Asianet Suvarna News Asianet Suvarna News

ವೈವಾಹಿಕ ಅತ್ಯಾಚಾರ ಅಪರಾಧವಲ್ಲ ಎಂದ ನ್ಯಾಯಮೂರ್ತಿ, ತೀರ್ಪಿನ ವಿರುದ್ಧ ಭಾರೀ ಆಕ್ರೋಶ!

* ವೈವಾಹಿಕ ರೇಪ್‌ ಅಪರಾಧವೇ?: ಇಬ್ಬರು ಜಡ್ಜ್‌ಗಳ ವಿಭಿನ್ನ ತೀರ್ಪು

* ಸುದೀರ್ಘ ವಿಚಾರಣೆ ನಡೆಸಿ ಭಿನ್ನ ತೀರ್ಪು ಕೊಟ್ಟದಿಲ್ಲಿ ಹೈಕೋರ್ಚ್‌

* ತೀರ್ಪಿನ ವಿರುದ್ಧ ಭಾರೀ ಆಕ್ರೋಶ

Marital rape Husband may compel wife to have sex but is it rape asks Delhi HC judge sparks row pod
Author
Bangalore, First Published May 12, 2022, 11:05 AM IST

ನವದೆಹಲಿ(ಮೇ.12): ದಾಂಪತ್ಯ ಜೀವನದಲ್ಲಿ ನಡೆಯುವ ಅತ್ಯಾಚಾರವನ್ನು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸಬೇಕೆ ಎಂಬ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಚ್‌ ಬುಧವಾರ ಈ ವಿಚಾರವಾಗಿ ಭಿನ್ನ ತೀರ್ಪು ನೀಡಿದೆ. ಇಬ್ಬರು ಸದಸ್ಯರು ಇದ್ದ ವಿಭಾಗೀಯ ಪೀಠದ ನ್ಯಾಯಮೂರ್ತಿಗಳ ಪೈಕಿ ಒಬ್ಬರು ವೈವಾಹಿಕ ಅತ್ಯಾಚಾರವನ್ನೂ ಅಪರಾಧ ಎಂದು ಪರಿಗಣಿಸಿದರೆ, ಮತ್ತೊಬ್ಬರು ಜಡ್ಜ್‌ ಅದೇನು ಅಸಾಂವಿಧಾನಿಕವಲ್ಲ ಎಂದು ತೀರ್ಪಿತ್ತಿದ್ದಾರೆ. ಇದರಿಂದಾಗಿ ಪ್ರಕರಣ ಕಗ್ಗಂಟಾಗಿದ್ದು, ಸುಪ್ರೀಂಕೋರ್ಟ್‌ ಮೆಟ್ಟಿಲೇರಲಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ದೆಹಲಿ ಹೈಕೋರ್ಚ್‌ ಕೂಡ ಅರ್ಜಿದಾರರಿಗೆ ಅನುವು ಮಾಡಿಕೊಟ್ಟಿದೆ.

Extramarital Affairs : ಆಸ್ಪತ್ರೆ ಬೆಡ್ ನಲ್ಲಿ ಹೆಂಡತಿ.. ಪಾರ್ಕ್ ನಲ್ಲಿ ಇನ್ನೊಬ್ಬಳ ಜೊತೆ ಪತಿ

ಐಪಿಸಿ ಸೆಕ್ಷನ್‌ 375 (ಅತ್ಯಾಚಾರ)ರಡಿ ಅಪ್ರಾಪ್ತೆಯಲ್ಲದ ಪತ್ನಿಯ ಜತೆ ಪತಿ ನಡೆಸುವ ಲೈಂಗಿಕ ಕ್ರಿಯೆಗೆ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ವೈವಾಹಿಕ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ ನ್ಯಾಯಮೂರ್ತಿ ರಾಜೀವ್‌ ಶಕ್‌ಧೇರ್‌ ಅವರು, ‘ಅತ್ಯಾಚಾರ ಕಾಯ್ದೆಯಲ್ಲಿ ವೈವಾಹಿಕ ಅತ್ಯಾಚಾರಕ್ಕೆ ನೀಡಿರುವ ವಿನಾಯಿತಿಯನ್ನೇ ರದ್ದುಪಡಿಸಬೇಕು. ಏಕೆಂದರೆ, ಈ ವಿನಾಯಿತಿ ಸಮಾನತೆ ಹಕ್ಕು, ವಾಕ್‌ ಸ್ವಾತಂತ್ರ್ಯ, ಅಭಿವ್ಯಕ್ತಿ ವ್ಯಕ್ತಿ ಸ್ವಾತಂತ್ರ್ಯ, ಜೀವ ರಕ್ಷಣೆ, ವೈಯಕ್ತಿಕ ಸ್ವಾತಂತ್ರ್ಯ ಹಕ್ಕುಗಳಿಗೆ ಸಂಬಂಧಿಸಿದ ಸಂವಿಧಾನದ 14, 15, 19(1) (ಎ) ಹಾಗೂ 21ನೇ ಪರಿಚ್ಛೇದವನ್ನು ಉಲ್ಲಂಘಿಸುತ್ತದೆ’ ಎಂದು ಹೇಳಿದರು.

