಿದ್ದರು. ಇವರು ಹುತಾತ್ಮರಾದವರ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದರು.

 • BJOP

  India20, Jan 2020, 4:03 PM IST

  ನಿಷೇಧಾಜ್ಞೆ ಉಲ್ಲಂಘನೆ, BJP ನಾಯಕನ ಕೆನ್ನೆಗೆ ಬಾರಿಸಿದ ಮಹಿಳಾ ಡಿಸಿ!

  ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ತಿರಂಗಾ ಯಾತ್ರೆ| ನಿಷೇಧಾಜ್ಞೆ ಜಾರಿಯಲ್ಲಿದ್ದರೂ ರ‍್ಯಾಲಿ ನಡೆಸಿದ ಬಿಜೆಪಿ ನಾಯಕ| ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕನಿಗೆ ಕಪಾಳ ಮೋಕ್ಷ 

 • Kannan Gopinathan

  India20, Jan 2020, 12:03 PM IST

  ಮಾಜಿ IAS ಗೋಪಿನಾಥನ್ ವಶಕ್ಕೆ ಪಡೆದ ಪೊಲೀಸರು

  ಮಾಜಿ IAS ಅಧಿಕಾರಿ ಕನ್ನನ್ ಗೋಪಿನಾಥನ್ ವಶ| ಪೌರತ್ವ ವಿರೋಧಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಗೋಪಿನಾಥನ್| 370ನೇ ವಿಧಿ ರದ್ದುಗೊಳಿಸಿದಾಗ ಸೇವೆಯಿಂದ ರಾಜೀನಾಮೆ ಪಡೆದಿದ್ದ ಕನ್ನನ್ ಗೋಪಿನಾಥನ್

 • Senthil

  Karnataka Districts18, Jan 2020, 8:06 AM IST

  'ಪೌರತ್ವ ಕಾಯ್ದೆ ತಿದ್ದುಪಡಿಗೆ ದಲಿತರು-ಮುಸ್ಲಿಮರೇ ಟಾರ್ಗೆಟ್‌, ಕೇಂದ್ರಕ್ಕೆ ಬಿಸಿ ಮುಟ್ಟಿಸಲೇಬೇಕು'

  ಪೌರತ್ವ ಕಾಯ್ದೆ ತಿದ್ದುಪಡಿಗೆ ಹೊರಟಿರುವವರು ಸಂವಿಧಾನದ ಅಡಿಪಾಯಕ್ಕೆ ಕೈ ಹಾಕಿದ್ದಾರೆ. ಇವರ ಗುರಿ ಬರೀ ಮುಸ್ಲಿಂ ಸಮುದಾಯವಷ್ಟೇ ಅಲ್ಲ; ದಲಿತರನ್ನು ಸಹ ಗುರಿಯಾಗಿಸಿಕೊಂಡು ಸಂವಿಧಾನ ವಿರೋಧಿ ಕೆಲಸಕ್ಕೆ ಮುಂದಾಗಿದ್ದಾರೆ. ಅವರಿಗೆ ಸರಿಯಾದ ಪಾಠ ಕಲಿಸದೇ ಹೋದರೆ ಉಳಿಗಾಲವಿಲ್ಲ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಸಸಿಕಾಂತ ಸೇಂಥಿಲ್‌ ಎಚ್ಚರಿಸಿದ್ದಾರೆ.
   

 • Harsh Gupta

  state15, Jan 2020, 10:36 AM IST

  ಐಎಂಎ ವಿಶೇಷ ತನಿಖಾಧಿಕಾರಿಯಾಗಿ ಹರ್ಷಗುಪ್ತಾ ನೇಮಕ

  ಹಿರಿಯ ಐಎಎಸ್‌ ಅಧಿಕಾರಿ ಹರ್ಷ ಗುಪ್ತಾ ಅವರನ್ನು ಐಎಂಎ ಪ್ರಕರಣದ ವಿಶೇಷ ಅಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 • Shivamogga

