ಹೆಂಡ್ತಿ ಮೇಲೆ ಅನುಮಾನ: ಗರ್ಭಿಣಿ ಪತ್ನಿ, ಮಗಳನ್ನೇ ಕೊಲೆ ಮಾಡಿದ ಯೋಧ
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಅವರ ಮನೆಯಲ್ಲಿ 32 ವರ್ಷದ ಏಕನಾಥ್ ಜಯಭಯ್ ಎಂಬ ಯೋಧ ತನ್ನ ಪತ್ನಿ ಮತ್ತು ಮೂರು ವರ್ಷದ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪತ್ನಿಯ ನಡೆ ಮೇಲೆ ಅನುಮಾನಗೊಂಡು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಂಭಾಜಿನಗರ (ಸೆಪ್ಟೆಂಬರ್ 14, 2023): ರಜೆ ಮೇಲೆ ಬಂದಿದ್ದ ದೇಶ ಕಾಯುವ ಸೈನಿಕ ಗರ್ಭಿಣಿ ಪತ್ನಿ ಹಾಗೂ 3 ವರ್ಷದ ಮಗಳನ್ನೇ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಏಕನಾಥ್ ಜಯಭಯ್ ಎಂಬ ಜವಾನ ಹೆಂಡತಿಯ ನಡೆ ಮೇಲೆ ಸಂಶಯಗೊಂಡು ಆಕೆಯನ್ನು ಹಾಗೂ ಮಗಳನ್ನು ಸಹ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಕೊಲೆ ಮಾಡಿದ ಬಳಿಕ ಯೋಧ ಪೊಲೀಸರಿಗೆ ಶರಣಾಗಿದ್ದಾನೆ ಎಂದೂ ತಿಳಿದುಬಂದಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಅವರ ಮನೆಯಲ್ಲಿ 32 ವರ್ಷದ ಏಕನಾಥ್ ಜಯಭಯ್ ಎಂಬ ಯೋಧ ತನ್ನ ಪತ್ನಿ ಮತ್ತು ಮೂರು ವರ್ಷದ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಪೊಲೀಸರಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ. ಘಟನೆಯ ಬಗ್ಗೆ ತಿಳಿದುಕೊಂಡ ಪೊಲೀಸ್ ತಂಡವು ನಾಂದೇಡ್‌ನ ಕಂಧರ್ ತಾಲೂಕಿನ ಬೋರಿ ಗ್ರಾಮದ ಅವರ ಮನೆಗೆ ಹೋದಾಗ ಜವಾನನ ಹೆಂಡತಿ ಮತ್ತು ಮಗಳು ಚಲನರಹಿತವಾಗಿ ಬಿದ್ದಿರುವುದನ್ನು ಕಂಡುಕೊಂಡರು.
ಇದನ್ನು ಓದಿ: ಬಿರಿಯಾನಿಗೆ ರಾಯಿತಾ ಕೇಳಿದ್ದಕ್ಕೆ ಥಳಿಸಿದ ಹೋಟೆಲ್ ಸಿಬ್ಬಂದಿ: ಕೆಲವೇ ಕ್ಷಣದಲ್ಲಿ ಗ್ರಾಹಕ ಸಾವು!
ಬಳಿಕ 25 ವರ್ಷದ ಭಾಗ್ಯಶ್ರೀ ಜಯಭಯ್ ಮತ್ತು 3 ವರ್ಷದ ಸರಸ್ವತಿಯನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಸ್ಪತ್ರೆಗೆ ಬರುವ ಮೊದಲೇ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಭಾಗ್ಯಶ್ರೀ ಮೃತಪಟ್ಟಾಗ ಆಕೆ ಗರ್ಭಾವಸ್ಥೆಯ ಎಂಟನೇ ತಿಂಗಳಿನಲ್ಲಿದ್ದಳು ಎಂದೂ ತಿಳಿದುಬಂದಿದೆ.
ಹೆಂಡತಿ ಹಾಗೂ ಮಗಳನ್ನು ಕೊಲೆ ಮಾಡಿದ ಏಕನಾಥ್ ಜಯಭಯ್, ರಾಜಸ್ಥಾನದ ಬಿಕಾನೇರ್ ಸೇನಾ ಕಂಟೋನ್ಮೆಂಟ್‌ನಲ್ಲಿ ನಿಯೋಜನೆಗೊಂಡಿದ್ದು, ನಾಲ್ಕು ದಿನಗಳ ಹಿಂದೆ ರಜೆಯ ಮೇಲೆ ಮನೆಗೆ ಬಂದಿದ್ದರು ಎಮದೂ ವರದಿಯಾಗಿದೆ.
ಇದನ್ನೂ ಓದಿ: ವಿಮಾನದ ಲೈಟ್ ಆಫ್ ಆಗ್ತಿದ್ದಂತೆ ಮಹಿಳೆಗೆ ಲೈಂಗಿಕ ಕಿರುಕುಳ: ಅಸಭ್ಯವಾಗಿ ಮುಟ್ತಿದ್ದ ಕಾಮಪಿಶಾಚಿ
ಈ ಸಂಬಂಧ ಮಾತನಾಡಿದ ಎಸ್‌ಪಿ ಶ್ರೀಕೃಷ್ಣ ಕೊಕಾಟೆ, ಜವಾನ್ ತನ್ನ ಹೆಂಡತಿಯ ಪಾತ್ರದ ಬಗ್ಗೆ ಅನುಮಾನಗೊಂಡು ಅವಳನ್ನು ಮತ್ತು ಅವರ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿ ಜವಾನ್ ಮತ್ತು ಆತನ ಪೋಷಕರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: AJIO ಬಳಕೆದಾರರೇ ಎಚ್ಚರ: ಅಂಬಾನಿ ಕಂಪನಿ ಹೆಸರಲ್ಲಿ ಇದೇನಿದು ದೊಡ್ಡ ಹಗರಣ?