ವರದಕ್ಷಿಣೆ ಕಿರುಕುಳ: ಊಟ ಮಾಡಲು ಕುಳಿತಿದ್ದ ಪತ್ನಿಯ ಕತ್ತು ಹಿಸುಕಿ ಕೊಂದ ಪಾಪಿ!
ರಾಯಚೂರಿನಲ್ಲಿ ವರದಕ್ಷಿಣೆ ವಿಚಾರವಾಗಿ ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ನಡುವೆ ಗಲಾಟೆ ನಡೆದು ಪತ್ನಿ ಸಾವನ್ನಪ್ಪಿದ್ದಾರೆ. ಊಟದ ವೇಳೆ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಿ ಪರಾರಿಯಾಗಿದ್ದಾನೆ.
ರಾಯಚೂರು (ಡಿ.21): ವರದಕ್ಷಿಣೆ ವಿಚಾರವಾಗಿ ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ನಡುವೆ ಆರಂಭವಾದ ಗಲಾಟೆ ಪತ್ನಿಯ ಸಾವಿನೊಂದಿಗೆ ಅಂತ್ಯವಾಗಿರುವ ದಾರುವ ದಾಣೆಗೆ ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್‌ನಲ್ಲಿ ನಡೆದಿದೆ. ವರದಕ್ಷಿಣೆ ಸಂಬಂಧ ಗಲಾಟೆ ಆರಂಭವಾದ ಬಳಿಕ, ಊಟ ಮಾಡಲು ಕುಳಿತಿದ್ದ ಹೆಂಡತಿಯ ಕತ್ತು ಹಿಸುಕಿ ಪಾಪಿ ಪತಿ ಕೊಂದಿದ್ದಾನೆ. 23 ವರ್ಷದ ಲಿಪಿ ಸರ್ಕಾರ್ ಮೃತ ದುರ್ದೈವಿ. ಲಿಪಿ ಸರ್ಕಾರ್ ಮತ್ತು ಮಂಜುನಾಥ ಕಾಲೇಜಿನಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಮೂರು ವರ್ಷಗಳ ಹಿಂದೆ ಇವರು ಊರಿನಲ್ಲಿಯೇ ವಿವಾಹವಾಗಿದ್ದರು. ಮದುವೆಯಾದ ಎರಡು ವರ್ಷಗಳ ಕಾಲ ಈ ಜೋಡಿ ಸಂತೋಷವಾಗಿಯೇ ಕಾಲ ಕಳೆದಿದ್ದರು. ಹೆಣ್ಣು ಮಗು ಹುಟ್ಟಿದ ಬಳಿಕ ಮನೆಯಲ್ಲಿ ಗಂಡ-ಹೆಂಡತಿ ನಡುವೆ ಪ್ರತಿದಿನ ಜಗಳ ಶುರುವಾಗುತ್ತಿತ್ತು.
ನಿತ್ಯವೂ ಕುಡಿದು ಬಂದು ಮಂಜುನಾಥ್ ಕಿರಿಕ್ ಮಾಡುತ್ತಿದ್ದ. ಗಂಡನ ಕಿರುಕುಳದ ನಡುವೆಯೂ ಯಾವುದೇ ಸಮಸ್ಯೆ ಇಲ್ಲ ಎನ್ನುವಂತೆ ಲಿಪಿ ಸರ್ಕಾರ್ ಜೀವನ ನಡೆಸಿಕೊಂಡು ಹೋಗುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಲಿಪಿ ಸರ್ಕಾರ್, ಅದರಿಂದಲೇ ಮನೆ ನಿರ್ವಹಣೆ ಮಾಡುತ್ತಿದ್ದರು.
2024ರಲ್ಲಿ ಭಾರತದ ಶ್ರೀಮಂತ ಹೂಡಿಕೆದಾರರು, ಧಮಾನಿಗೆ 37 ಸಾವಿರ ಕೋಟಿ ನಷ್ಟ!
ಶುಕ್ರವಾರವೂ ಹಣದ ವಿಚಾರವಾಗಿ ಗಂಡ- ಹೆಂಡತಿ ನಡುವೆ ಜಗಳ ಆರಂಭವಾಗಿದೆ. ಜಗಳದ ನಡುವೆಯೇ ಊಟಕ್ಕೆ ಕುಳಿತಿದ್ದ ಪತ್ನಿಯ ಕುತ್ತಿಗೆಗೆ ವೇಲ್ ಬಿಗಿದು ಹಿಡಿದಿದ್ದಾನೆ. ಈ ವೇಳೆ ಉಸಿರುಗಟ್ಟಿ ಲಿಪಿ ಸಾವು ಕಂಡಿದ್ದಾಳೆ.
ಕೊಬ್ಬರಿ ಬೆಂಬಲ ಬೆಲೆ ಏರಿಸಿದ ಕೇಂದ್ರ ಸರ್ಕಾರ, 2025ರಲ್ಲಿ ಕ್ವಿಂಟಾಲ್‌ಗೆ 12,100 ರೂಪಾಯಿ!
ಕೊಲೆಯಾದ ಬಳಿಕ ಮನೆಯಲ್ಲಿನ ಫ್ಯಾನ್ ಗೆ ಪತ್ನಿಯನ್ನ ನೇಣುಹಾಕಿ ಪತಿ ಪರಾರಿಯಾಗಿದ್ದಾನೆ. 6 ತಿಂಗಳ ಮಗುವನ್ನ ಅಲ್ಲಿಯೇ ಬಿಟ್ಟು ಪತಿ ಮಂಜುನಾಥ ಮನೆಯಿಂದ ಎಸ್ಕೇಪ್ ಆಗಿದ್ದಾನೆ. ಮಗು ಅಳುವುದು ಕೇಳಿಸಿಕೊಂಡ ಸ್ಥಳೀಯರು ನೋಡಿದಾಗ ಲಿಪಿ ಸರ್ಕಾರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕೂಡಲೇ ಸಿಂಧನೂರು ಗ್ರಾಮೀಣ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಸಿಂಧನೂರು ಆಸ್ಪತ್ರೆಗೆ ರವಾನೆ ಮಾಡಿದ್ದು, ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.