  Karnataka Districts11, Jan 2020, 1:26 PM IST

  ನಿವೃತ್ತ ನೌಕರಗೆ 1 ರು. ಪರಿಹಾರ ಪಾವತಿಸಲು IAS ಅಧಿಕಾರಿಗೆ ಕೋರ್ಟ್ ಸೂಚನೆ

  ನಿವೃತ್ತ ನೌಕರರೋರ್ವರಿಗೆ ನಷ್ಟದ ಪರಿಹಾರ ಪ್ರಕರಣ ಸಂಬಂಧ 60 ದಿನದ ಒಳಗೆ 1 ಪಾವತಿ ಮಾಡಬೇಕು ಎಂದು IAS ಅಧಿಕಾರಿಗೆ ಶೀವಮೊಗ್ಗ ಸಿವಿಲ್  ಮತ್ತು ಜೆಎಮ್ಎಫ್ ಸಿ ನ್ಯಾಯಾಲಯ ತೀರ್ಪು ನೀಡಿದೆ. 

 • shivananada

  Karnataka Districts11, Jan 2020, 11:32 AM IST

  ಲಿಂಗಾಯತ ಹೋರಾಟ ಯಾವ ಕಾಲಕ್ಕೂ ನಿಲ್ಲುವುದಿಲ್ಲ: ಶಿವಾನಂದ ಜಾಮದಾರ

  ಲಿಂಗಾಯತ ಹೋರಾಟ ಯಾವ ಕಾಲಕ್ಕೂ ನಿಲ್ಲುವುದಿಲ್ಲ. ಇದು ರಾಜಕೀಯ ರಹಿತ. ಯಾವುದೇ ಪಕ್ಷ ಬಂದರೂ ಇದು ನಿಲ್ಲದು. ಇದಕ್ಕೆ ಪಕ್ಷ ಸಂಬಂಧವಿಲ್ಲ ಎಂದು ಲಿಂಗಾಯತ ಚಳವಳಿ ಮುಖಂಡ, ನಿವೃತ್ತ ಐಎಎಸ್ ಅಧಿಕಾರಿ ಡಾ.ಶಿವಾನಂದ ಜಾಮದಾರ ಹೇಳಿದ್ದಾರೆ. 

 • Rohini Sindhuri

  Karnataka Districts27, Dec 2019, 10:13 AM IST

  ನೇತ್ರಾಣಿಯಲ್ಲಿ ಪತಿ ಜೊತೆ ಸಮುದ್ರದಾಳಕ್ಕೆ ಧುಮುಕಿದ ರೋಹಿಣಿ ಸಿಂಧೂರಿ

  ರಾಜ್ಯದ ಪ್ರಖ್ಯಾತ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನೇತ್ರಾಣಿಯಲ್ಲಿ ಸಮುದ್ರಾಳದ ವಿಸ್ಮಯ ಕಣ್ತುಂಬಿಕೊಂಡಿದ್ದಾರೆ. 

 • Sasikanth Senthil

  Karnataka Districts29, Nov 2019, 1:07 PM IST

  ‘NRCಯಿಂದ ದೇಶದ ಬಡ ಜನತೆ ಮತ್ತೆ ಸಂಕಷ್ಟಕ್ಕೆ ಹೋಗಬಹುದು’

  ಕೇಂದ್ರ ಸರ್ಕಾರ ರಾಜಕೀಯ ಉದ್ದೇಶದಿಂದ ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ) ಮಾಡಿಸಲು ಮುಂದಾಗುತ್ತಿದ್ದು, ಇದರಿಂದ ದೇಶದ ಬಡ ಜನರು ಮತ್ತೆ ಸಂಕಷ್ಟಕ್ಕೆ ಹೋಗಬಹುದು. ಈ ಹಿನ್ನಲೆಯಲ್ಲಿ ಕೂಡಲೇ ಇದನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಅಲ್ಲದೇ ದೇಶದ ಜನತೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಬೇಕು ಎಂದು ಐಎಎಸ್ ವೃತ್ತಿಗೆ ರಾಜೀನಾಮೆ ನೀಡಿರುವ ಸಸಿಕಾಂತ್ ಸೆಂಥಿಲ್ ಅವರು ಹೇಳಿದ್ದಾರೆ. 

