*  ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ನಡೆದ ಘಟನೆ*  ಚಾಕುವಿನಿಂದ ಇರಿದು ಪತ್ನಿಯ ಹತ್ಯೆಗೈದ ಪತಿ *  ಆರೋಪಿ ಪತಿ ಮಹಿಬೂಬ್ ಪಾಶಾ ಪೊಲೀಸರ ವಶಕ್ಕೆ   

ಚಿತ್ರದುರ್ಗ(ಸೆ.11): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನೇ ಪತಿ ಹತ್ಯೆಗೈದ ಘಟನೆ ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ನಿನ್ನೆ(ಶುಕ್ರವಾರ) ರಾತ್ರಿ ನಡೆದಿದೆ. ನಗರದ ಬಡಾಮಖಾನ್ ಬಡಾವಣೆಯ ಅಮೀನಾ(30) ಕೊಲೆಗೀಡಾದ ದುರ್ದೈವಿಯಾಗಿದ್ದಾಳೆ. ಮಹಿಬೂಬ್ ಪಾಶಾ ಎಂಬುವುನೇ ಪತ್ನಿಯನ್ನ ಕೊಲೆಗೈದ ಪಾಪಿ ಪತಿಯಾಗಿದ್ದಾನೆ. 

ಶುಕ್ರವಾರ ಚಳ್ಳಕೆರೆ ಬಳಿಯ ದರ್ಗಾಕ್ಕೆ ಪತ್ನಿಯನ್ನ ಸ್ಕೂಟಿಯಲ್ಲಿ ಕರೆದೊಯ್ದಿದ್ದ ಆರೋಪಿ. ವಾಪಸ್ ಬರುವಾಗ ಸ್ಕೂಟಿ ಚಾಲನೆ ವೇಳೆಯೇ ಪತ್ನಿ ಅಮೀನಾಗೆ ಚಾಕುವಿನಿಂದ ಇರಿದಿದ್ದಾನೆ. ಹೀಗಾಗಿ ತೀವ್ರ ರಕ್ತಸ್ರಾವವಾಗಿ ಅಮೀನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. 

ಬೆಂಗಳೂರು; ರೌಡಿ ಗೆಳೆಯನ ಜತೆ ಅಕ್ರಮ ಸಂಬಂಧಕ್ಕಾಗಿ ಮಗನ ಹತ್ಯೆ ಮಾಡಿದ ಹೆತ್ತವ್ವ!

ಈ ಸಂಬಂಧ ಆರೋಪಿ ಪತಿ ಮಹಿಬೂಬ್ ಪಾಶಾನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಡಾವಣೆ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.