Crime News: ರೊಟ್ಟಿ ಮಾಡದ ವಿಚಾರಕ್ಕೆ ಕುಪಿತಗೊಂಡ ಪತಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹರಿಯಾಣದ ಹಿಸಾರ್‌ನಲ್ಲಿ ನಡೆದಿದೆ.
ಹರ್ಯಾಣ (ಸೆ. 26): ರೊಟ್ಟಿ ಮಾಡದ ವಿಚಾರಕ್ಕೆ ಕುಪಿತಗೊಂಡ ಪತಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹರಿಯಾಣದ ಹಿಸಾರ್‌ನಲ್ಲಿ ನಡೆದಿದೆ. ಪತ್ನಿಯನ್ನು ಕೊಂದ ಬಳಿಕ ತನ್ನ ಒಂದೂವರೆ ವರ್ಷದ ಮಗನನ್ನು ಕೊಂದು ಬಳಿಕ ಶವವನ್ನು ಪೊದೆಯಲ್ಲಿ ಎಸೆದಿದ್ದಾನೆ. ಪತ್ನಿ ಕರೀನಾ ಹಾಗೂ ಮಗ ಚಿಕು ಮೃತ ದುರ್ದೈವಿಗಳು. ಬಿಹಾರದ ನಿಚಾಸ್‌ಪುರ ಗ್ರಾಮದ ನಿವಾಸಿ ಆರೋಪಿ ಅನೋಜ್ ಪೊಲೀಸರ ವಿಚಾರಣೆ ವೇಳೆ ಈ ವಿಷಯವನ್ನು ಬಹಿರಂಗಪಡಿಸಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಪೊಲೀಸರು ಮೃತದೇಹವನ್ನು ಬಿಹಾರದಿಂದ ಬಂದಿದ್ದ ಮೃತರ ತಾಯಿ ಲೀಲಾದೇವಿ ಅವರಿಗೆ ಹಸ್ತಾಂತರಿಸಿದ್ದಾರೆ. ಮಗುವಿನ ಶವ ಇನ್ನು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕರೀನಾಗೆ ಈಗಾಗಲೇ ಮದುವೆಯಾಗಿದ್ದು, ಗ್ರಾಮದ ಅನೋಜ್ ಸಂಪರ್ಕ ಬೆಳೆದಿತ್ತು. ಎರಡು ವರ್ಷಗಳ ಹಿಂದೆ, ಕರೀನಾ ತನ್ನ ಎಂಟು ದಿನದ ನವಜಾತ ಶಿಶುವನ್ನು ತನ್ನ ಮೊದಲ ಪತಿಯೊಂದಿಗೆ ಬಿಟ್ಟು ಹಿಸಾರ್‌ನಲ್ಲಿರುವ ಅನೋಜ್ ಜತೆ ಬಂದಿದ್ದಳು. ಇಲ್ಲಿ ಇಬ್ಬರೂ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಇಲ್ಲಿ ಕರೀನಾ ಮಗುವಿಗೆ ಜನ್ಮ ನೀಡಿದ್ದಳು.
ರೊಟ್ಟಿ ಮಾಡುವ ವಿಚಾರದಲ್ಲಿ ಜಗಳ: ಕರೀನಾ ಜತೆ ರೊಟ್ಟಿ ಮಾಡುವ ವಿಚಾರದಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ. ಸುಮಾರು ಎರಡೂವರೆ ತಿಂಗಳ ಹಿಂದೆ ಜಗಳದ ವೇಳೆ ಕರೀನಾ ಕತ್ತು ಹಿಸುಕಿ ಅನುಜ್ ಕೊಲೆ ಮಾಡಿದ್ದ. ಪತ್ನಿಯನ್ನು ಕೊಂದು ಒಂದೂವರೆ ವರ್ಷದ ಮಗನನ್ನು ಕೊಂದು ಶವವನ್ನು ಪೊದೆಗಳಲ್ಲಿ ಎಸೆದಿದ್ದ. ಇಬ್ಬರನ್ನೂ ಕೊಂದ ನಂತರ ಆರೋಪಿ ಅನುಜ್ ತನ್ನ ಗ್ರಾಮಕ್ಕೆ ತೆರಳಿದ್ದ. ಅಲ್ಲಿ ಕರೀನಾ ತಾಯಿ ಕರೀನಾ ಬಗ್ಗೆ ಕೇಳಿದಾಗ ಆರೋಪಿ ಉತ್ತರಿಸಿರಲಿಲ್ಲ. ಪದೇ ಪದೇ ಕೇಳಿದರೂ ಯಾವುದೇ ಮಾಹಿತಿ ನೀಡಿರಲಿಲ್ಲ .
ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಶುಭಂ ತಾಯಲ್ ಎಂಬುವವರು ಆರ್ಯನಗರ ಗ್ರಾಮದಲ್ಲಿ ನೆಲಗಡಲೆ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಬಿಹಾರದ ನಿವಾಸಿ ಅನುಜ್ ಕುಮಾರ್ ಎಂಬಾತ ಪತ್ನಿ ಕರೀನಾ ಮತ್ತು ಪುಟ್ಟ ಮಗುವಿನೊಂದಿಗೆ ವಾಸಿಸುತ್ತಿದ್ದ. ಸುಮಾರು ಎರಡೂವರೆ ತಿಂಗಳ ಹಿಂದೆ ಅನೋಜ್ ರಾತ್ರಿ ವೇಳೆ ಕಾರ್ಖಾನೆಗೆ ಬೀಗ ಹಾಕಿ ಓಡಿ ಹೋಗಿದ್ದ.
ಬೈದಿದ್ದಕ್ಕೆ ಅಪ್ಪನ ಮರ್ಮಾಂಗಕ್ಕೆ ಹೊಡೆದು ಕೊಂದ ಮಗ!
ನಾವು ಕಾರ್ಖಾನೆಯಲ್ಲಿ ಕಡಲೆಕಾಯಿ ಸಿಪ್ಪೆಗಳನ್ನು ಇಟ್ಟಿದ್ದೇವೆ. ಅದರಲ್ಲಿ ನಾವು ಕೆಲಸ ಮಾಡುವುದನ್ನು ನಿಲ್ಲಿಸಿದ್ದೇವು. ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನೌಕರರಾದ ರಾಹುಲ್ ಮತ್ತು ಸುಮಿತ್ ಕಡಲೆ ಸಿಪ್ಪೆಯನ್ನು ಚೀಲಗಳಲ್ಲಿ ತುಂಬುತ್ತಿದ್ದರು. ಆ ಸಮಯದಲ್ಲಿ ಮಹಿಳೆಯ ಅಸ್ಥಿಪಂಜರವು ಸಿಪ್ಪೆಯ ಅಡಿಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 18 ರಂದು ಆಜಾದ್ ನಗರ ಠಾಣೆ ಪೊಲೀಸರು ಮಹಿಳೆಯ ಅಸ್ಥಿಪಂಜರವನ್ನು ಸಿವಿಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ದಿದ್ದಾರೆ. ಅನೋಜ್ ತನ್ನ ಪತ್ನಿ ಕರೀನಾಳನ್ನು ಕೊಂದು ಶವವನ್ನು ಈ ಸಿಪ್ಪೆಗಳ ಮಧ್ಯೆ ಹೂತು ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿತ್ತು. ಬಳಿಕೆ ವಿಚಾರಣೆ ವೇಳೆ ಆರೋಪಿ ಬಾಯಿ ಬಿಟ್ಟಿದ್ದು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಪೊಲೀಸರು ಅನೋಜ್ ವಿರುದ್ಧ ಕೊಲೆ ಮಾಡಿ ಶವವನ್ನು ಹೂತಿಟ್ಟ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
