Asianet Suvarna News Asianet Suvarna News

ಕಾಂಗ್ರೆಸ್‌ ಕಾಲದ ಅಕ್ರಮ: ಮತ್ತೊಬ್ಬ ಶಿಕ್ಷಕ ಸೆರೆ

ಕಳೆದ 2014-15ನೇ ಸಾಲಿನ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಕಾರ್ಯಾಚರಣೆ ಮುಂದುವರೆದಿದ್ದು, ಬುಧವಾರ ಮತ್ತೊಬ್ಬ ಶಿಕ್ಷಕ ಸಿಐಡಿ ಬಲೆಗೆ ಬಿದ್ದಿದ್ದಾನೆ. 

Illegal Recruitment Of Karnataka Education Department Another teacher arrested gvd
Author
First Published Sep 8, 2022, 8:27 AM IST

ಬೆಂಗಳೂರು (ಸೆ.08): ಕಳೆದ 2014-15ನೇ ಸಾಲಿನ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಕಾರ್ಯಾಚರಣೆ ಮುಂದುವರೆದಿದ್ದು, ಬುಧವಾರ ಮತ್ತೊಬ್ಬ ಶಿಕ್ಷಕ ಸಿಐಡಿ ಬಲೆಗೆ ಬಿದ್ದಿದ್ದಾನೆ. ಇದರೊಂದಿಗೆ ಬಂಧಿತ ಶಿಕ್ಷಕರ ಸಂಖ್ಯೆ 12ಕ್ಕೇರಿದಂತಾಗಿದೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತದ್ದೇವಾಡಿ ಗ್ರಾಮದ ಸಿದ್ದರಾಮಪ್ಪ ಆರ್‌. ಬಿರಾದಾರ್‌ ಬಂಧಿತರಾಗಿದ್ದು, ಅಕ್ರಮ ದಾಖಲೆ ಸಲ್ಲಿಸಿ ಶಿಕ್ಷಕ ಹುದ್ದೆ ಪಡೆದ ಆರೋಪ ಸಿದ್ದರಾಮಪ್ಪ ವಿರುದ್ಧ ಕೇಳಿ ಬಂದಿದೆ. ಈ ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೆ ಸಿಐಡಿ ಪತ್ತೆ ಹಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕಪನಿಂಬರಗಿ ಪ್ರೌಢ ಶಾಲೆಯಲ್ಲಿ ಸಿದ್ದರಾಮಪ್ಪ ವಿಜ್ಞಾನ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದರು. 2014-15ನೇ ಸಾಲಿನಲ್ಲಿ ಆತ ಕೂಡಾ ಅಕ್ರಮವಾಗಿ ಹುದ್ದೆ ಪಡೆದಿದ್ದರು. ಇದೇ ಪ್ರಕರಣದಲ್ಲಿ ತುಮಕೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸಿಐಡಿ ಕಾರ್ಯಾಚರಣೆ ನಡೆಸಿ 11 ಶಿಕ್ಷಕರನ್ನು ಬಂಧಿಸಿತ್ತು. ಶಿಕ್ಷಕರ ಬಂಧನ ಬೆನ್ನಲ್ಲೇ ಈಗ ಅಧಿಕಾರಿಗಳಿಗೆ ನಡುಕು ಶುರುವಾಗಿದ್ದು, ಕೆಲವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್‌ ನೀಡಿದೆ ಎಂದು ತಿಳಿದು ಬಂದಿದೆ.

Bengaluru Crime: ಚಿರತೆ ಚರ್ಮ ಮಾರಲು ಯತ್ನಿಸಿ ಸಿಕ್ಕಿಬಿದ್ದ ಟೆಕ್ಕಿ..!

ಶಿಕ್ಷಣ ಸಚಿವರ ತವರು ಜಿಲ್ಲೆಯ 10 ಶಿಕ್ಷಕರು ಸಿಐಡಿ ವಶಕ್ಕೆ: 2014-15 ನೇ ಸಾಲಿನ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದು, ಶಿಕ್ಷಣ ಸಚಿವ‌ರ ತವರು ಜಿಲ್ಲೆಯಲ್ಲೇ 10 ಶಿಕ್ಷಕರನ್ನು ಸಿಐಡಿ ವಶಕ್ಕೆ ಪಡೆದಿದೆ. ಅಕ್ರಮ ನೇಮಕಾತಿ ಪ್ರಕರಣದ ಬೆನ್ನು ಹತ್ತಿರುವ ಸಿಐಡಿ ಅಧಿಕಾರಿಗಳು ಶಿಕ್ಷಣ ಸಚಿವ ಬಿಸಿ ನಾಗೇಶ್ ತವರು ಜಿಲ್ಲೆ ತುಮಕೂರಿನಲ್ಲಿ 10 ಶಿಕ್ಷಕರು ವಶಕ್ಕೆ ಪಡೆದಿದ್ದಾರೆ. 

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ, ಕಮ್ಲಾಪುರದ ಶಾಲೆಯ ಶಿಕ್ಷಕ, ಕುಣಿಗಲ್ ತಾಲ್ಲೂಕಿನ ಕೊಡವತ್ತಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ, ನಾಗಸಂದ್ರ ಪ್ರೌಢ ಶಾಲೆಯ ಶಿಕ್ಷಕಿ, ಅಮೃತೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಶಿಕ್ಷಕ, ಹೊಳಗೇರಿಪುರ ಶಾಲೆಯ ಶಿಕ್ಷಕ ಹಾಗೂ ತಿಪಟೂರು ತಾಲೂಕಿನ ಅಲ್ಬೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ. ತುರುವೇಕೆರೆ ತಾಲೂಕಿನ ಹುಲಿಕಲ್ ಸರಕಾರಿ ಪ್ರೌಢಶಾಲೆಯ ಶಿಕ್ಷಕ, ಹುಲಿಕೆರೆ ಶಾಲೆಯ ಶಿಕ್ಷಕ,  ಗುಬ್ಬಿ ತಾಲೂಕಿನ ಕೆ.ಮತ್ತಿಘಟ್ಟ ಶಾಲೆಯ ಶಿಕ್ಷಕ ಸೇರಿದಂತೆ ತಲಾ 10 ಶಾಲೆಗಳಿಂದ ಓರ್ವ ಶಿಕ್ಷಕರನ್ನ ವಶಕ್ಕೆ ಪಡೆದಿದೆ. 

14 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯ್ಡೆಯಡಿ ಮದರಸಾ ಶಿಕ್ಷಕ ಅರೆಸ್ಟ್!

ಇತ್ತೀಚೆಗೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯವರು ಅಕ್ರಮ ಶಿಕ್ಷಕರ ನೇಮಕಾತಿ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೆಲ‌ ದಿನಗಳ‌ ಹಿಂದೆ ಈ ಪ್ರಕರಣವನ್ನ ಸಿಐಡಿಗೆ ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವ ಸಿಐಡಿ ಅಧಿಕಾರಿಗಳು ಇದೀಗ ತುಮಕೂರು ಜಿಲ್ಲೆಯ ಹತ್ತು ಶಿಕ್ಷಕರನ್ನು ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ. 

Follow Us:
Download App:
  • android
  • ios