ಆದರೆ ಮತ್ತೊಬ್ಬ ನ್ಯಾಯಮೂರ್ತಿ ಸಿ.ಹರಿಶಂಕರ್‌ ಅವರು, ಐಪಿಸಿ ಅಡಿ ನೀಡಿರುವ ವಿನಾಯಿತಿ ಅಸಂವಿಧಾನಿಕವೇನಲ್ಲ. ಸಂವಿಧಾನದ ಪರಿಚ್ಛೇದ 14, 19(1) (ಎ) ಹಾಗೂ 21 ಅನ್ನು ಉಲ್ಲಂಘಿಸುವುದಿಲ್ಲ. "ಒಬ್ಬ ಪತಿಯು ತನ್ನ ಹೆಂಡತಿಯನ್ನು ತನ್ನೊಂದಿಗೆ ಸಂಭೋಗಕ್ಕೆ ಒಲವು ತೋರದಿದ್ದರೂ, ಆಕೆಯನ್ನು ತನ್ನೊಂದಿಗೆ ಸಂಭೋಗಿಸಲು ಒತ್ತಾಯಿಸಬಹುದು ಎಂದು ತೀರ್ಪಿತ್ತರು. ಹೀಗಾಗಿ ವಿಭಿನ್ನ ತೀರ್ಪು ಹೊರಬಂತು.

ವೈವಾಹಿಕ ಅತ್ಯಾಚಾರ ಅಪರಾಧವೇ, ಅಲ್ಲವೇ? ಮೂಡದ ಒಮ್ಮತ, ಸುಪ್ರೀಂ ಅಂಗಳದಲ್ಲಿ ವಿಚಾರಣೆ!

ತೀರ್ಪಿನ ವಿರುದ್ಧ ಕಿಡಿ:

ಆದರೆ, ತೀರ್ಪು ನೀಡುವಾಗ ಅವರು ಮಾಡಿದ ಅವಲೋಕನವೊಂದು ಗದ್ದಲ ಎಬ್ಬಿಸಿದೆ. ನ್ಯಾಯಮೂರ್ತಿ ಹರಿ ಶಂಕರ್ ಅವರು,  "ಒಬ್ಬ ಪತಿಯು ತನ್ನ ಹೆಂಡತಿಯನ್ನು ತನ್ನೊಂದಿಗೆ ಸಂಭೋಗಕ್ಕೆ ಒಲವು ತೋರದಿದ್ದರೂ, ಆಕೆಯನ್ನು ತನ್ನೊಂದಿಗೆ ಸಂಭೋಗಿಸಲು ಒತ್ತಾಯಿಸಬಹುದು ಎಂದು ತೀರ್ಪು ನೀಡಿರುವುದು ಗದ್ದಲಕ್ಕೆ ಕಾರಣವಾಗಿದ್ದು, ರಾಜಕಾರಣಿಗಳು ಸೇರಿದಂತೆ ಹಲವರು ಇದನ್ನು ಟೀಕಿಸಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿದ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ, "ಹೌದು ಇದನ್ನು ಹೆಚ್ಚಿನ ಮಹಿಳೆಯರಿಂದ ಔಚಿತ್ಯದ ಮತ್ತು ಅಧಿಕಾರದ ಜೊತೆಗೆ ಹೇಳಬಹುದು ಗೌರವಾನ್ವಿತ ನ್ಯಾಯಾಧೀಶರೇ, ಅಪರಿಚಿತರು ಅಥವಾ ಪತಿ ಮಹಿಳೆ ಅಥವಾ ಅವರ ಹೆಂಡತಿಯನ್ನು ಬಲವಂತಪಡಿಸುವುದು ಆಕ್ರೋಶ, ಅಗೌರವ ಮತ್ತು ಉಲ್ಲಂಘನೆಯ ಅನುಭವವು ಅಷ್ಟೇ ಪ್ರಬಲವಾಗಿದೆ. ಈ ಬಗ್ಗೆ ನಿಮ್ಮ ಸುತ್ತಲಿರುವ ಮಹಿಳೆಯರನ್ನು ಕೇಳಿ. ಧನ್ಯವಾದಗಳು." ಎಂದಿದ್ದಾರೆ. 

ಮತ್ತೋರ್ವ ಸಾಮಾಜಿಕ ಮಾಧ್ಯಮ ಬಳಕೆದಾರರು, "ಗೊಂದಲಕಾರಿಯಾಗಿದೆ. ವೈವಾಹಿಕ ಅತ್ಯಾಚಾರ ಕೂಡಾ ಅತ್ಯಾಚಾರವಾಗಿದೆ, ಆದ್ದರಿಂದ ಇದು ಅಪರಾಧ' ಎಂದಿದ್ದಾರೆ. 

Follow Us:
Download App:
  • android
  • ios