 • Raichur

  Karnataka Districts27, Nov 2019, 1:00 PM IST

  ಮಾಜಿ ನಕ್ಸಲ್‌ ಭೇಟಿ ಮಾಡಿದ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್

  ಮಾಜಿ ನಕ್ಸಲ್‌ ನರಸಿಂಹಮೂರ್ತಿ ನನ್ನ ಕ್ಲೋಜ್ ಗೆಳೆಯನಾಗಿದ್ದಾನೆ. 20 ವರ್ಷಗಳಿಂದ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ. ಮಿಸ್ ಐಡೆಂಟಿಟಿಯಲ್ಲಿ ನರಸಿಂಹಮೂರ್ತಿ ಬಂಧನವಾಗಿದೆ. ಹೀಗಾಗಿ ಅವರನ್ನು ನೋಡಲು ರಾಯಚೂರಿಗೆ ಬಂದಿದ್ದೇನೆ ಎಂದು ಎಂದು ರಾಜೀನಾಮೆ ನೀಡಿದ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್ ಅವರು ಹೇಳಿದ್ದಾರೆ. 
   

 • rohini sindhuri temple
  Video Icon

  Hassan26, Nov 2019, 8:24 PM IST

  ಈ ದೇವಾಲಯದಲ್ಲಿ  ರೋಹಿಣಿ ಸಿಂಧೂರಿ ಹೆಸರಿನಲ್ಲಿ ಪ್ರತಿನಿತ್ಯ ಅರ್ಚನೆ

  ಹಾಸನ(ನ. 26)  ಹಾಸನದ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಪ್ರತೀ ಸೋಮವಾರ ಈ ದೇವಾಲಯದಲ್ಲಿ ಅರ್ಚನೆ ಮಾಡಲಾಗುತ್ತದೆ.  ಹಾಸನದ ವಿರೂಪಾಕ್ಷ ದೇವಾಯದಲ್ಲಿ ಹಳೇ ಜಿಲ್ಲಾಧಿಕಾರಿ ಹೆಸರಿನಲ್ಲಿ ಅರ್ಚನೆ ಮಾಡಲಾಗುತ್ತದೆ.

  ಅಲ್ಲದೇ ರೋಹಿಣಿ ಸಿಂಧೂರಿ ಹೆಸರಿನಲ್ಲಿ  ಬಾದಾಮಿ ಗಿಡ ಕೂಡಾ ಬೆಳಸಲಾಗುತ್ತಿದೆ. ಆ ಗಿಡಕ್ಕೆ ಪ್ರತಿನಿತ್ಯ ಜಲಾಭಿಷೇಕ ನಡೆಯುತ್ತಿದೆ. ಮುಜರಾಯಿ ಇಲಾಖೆಗೆ ಸೇರಿರುವ ದೇವಾಲಯ ಶಿಥಿಲಾವಸ್ಥೆಗೆ ತೆರೆಳಿದ್ದಾಗ ಯಾರೂ ಕೂಡಾ ಗಮನಹರಿಸಿರಲಿಲ್ಲ.  2017ರಲ್ಲಿ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ 30 ಲಕ್ಷ ಹಣ ಬಿಡುಗಡೆ ಮಾಡಿಸಿದ್ದರು . ಇದರಿಂದ ಮೇಲ್ಛಾವಣಿ, ನೆಲಹಾಸು ಮತ್ತು ವಿದ್ಯುತ್ ಸೌಕರ್ಯ ಸೇರಿ ಎಲ್ಲಾ ವ್ಯವಸ್ಥೆ ಬಂದಿತ್ತು.  ಹಾಸನದ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಪ್ರತೀ ಸೋಮವಾರ ಅರ್ಚನೆ ಮಾಡಲಾಗುತ್ತಿದೆ.

  ಗಿಡಗಂಟೆಗಳು ಬೆಳೆದು ಕಾಡಂತಿದ್ದ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದ್ದರು.  ಅಲ್ಲಿ ವಿಶೇಷ ಮರಗಳಿದ್ದವು, ಅವುಗಳ ನಡುವೆ ಒಂದು ಬಾದಾಮಿ ಗಿಡವನ್ನು ನೆಟ್ಟು ಅವರ ಹೆಸರನ್ನು ಇಟ್ಟು ಪೋಷಿಸಲಾಗುತ್ತಿದೆ. ಅದಕ್ಕೂ ಕೂಡಾ ಪ್ರತಿನಿತ್ಯ ಜಲಾಭಿಷೇಕ ಮಾಡಲಾಗುತ್ತದೆ. 

