ಮಲ್ಲೇಶನಾಯಕ ತನ್ನ ಪತ್ನಿಗೆ ಮೇಲಿಂದ ಮೇಲೆ ವರದಕ್ಷಿಣೆ ಹಣ ತರುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದನು. ಘಟನೆಯಲ್ಲಿ ಗಾಯಗೊಂಡ ತನ್ನ ಪತ್ನಿಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾನೆ.
ಎಚ್.ಡಿ. ಕೋಟೆ(ಜ.23): ವರದಕ್ಷಿಣೆ ತರುವಂತೆ ತನ್ನ ಪತ್ನಿಗೆ ಹಿಂಸೆ ನೀಡುತ್ತಿದ್ದ ಪತಿಯು ಆಕೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಪಟ್ಟಣದ ಹನುಮಂತನಗರದಲ್ಲಿ ಜರುಗಿದೆ. ಪಟ್ಟಣದ ಕೆಎಸ್.ಆರ್.ಟಿಸಿ ಘಟಕದಲ್ಲಿ ಮೆಕಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲೇಶ್ ನಾಯಕ ಎಂಬಾತನೆ ತನ್ನ ಪತ್ನಿ ಮಧುರ (28) ಎಂಬಾಕೆಗೆ ಬೆಂಕಿ ಹಚ್ಚಿದವನು. ಈತ 8 ವರ್ಷಗಳ ಹಿಂದೆ ಮಧುರ ಅವರನ್ನು ಮದುವೆಯಾಗಿದ್ದು, ಇವರು ಮೂಲತಃ ವಿಜಯಪುರ ಜಿಲ್ಲೆಯವರಾಗಿರುತ್ತಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಮಲ್ಲೇಶನಾಯಕ ತನ್ನ ಪತ್ನಿಗೆ ಮೇಲಿಂದ ಮೇಲೆ ವರದಕ್ಷಿಣೆ ಹಣ ತರುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದನು. ಘಟನೆಯಲ್ಲಿ ಗಾಯಗೊಂಡ ತನ್ನ ಪತ್ನಿಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾನೆ. ಈತನಿಗೂ ಸಹ ಕೈ ಮತ್ತು ಹೃದಯ ಭಾಗದಲ್ಲಿ ಗಾಯಗಳಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವರದಕ್ಷಿಣೆ ಕಿರುಕುಳ: ಊಟ ಮಾಡಲು ಕುಳಿತಿದ್ದ ಪತ್ನಿಯ ಕತ್ತು ಹಿಸುಕಿ ಕೊಂದ ಪಾಪಿ!
ಘಟನೆಗೆ ಸಂಬಂಧಿಸಿದಂತೆ ಪತ್ನಿ ಮಲ್ಲೇಶ್ ನಾಯಕನ ವಿರುದ್ಧ ಕೇಸು ದಾಖಲಿಸಿಕೊಂಡಿರುತ್ತಾರೆ. ಅದೇ ರೀತಿ ಮಲ್ಲೇಶ್ ನಾಯಕನ ಮೇಲೆ ಹಲ್ಲೆ ನಡೆಸಿದ ನಾಗರಾಜ ನಾಯಕನ ವಿರುದ್ಧವು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಧುರಳನ್ನು ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಮಲ್ಲಿಕ್, ಸಿಪಿಐ ಶಬ್ಬೀರ್ ಹುಸೇನ್ ಭೇಟಿ ನೀಡಿದ್ದರು.