 • undefined

  state23, Nov 2019, 7:23 AM IST

  36 ಕೆಎಎಸ್‌ಗಳು ವಜಾ, 12 ಐಎಎಸ್‌ಗಳಿಗೆ ಹಿಂಬಡ್ತಿ?

  36 ಕೆಎಎಸ್‌ಗಳು ವಜಾ, 12 ಐಎಎಸ್‌ಗಳಿಗೆ ಹಿಂಬಡ್ತಿ?| ಹೈಕೋರ್ಟ್ ಆದೇಶ ಪಾಲನೆಗೆ ಸಿದ್ಧತೆ| 1998ರ ಗೆಜೆಟೆಡ್‌ ಪ್ರೊಬೇಷನ​ರ್ಸ್ಸ್ ನೇಮಕ ಪ್ರಕರಣ| 150ಕ್ಕೂ ಹೆಚ್ಚು ಅಧಿಕಾರಿಗಳ ಸ್ಥಾನಪಲ್ಲಟ ಸಾಧ್ಯತೆ| - ಹುದ್ದೆವಂಚಿತ 36 ಮಂದಿಗೆ ಲಭಿಸಲಿದೆ ನೌಕರಿ

 • IAS

  Karnataka Districts17, Nov 2019, 12:38 PM IST

  ಜನರನ್ನು ವಂಚಿಸಿದ್ದವ ನಕಲಿ ಐಎಎಸ್ ಅಧಿಕಾರಿಯಾಗಿದ್ದು ಹೇಗೆ..?

  ನಕಲಿ ಐಎಎಸ್ ಅಧಿಕಾರಿ ಬೆಳಕಿಗೆ ಬಂದ ಬೆನ್ನಲ್ಲೇ ಆತನ ವಂಚನೆ ಪ್ರಕರಣಗಳು ಅನೇಕ ಬೆಳಕಿಗೆ ಬಂದಿವೆ. ಮಹಮದ್ ಸಲ್ಮಾನ್ ಅಮಾಯಕ ಜನರಿಗೆ ಸರ್ಕಾರಿ ಉದ್ಯೋಗ ಹಾಗೂ ನಿವೇಶನ ಕೊಡಿಸುವು ದಾಗಿ ನಂಬಿಸಿ ಹಣ ವಂಚಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ .

 • KAS

  Karnataka Districts16, Nov 2019, 7:58 AM IST

  ಅಸಲಿ ಕೆಎಎಸ್‌ ಅಧಿಕಾರಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌!

  ಐಎಎಸ್‌ ಅಧಿಕಾರಿ ಎಂದು ನಂಬಿಸಿ ವಂಚನೆ| ಸರ್ಕಾರಿ ವಸತಿ ಗೃಹವನ್ನು ದುರ್ಬಳಕೆ | ಅಸಲಿ ಕೆಎಎಎಸ್‌ ಅಧಿಕಾರಿ ಜಾಣ್ಮೆಯಿಂದ ನಕಲಿ ಐಎಎಸ್‌ ಅಧಿಕಾರಿ ಬಂಧನ| 

 • thieft2

  Bengaluru-Urban15, Nov 2019, 8:16 AM IST

  ಮತ್ತು ಬರಿಸುವ ಮದ್ದು ನೀಡಿ ನಿವೃತ್ತ IAS ಅಧಿಕಾರಿ ಮನೆಯಲ್ಲಿ ಕಾವಲುಗಾರನಿಂದ ಕಳ್ಳತನ

  ನಿವೃತ್ತ ಐಎಎಸ್ ಅಧಿಕಾರಿ ಮನೆಯಲ್ಲಿ ಕಾವಲುಗಾರನೇ ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮತ್ತು ಬರುವ ಮದ್ದು ನೀಡಿ ಈ ಕೃತ್ಯ ಎಸಗಲಾಗಿದೆ.